ಚಂಡಿಗಡ್​:ಕರೊನಾ ಬಂದ ಮೇಲೆ ಪ್ರತಿಯೊಬ್ಬರೂ ಇಮ್ಯೂನಿಟಿ ಹೆಚ್ಚಿಸುವ ಹಣ್ಣು, ತರಕಾರಿ, ಕಷಾಯಗಳ ಮೊರೆ ಹೋಗುತ್ತಿದ್ದಾರೆ.
ಹಾಗೇ ಪಂಜಾಬ್​ನ ಹಾಲು ಉತ್ಪಾದಕರ ಸಂಘವೂ ಕೂಡ ಈಗ ರೋಗನಿರೋಧಕ ಶಕ್ತಿ ಉತ್ತೇಜಕ ಹಾಲನ್ನು ಪರಿಚಯಿಸಿದ್ದು, ಅದನ್ನು ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಇಂದು ಬಿಡುಗಡೆ ಮಾಡಿದ್ದಾರೆ.
ಪಂಜಾಬ್​ನ ಹಾಲು ಉತ್ಪಾದಕರ ಸಂಘ ತಯಾರಿಸುವ ವೆರ್ಕಾ ಶಕ್ತಿ ಹಾಲಿನ ಜತೆ ಇದೀಗ ವೆರ್ಕಾ ಹಳದಿ ಅಥವಾ ಅರಿಶಿಣ ಯುಕ್ತ ಹಾಲಿನ ಪೊಟ್ಟಣವೂ ಸೇರಿಕೊಂಡಿದ್ದು, ಜನರು ಇದನ್ನು ಖರೀದಿಸಿ ಉಪಯೋಗಿಸಬಹುದಾಗಿದೆ.ಇಂದು ವೆರ್ಕಾ ಹಳದಿಯನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಲನ್ನು ಕೊಂಡು ಉಪಯೋಗಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್​ ಗಾಂಧಿ ನಿರ್ಧಾರವೊಂದೇ ಬಾಕಿ
ಈ ಬಗ್ಗೆ ಮಾತನಾಡಿದ ಸಹಕಾರ ಸಚಿವ ಸುಖ್ಜಿಂದರ್​ ಸಿಂಗ್ ರಾಂಧವ ಅವರು, ಪಟಿಯಾಲಾದಲ್ಲಿರುವ ಪಂಜಾಬ್​ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಅಭಿವೃದ್ಧಿ ಪಡಿಸಲಾದ ಮತ್ತು ಪೇಟೆಂಟ್​ ಪಡೆದ ವಿಶಿಷ್ಟವಾದ ಹಲ್ದಿ (ಅರಿಶಿಣ) ಹಾಲು ಇದು. ಇಲ್ಲಿ ಬಳಸಲಾದ ಅರಿಶಿಣ ಸಾಮಾನ್ಯ ಅರಿಶಿಣಕ್ಕಿಂತ 10 ಪಟ್ಟು ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದ್ದಾರೆ.
ಪಂಜಾಬ್​ನ ಎಲ್ಲ ವೆರ್ಕಾ ಹಾಲಿನ ಬೂತ್​ಗಳು ಹಾಗೂ ಪ್ರಮುಖ ಮಳಿಗೆಗಳಲ್ಲಿ ಈ ಹಲ್ದಿ ಹಾಲು ಸಿಗಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಈದ್ಗಾ ಮೈದಾನದಲ್ಲಿ ಬೇಡ…ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ: ತೆಲಂಗಾಣ ವಕ್ಫ್​ ಮಂಡಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × three =
Remember me
