ಚಂಡೀಗಢ:ತನ್ನ ಓದಿಗೆ ಸರಿ ಸಮಾನವಾದ ಕೆಲಸ ಸಿಗಲಿಲ್ಲ ಅಂತ ಚಿಂತಿಸುವವರ ನಡುವೆ, ಇಲ್ಲೊಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಒಂದು ಪಿಎಚ್‌ಡಿಯನ್ನು ಹೊಂದಿದ್ದರೂ ತಮ್ಮ ಜೀವನ ನಿರ್ವಹಣೆಗಾಗಿ ತರಕಾರಿ ಮಾರುವ ಮೂಲಕ, ಯಾವ ಕೆಲಸವೂ ಕೀಳಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.
39 ವರ್ಷದ ಡಾ. ಸಂದೀಪ್ ಸಿಂಗ್ ಅವರು ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದರು. ಆದರೆ, ಜೀವನದಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳಿಂದಾಗಿ ಕೆಲಸವನ್ನು ತೊರೆಯಬೇಕಾಯಿತು. ಆದರೆ, ಜೀವನ ಸಾಗಬೇಕಲ್ಲ, ಅದಕ್ಕಾಗಿ ಹಣ ಸಂಪಾದಿಸಲು ತರಕಾರಿಗಳನ್ನು ಮಾರಾಟ ಮಾಡುತ್ತಾ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ.
ಡಾ. ಸಂದೀಪ್ ಸಿಂಗ್, ಪಂಜಾಬಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ 11 ವರ್ಷಗಳ ಕಾಲ ಅತಿಥಿ ಪ್ರಾಧ್ಯಾಪಕರಾಗಿದ್ದರು. ಕಾನೂನಿನಲ್ಲಿ ಪಿಎಚ್‌ಡಿ ಮಾಡಿರುವ ಸಂದೀಪ್​, ಪಂಜಾಬಿ, ಪತ್ರಿಕೋದ್ಯಮ, ರಾಜಕೀಯ ಹಾಗೂ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಈಗಲೂ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಸಂಬಳ ಕಡಿತ ಮತ್ತು ಅನಿಯಮಿತ ವೇತನದಂತಹ ಅಡೆತಡೆಗಳನ್ನು ಎದುರಿಸಿದ ಬಳಿಕ ಸಂದೀಪ್​ ತಮ್ಮ ಕೆಲಸವನ್ನು ತೊರೆದರು. ಸಮಯಕ್ಕೆ ಸಂಬಳ ಸಿಗದ ಕಾರಣ ನಾನು ಕೆಲಸ ಬಿಡಬೇಕಾಯಿತು ಮತ್ತು ಆಗಾಗ ಸಂಬಳವೂ ಕಡಿತವಾಗುತ್ತಿತ್ತು. ಆ ಕೆಲಸದಿಂದ ಜೀವನ ನಡೆಸುವುದು ನನಗೆ ಕಷ್ಟವಾಯಿತು. ಅದಕ್ಕಾಗಿಯೇ ನನ್ನ ಮತ್ತು ನನ್ನ ಕುಟುಂಬದ ಉಳಿವಿಗಾಗಿ ತರಕಾರಿ ಮಾರಾಟ ಮಾಡಲು ಆರಂಭಿಸಿದೆ ಎಂದು ಸಂದೀಪ್​ ಹೇಳಿದರು.
ತನ್ನ ತರಕಾರಿ ಬಂಡಿಯಲ್ಲಿ “ಪಿಎಚ್‌ಡಿ ಸಬ್ಜಿ ವಾಲಾ” ಎಂಬ ಬೋರ್ಡ್‌ನೊಂದಿಗೆ, ಡಾ. ಸಂದೀಪ್ ಸಿಂಗ್ ಪ್ರತಿದಿನ ತರಕಾರಿ ಮಾರಲು ಮನೆ ಮನೆಗೆ ತೆರಳುತ್ತಾರೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಪೂರ್ಣ ದಿನದ ಕೆಲಸದ ನಂತರ ಮನೆಗೆ ಹಿಂದಿರುಗುವ ಸಂದೀಪ್​, ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ.
ಅಧ್ಯಾಪಕನಾಗಿ ಬೋಧನೆಗೆ ಬ್ರೇಕ್ ಹಾಕಿದ್ದರು ಕೂಡ ಡಾ.ಸಂದೀಪ್ ಸಿಂಗ್ ತಮ್ಮ ಉತ್ಸಾಹವನ್ನು ಕಳೆದುಕೊಂಡಿಲ್ಲ. ಹಣ ಉಳಿಸಿ ಮುಂದೊಂದು ದಿನ ಸ್ವಂತ ಟ್ಯೂಷನ್ ಸೆಂಟರ್ ತೆರೆಯುವ ಹಂಬಲ ಅವರದ್ದಾಗಿದೆ.(ಏಜೆನ್ಸೀಸ್​)
ರಾಜ್ಯದ ಪಾಲಿಗೆ 2023 ನಿರಾಶಾದಾಯಕ ‘ವರ್ಷ’: ಕೈಕೊಟ್ಟ ಮುಂಗಾರು, ಹಿಂಗಾರು

ಹೊಸ ವರ್ಷಕ್ಕೆ ಮದ್ಯ ಕಿಕ್: ಎರಡು ದಿನದಲ್ಲಿ 6.40 ಲಕ್ಷ ಬಾಕ್ಸ್ ಐಎಂಎಲ್ ಸೇಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 5 =
Remember me
