ಲುಧಿಯಾನಾ:ಕರೊನಾ ವೈರಸ್​ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ. ಆದರೆ ಸಂಬಂಧಗಳಲ್ಲೂ ಅಂತರ ಸೃಷ್ಟಿಸುತ್ತಿದೆಯಾ ಈ ವೈರಸ್​. ವೈರಸ್​​ನಿಂದ ಯಾರಾದರು ಸತ್ತರೂ ಅವರ ಕುಟುಂಬದವರು ಬಂದು ಅಂತ್ಯಕ್ರಿಯೆ ನಡೆಸಲಾಗುತ್ತಿಲ್ಲ. ಕೊನೇ ಕ್ಷಣದಲ್ಲೂ ಮುಖ ನೋಡಲು ಸಾಧ್ಯವಾಗುತ್ತಿಲ್ಲ. ಕೊವಿಡ್​ನಿಂದ ಆಸ್ಪತ್ರೆಗೆ ದಾಖಲಾದರೆ ಅಂಥವರ ಕುಟುಂಬದವರು ಹತ್ತಿರವೂ ಸುಳಿಯಲಾಗುವುದಿಲ್ಲ.
ಈಗ ಪಂಜಾಬ್​ನಲ್ಲಿ ಒಂದು ಘಟನೆ ನಡೆದಿದೆ. ಕರೊನಾ ವೈರಸ್​ನಿಂದ ಸಾವನ್ನಪ್ಪಿದ ತಾಯಿಯ ಮೃತದೇಹವನ್ನು ತೆಗೆದುಕೊಳ್ಳಲು ಮಗ ಒಪ್ಪಲೇ ಇಲ್ಲ. ಇದರಿಂದಾಗಿ ಜಿಲ್ಲಾಡಳಿತವೇ ಅವರ ಅಂತಿಮ ಸಂಸ್ಕಾರ ಮಾಡಬೇಕಾಯಿತು.ಲುಧಿಯಾನಾದಲ್ಲಿ 69 ವರ್ಷದ ವೃದ್ಧೆಯೋರ್ವರು ಕರೊನಾ ವೈರಸ್​ನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಅವರ ಪುತ್ರನ ಬಳಿ ಮೃತದೇಹ ಕೊಂಡೊಯ್ದು, ಅಂತ್ಯ ಸಂಸ್ಕಾರ ಮಾಡುವಂತೆ ಹೇಳಿದ್ದಾರೆ. ಆದರೆ ಆತ ಸುತಾರಾಂ ಒಪ್ಪಲಿಲ್ಲ.
ಅಂತ್ಯಕ್ರಿಯೆ ನಡೆಸಲು ಅಗತ್ಯ ಸುರಕ್ಷಾ ಸಾಧನಗಳನ್ನು ನೀಡುತ್ತೇವೆ. ಅದನ್ನು ಧರಿಸಿಕೊಂಡೇ ಅಂತಿಮ ವಿಧಿವಿಧಾನ ನಡೆಸಿ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಜಿಲ್ಲಾಡಳಿತವೂ ಆತನ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಪುತ್ರ ಮಾತ್ರ ಯಾವ ಕಾರಣಕ್ಕೂ ತಾಯಿಯ ಮೃತದೇಹ ಪಡೆಯುವುದಿಲ್ಲ ಎಂದು ಬಿಟ್ಟ. ತನಗೂ ಸೋಂಕು ತಗುಲಬಹುದು ಎಂಬ ಭಯದಿಂದಲೇ ನಿರಾಕರಿಸಿದ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಕ್ಬಾಲ್​ ಸಿಂಗ್​ ಸಂಧು ತಿಳಿಸಿದ್ದಾರೆ.
ಈ ವೃದ್ಧೆ ಮಾ.31ರಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಭಾನುವಾರ ಮೃತಪಟ್ಟಿದ್ದಾರೆ. ತಾಯಿಯ ಮೃತದೇಹ ಪಡೆಯಲು ಮಗ ಬಾರದೆ ಇರುವುದು ವೈದ್ಯಕೀಯ ಸಿಬ್ಬಂದಿ, ಜಿಲ್ಲಾಡಳಿತ, ಅವರ ಸಂಬಂಧಿಕರಿಗೆಲ್ಲ ದೊಡ್ಡ ಶಾಕ್​ ನೀಡಿದೆ. ಬಳಿಕ ಅನಿವಾರ್ಯವಾಗಿ ಜಿಲ್ಲಾಡಳಿತವೇ ಅಂತಿಮ ಸಂಸ್ಕಾರ ನಡೆಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
