ಜಲಂಧರ್:ಜಲಂಧರ್‌ನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇನ್‌ಸ್ಟಾಗ್ರಾಮ್ ಇನ್​​​ಫ್ಲುಯೆನ್ಸರ್​​​​​ ಪಾಯಲ್ SHO ಅವರ ಕಾರಿನ ಬಾನೆಟ್ ಮೇಲೆ ಕುಳಿತು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಶೀಘ್ರದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಯುವತಿ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್ ಇನ್​​​ಫ್ಲುಯೆನ್ಸರ್​​​​​ ಸ್ಪಷ್ಟನೆ ನೀಡುತ್ತಾ, ನನ್ನ ಸ್ನೇಹಿತನ ಜನ್ಮದಿನ ಮತ್ತು ಹುಟ್ಟುಹಬ್ಬವನ್ನು ಆಚರಿಸಲು ನಾವೆಲ್ಲರೂ ಅಲ್ಲಿ ಸೇರಿದ್ದೆವು. ಅಲ್ಲಿ ಎಸ್‌ಎಚ್‌ಒ ಸರ್ ಕೂಡ ಇದ್ದರು. ನಾನು ಅದನ್ನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ವಿಡಿಯೋ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕ್ಷಮೆಯಾಚಿಸಿದ ಇನ್​​​ಫ್ಲುಯೆನ್ಸರ್​​​​​ ಪಾಯಲ್ಪಾಯಲ್, ನಾನು ಸಾಮಾನ್ಯ ವಿಡಿಯೋ ಮಾಡಿದ್ದೇನೆ. ಇದು ಇಷ್ಟು ದೊಡ್ಡ ವಿಷಯ ಆಗುತ್ತೆ ಅಂತ ಗೊತ್ತಿರಲಿಲ್ಲ. ಇದು ಅಷ್ಟು ದೊಡ್ಡ ವಿಷಯವಲ್ಲದಿದ್ದರೂ ಮಾಧ್ಯಮದವರು ಅದನ್ನು ತುಂಬಾ ವೈರಲ್ ಮಾಡಿದ್ದಾರೆ ಎಂದು ಹೇಳಿದರು. ಜನರು ಈ ಸಾಮಾನ್ಯ ವಿಡಿಯೋವನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗಿ ಎಲ್ಲ ರೀತಿಯ ಆರೋಪಗಳನ್ನು ಮಾಡುತ್ತಿರುವುದು ತಪ್ಪು. ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತೇನೆ ಎಂದು ಪಾಯಲ್ ಹೇಳಿದ್ದಾರೆ.
ಈ ವೈರಲ್ ವಿಡಿಯೋದ ಕಥೆ ಏನು?ಸೆಪ್ಟೆಂಬರ್ 28 ರ ರಾತ್ರಿ, ಜಲಂಧರ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್ ಇನ್​​​ಫ್ಲುಯೆನ್ಸರ್​​​​​ ಪಾಯಲ್ ಜಲಂಧರ್ ವಿಭಾಗ ನಂ.4 ಎಸ್‌ಎಚ್‌ಒ ಅಶೋಕ್ ಕುಮಾರ್ ಶರ್ಮಾ ಅವರ ಕಾರಿನ ಬಾನೆಟ್ ಮೇಲೆ ಕುಳಿತು ರೀಲ್ಸ್​​​​ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.ಪಾಯಲ್ ‘ಶೇರ್ ದಿ ಶೆರ್ನಿ ಹೂಂ ಕಿಸಿ ಸೇ ದರ್ ಕೆ ನಹಿ ರೆಹನಾ’ ಹಾಡಿಗೆ ನೃತ್ಯ ಮಾಡಿದರು. ಅಷ್ಟೇ ಅಲ್ಲ, ವಿಡಿಯೋದಲ್ಲಿ ತನ್ನನ್ನು ತಾನು ಸಿಂಹಿಣಿ ಎಂದು ಕರೆದುಕೊಂಡರು. ಇದಾದ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪಂಜಾಬ್ ಪೊಲೀಸರನ್ನು ಟೀಕಿಸಲು ಆರಂಭಿಸಿದಾಗ ಯುವತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಜನರು ಟೀಕಿಸಿದ್ದಾರೆ.

A post shared by True Scoop (@truescoop)
SHO ಅಮಾನತುಸಾಮಾಜಿಕ ಮಾಧ್ಯಮದಲ್ಲಿ ಗಲಾಟೆಯಾದ ನಂತರ, ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಚಾಹಲ್ ತಕ್ಷಣ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಿದರು. ಸರ್ಕಾರಿ ವಾಹನದಲ್ಲಿ ವಿಡಿಯೋ ಮಾಡಲು ಯುವತಿಗೆ ಅನುಮತಿ ನೀಡಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ.
ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಆರಾಧ್ಯ ಬಚ್ಚನ್; ವೈರಲ್ ಆದ ಫೋಟೋಗಳು

Sign in to your account
Please enter an answer in digits:four − one =
Remember me
