ಚಂಡೀಗಢ:ಬ್ಲಾಕ್​ ಫಂಗಸ್​ ನಂತರ ಇದೀಗ ಪಂಜಾಬ್​ನಲ್ಲಿ ಗ್ರೀನ್ ಫಂಗಸ್ ಕೂಡ ದೃಢವಾಗಿದೆ. ಕರೊನಾದಿಂದ ಗುಣಮುಖವಾಗಿರುವ 62 ವರ್ಷದ ವ್ಯಕ್ತಿಯಲ್ಲಿ ಗ್ರೀನ್​ ಫಂಗಸ್ ಕಾಣಿಸಿಕೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.
ಅಮೃತಸರ ಮೂಲದ ವ್ಯಕ್ತಿ ಇತ್ತೀಚೆಗೆ ಕರೊನಾದಿಂದ ಗುಣಮುಖರಾಗಿದ್ದರು. ಮತ್ತೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇಕ್ರೆಡ್ ಹಾರ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪರೀಕ್ಷೆ ಮಾಡಿದಾಗ, ಗ್ರೀನ್​ ಫಂಗಸ್​ ಇರುವುದು ಶನಿವಾರ ದೃಢವಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ಗ್ರೀನ್​ ಫಂಗಸ್​ ಪ್ರಕರಣವೊಂದು ರಾಜ್ಯದಲ್ಲಿ ಪತ್ತೆಯಾಗಿತ್ತು. ಆದರೆ ಅದು ದೃಢವಾಗಿರಲಿಲ್ಲ. ಇದೀಗ ಮೊದಲನೇ ಪ್ರಕರಣ ದೃಢವಾಗಿದೆ. ಬ್ಲಾಕ್​ ಫಂಗಸ್​ನ ಸಮಸ್ಯೆ ಬಗರಹರಿಯುವ ಮೊದಲೇ ಗ್ರೀನ್ ಫಂಗಸ್​ ಬಂದಿರುವುದು ಅಘಾತಕಾರಿಯಾಗಿದೆ ಎಂದು ಜಲಂಧರ್ ಸಿವಿಲ್ ಆಸ್ಪತ್ರೆಯ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಪರಮವೀರ್ ಸಿಂಗ್ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಪಾಲಕರಿಗೆ ಕೇಂದ್ರದ ಮಾರ್ಗಸೂಚಿ: ಮನೆಯಲ್ಲಿ ಧನಾತ್ಮಕ ಕಲಿಕಾ ಪರಿಸರ ನಿರ್ಮಾಣ

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 5 =
Remember me
