ರೋಪರ್ (ಪಂಜಾಬ್​):ಒಂದೇ ಒಂದು ಸಂಶಯ ಮನುಷ್ಯರನ್ನು ಎಷ್ಟು ಕ್ರೂರಿಯನ್ನಾಗಿ ಮಾಡುತ್ತದೆ ಎನ್ನುವುದಕ್ಕೆ ಪಂಜಾಬ್​ ರೋಪರ್ ಜಿಲ್ಲೆಯ ಮೊರಿಂಡಾ ಪಟ್ಟಣದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಪತ್ನಿಯ ಮೇಲೆ ಸಂದೇಹ ಪಟ್ಟುಕೊಂಡಿದ್ದ 30 ವರ್ಷದ ಯುವಕನೊಬ್ಬ ತನ್ನ ಪತ್ನಿ ಮಾತ್ರವಲ್ಲದೇ, ಆಕೆಯ ಇಡೀ ಕುಟುಂಬದವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈತನ ಈ ಬರ್ಬರ ಕೃತ್ಯಕ್ಕೆ ಪತ್ನಿ ಕಾಜಲ್​ ಮತ್ತು 12 ವರ್ಷದ ಬಾಲಕ ಬಲಿಯಾಗಿದ್ದು, ಉಳಿದವರು ಜೀವನ್ಮರಣಗಳ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹಾವಿನೊಡನೆ ಮಂಗನ ಕಬಡ್ಡಿ ಆಟ; ಗೆದ್ದಿದ್ದು ಮಾತ್ರ ಇವರೇ…!
ಈ ಕೃತ್ಯ ಎಸಗಿದವನ ಹೆಸರು ಆಲಂ ಜೋಗಿ. ಈತ ತನ್ನ ಪತ್ನಿ, ಅತ್ತಿಗೆ, ಅತ್ತೆ ಮತ್ತು ಅವರ ಇಬ್ಬರು ಸೋದರಳಿಯರು ಸೇರಿದಂತೆ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ಈ ಕೃತ್ಯ ಎಸಗಿದ್ದಾನೆ.
ಈತನಿಗೆ ತನ್ನ ಪತ್ನಿಯ ಮೇಲೆ ಶೀಲದ ಮೇಲೆ ಸದಾ ಶಂಕೆ. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾನೆ. ಆ ನಂತರ ವಿಷ ಸೇವಿಸಿ ಪೊಲೀಸ್​ ಠಾಣೆಗೆ ಶರಣಾಗಿದ್ದಾನೆ.
ಎರಡು ವರ್ಷಗಳ ಹಿಂದೆ ಕಾಜಲ್​ ಜತೆ ಮದುವೆಯಾಗಿದ್ದ ಆಲಂ, ನಂತರ ತನ್ನ ಅತ್ತೆಯ ಮನೆಯಲ್ಲಿಯೇ ವಾಸವಾಗಿದ್ದ. ಹೆಂಡತಿಯ ಅಕ್ಕ ವಿದೇಶಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಅವರ ಇಬ್ಬರು ಮಕ್ಕಳು ಅದೇ ಮನೆಯಲ್ಲಿ ನೆಲೆಸಿದ್ದರು. ಆ ಪೈಕಿ 12 ವರ್ಷದ ಬಾಲಕ ಆಲಂನಿಂದ ಕೊಲೆಯಾಗಿದ್ದು, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ:ಹೆದ್ದಾರಿಗಾಗಿ ಸಂಪರ್ಕ ರಸ್ತೆ ಬಂದ್ ಮಾಡಿದ್ದಕ್ಕೆ ಕಾಮಗಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ
ಆಲಂನ ಅತ್ತೆ ಬಬ್ಲಿ ಇನ್ನೊಂದು ಕೊಠಡಿಯಲ್ಲಿ ಮಲಗಿದ್ದರು. ಮಕ್ಕಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅವರ ಮೇಲೂ ಆಲಂ ಹಲ್ಲೆ ನಡೆಸಲು ಮುಂದಾಗಿದ್ದು, ಅವರು ಹೇಗೋ ತಪ್ಪಿಸಿಕೊಂಡಿದ್ದಾರೆ. ಅಳಿಯನ ಆಕ್ರೋಶದಿಂದ ದಿಗಿಲುಗೊಂಡ ಅವರು, ಕೂಡಲೇ ಅಲ್ಲಿಯೇ ಇದ್ದ ಆತನ 10 ತಿಂಗಳ ಶಿಶುವನ್ನು ಎತ್ತಿಕೊಂಡು ಬೇರೊಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಈ ಕಾರಣದಿಂದ ಮಗುವಿನ ಪ್ರಾಣ ಉಳಿದಿದೆ.
ಮಗುವಿಗೆ ಎರಡೆರಡು ಬಾಯಿ, ಎರಡೂ ಬಾಯಲ್ಲೂ ಹಲ್ಲು, ನಾಲಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 5 =
Remember me
