ಚಂಡೀಗಡ:ಪಂಜಾಬ್​ನ ಕೀರತ್​ಪುರದಲ್ಲಿ ರೈತ ನಾಯಕರು ಇಂದು ಬಾಲಿವುಡ್​ ನಟಿ ಕಂಗನಾ ರಣಾವತ್​ ಕಾರನ್ನು ಸುತ್ತುವರೆದು ಘೋಷಣೆಗಳನ್ನು ಕೂಗಿದರು. ಘೇರಾವ್​ ಮಾಡಿದ ದೊಡ್ಡ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರವುದಕ್ಕಾಗಿ ಪೊಲೀಸ್​ ಸಿಬ್ಬಂದಿ ಶ್ರಮಿಸಬೇಕಾಯಿತು ಎಂದು ವರದಿ ತಿಳಿಸಿದೆ.
Punjab | Farmers stopped actor Kangana Ranaut’s car near Ropar & protested against her over her statements on farmers protest
"If the police personnel were not present here, lynching would've happened, shame on these people," says Kangana Ranautpic.twitter.com/Rd37EQfpfT
— ANI (@ANI)December 3, 2021

ಚಂಡೀಗಡ-ಉನ ಹೈವೇನಲ್ಲಿ ರೋಪರ್​ ನಗರದ ಬಂಗಾ ಸಾಹಿಬ್​, ಕೀರತ್​ಪುರ್​ ಸಾಹಿಬ್ ಬಳಿ ಈ ಘಟನೆ ನಡೆಯಿತು ಎಂದು ಕಂಗನಾ ಆರೋಪಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗಿವೆ. ರೈತ ಮುಖಂಡ ರಾಕೇಶ್ ತಿಕಾಯತ್​ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಘಟನೆಯ ವಿವರ ತಿಳಿದ ನಂತರವೇ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಹೆಚ್ಚಿದ ಒಮಿಕ್ರಾನ್​ ಆತಂಕ: ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಜನ ನಾಪತ್ತೆ!
ತಮ್ಮ ವಿವಾದಾತ್ಮಕ ಸೋಷಿಯಲ್ ಮೀಡಿಯ ಪೋಸ್ಟ್​ಗಳಿಗೆ ಹೆಸರಾಗಿರುವ ಕಂಗನಾ, ರೈತರ ಪ್ರತಿಭಟನೆಯ ಬಗ್ಗೆ ಮಾಡಿದ ಇನ್​ಸ್ಟಾಗ್ರಾಂ ಪೋಸ್ಟ್​ ಹಿನ್ನೆಲೆಯಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಳೆದ ಮಂಗಳವಾರ ಎಫ್​ಐಆರ್​ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ಒಮಿಕ್ರಾನ್​​ ತಡೆಗೆ ಸರ್ಕಾರ ಸಜ್ಜು; ರಾಜ್ಯದಲ್ಲಿ ಜಾರಿಯಾಗುವ ಹೊಸ ನಿಯಮಗಳಿವು

ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
