ಪಂಜಾಬ್:ಬುಧವಾರ ಮಧ್ಯರಾತ್ರಿಯ ನಂತರ ಸುನಮ್-ಮೆಹ್ಲಾನ್ ರಸ್ತೆಯಲ್ಲಿ ತೈಲ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಮಾರುತಿ ಕಾರಿನಲ್ಲಿ ಮಾಲೆರ್‌ಕೊಟ್ಲಾಗೆ ಪೂಜೆ ಸಲ್ಲಿಸಲು ಹೋಗಿದ್ದು, ಹಿಂತಿರುಗುವಾಗ ಸುನಮ್ ಬಳಿ ಅಪಘಾತ ಸಂಭವಿಸಿದೆ.ಮೃತರ ಪೈಕಿ 5 ವರ್ಷದ ಬಾಲಕ ಕೂಡ ಇದ್ದನು. ಮೃತರ ದೇಹಗಳನ್ನು ಸಿವಿಲ್ ಆಸ್ಪತ್ರೆ ಸಂಗ್ರೂರ್ಗೆ ಕಳುಹಿಸಲಾಗಿದೆ.
ಸುನಮ್‌ ನಿವಾಸಿಗಳಾದ ಇವರುಮಾರುತಿ ಕಾರಿನಲ್ಲಿ ಮಾಲೆರ್‌ಕೊಟ್ಲಾಗೆ ಪೂಜೆ ಸಲ್ಲಿಸಲು ಹೋಗಿದ್ದರು. ಹಿಂತಿರುಗುವಾಗ ಸುನಮ್ ಬಳಿ ಅಪಘಾತ ಸಂಭವಿಸಿದೆ.
ಮೃತರಲ್ಲಿ ವಿಜಯ್ ಕುಮಾರ್ (50), ದಿವೇಶ್ ಕುಮಾರ್( 33) ದೀಪಕ್ ಜಿಂದಾಲ್ (32) ಕೃಷ್ಣ ಕುಮಾರ್, ನೀರಜ್ ಸಿಂಗ್ಲಾ ಮತ್ತು ಓರ್ವ ಬಾಲಕ ಸೇರಿದ್ದಾನೆ. ಮಾಲೆರ್‌ಕೊಟ್ಲಾ ಪೀರ್‌ನ ದರ್ಗಾಕ್ಕೆ ಪೂಜೆ ಸಲ್ಲಿಸಲು ಎಲ್ಲಾ ವ್ಯಕ್ತಿಗಳು ರಾತ್ರಿ ಸುನಮ್‌ನಿಂದ ಮಾರುತಿ ಕಾರಿನಲ್ಲಿ ಹೋಗಿದ್ದರು.
ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವುತಡರಾತ್ರಿ ಹಿಂತಿರುಗುತ್ತಿದ್ದಾಗ ಮೆಹ್ಲಾನ್ ಬಳಿ ಮಾರುತಿ ಕಾರು ಎರಡು ಟ್ಯಾಂಕರ್‌ಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಹೊರತೆಗೆಯಲು ಮಾರುತಿ ಕಾರನ್ನು ಕಟ್ಟರ್‌ನಿಂದ ಕತ್ತರಿಸಬೇಕಾಯಿತು. ಮೃತರೆಲ್ಲರೂ ಸುನಮ್​​​ನ ವಿವಿಧ ಕುಟುಂಬಗಳಿಗೆ ಸೇರಿದವರು.
ವಾರಕ್ಕೆ 70 ಗಂಟೆ ದುಡಿಮೆ: ಕಲಾಂ, ಅಮಿತಾಭ್​, ರತನ್​ ಟಾಟಾ, ಕೊಹ್ಲಿ ಉದಾಹರಣೆ ಕೊಟ್ಟು ಸುನೀಲ್​ ಶೆಟ್ಟಿ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + five =
Remember me
