ನವದೆಹಲಿ:ಬಿಜೆಪಿ ನಾಯಕ ತೇಜಿಂದರ್​ಪಾಲ್​ ಸಿಂಗ್​ ಬಗ್ಗಾ ಅವರನ್ನು ಪಂಜಾಬ್​ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದರು. ದೆಹಲಿಯ ಜನಕಪುರಿಯಲ್ಲಿರುವ ಬಗ್ಗಾ ಅವರ ನಿವಾಸದಲ್ಲಿ ನಡೆದ ಈ ಬಂಧನ ಪಂಜಾಬ್​, ದೆಹಲಿ, ಹರಿಯಾಣ ಪೊಲೀಸರ ನಡುವೆ ಹೈಡ್ರಾಮಾಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಎಎಪಿ ನಾಯಕರ ನಡುವೆ ರಾಜಕೀಯ ವಾಕ್ಸಮರಕ್ಕೂ ವೇದಿಕೆ ಒದಗಿಸಿತು. ಆದರೆ, ರಾಜಕೀಯ ಹಗೆತನದ ನಡೆಸಿದ ಕ್ರಮ ಅಲ್ಲ ಎಂದು ಪಂಜಾಬ್​ ಪೊಲೀಸರು ಹೇಳಿದ್ದಾರೆ.
ಬೆಳಗ್ಗೆ 8.30ಕ್ಕೆ 50 ಪೊಲೀಸರ ತಂಡ, ಬಗ್ಗಾಗೆ ಟರ್ಬನ್​ ತೊಡುವುದಕ್ಕೂ ಅವಕಾಶ ನೀಡದೆ ಬಂಧಿಸಿತು ಎಂದು ಬಗ್ಗಾ ತಂದೆ ಪ್ರೀತ್​ಪಾಲ್​ ಸಿಂಗ್​ ಹೇಳಿದ್ದಾರೆ. ಪೊಲೀಸರು ಮನೆಯೊಳಗೆ ನುಗ್ಗಿ ಬಗ್ಗಾನನ್ನು ಹಿಡಿದೆಳೆದು ಒಯ್ದಿದ್ದಾರೆ. ಈ ವಿದ್ಯಮಾನವನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಲು ಹೊರಾಟ ನನ್ನನ್ನು ಪಕ್ಕದ ಕೊಠಡಿಗೆ ಕೂಡಿ ಹಾಕಿ ಮುಖಕ್ಕೆ ಗುದ್ದಿದರು ಎಂದು ಬಿಜೆಪಿ ಮುಖಂಡ ನವೀನ್​ ಕುಮಾರ್​ ಆರೋಪಿಸಿದ್ದಾರೆ.
ಪಂಜಾಬ್​ ಪೊಲೀಸರು ಬಗ್ಗಾ ಅವರನ್ನು ಮೊಹಾಲಿಗೆ ಕರೆದೊಯ್ಯುವ ವೇಳೆ ಹರಿಯಾಣ ಪೊಲೀಸರ ತಂಡ ಕುರುಕ್ಷೇತ್ರದಲ್ಲಿ ಅವರನ್ನು ತಡೆಯಿತು. ದೆಹಲಿ ಪೊಲೀಸರ ತಂಡ ಕೂಡ ಅಲ್ಲಿಗೆ ತಲುಪಿದ್ದಲ್ಲದೆ, ಮಾಹಿತಿ ಇಲ್ಲದೆ ಬಗ್ಗಾ ಅವರನ್ನು ಬಂಧಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಹರಿಯಾಣ ಪೋಲಿಸ್​ ಇಲಾಖೆಗೆ ಪಂಜಾಬ್​ ಪೊಲೀಸರು ಪತ್ರ ಬರೆದಿರುವುದು ಖಚಿತವಾದ ಬಳಿಕ, ಹರಿಯಾಣ ಪೊಲೀಸರು ಸುಮ್ಮನಾದರು. ಬಳಿಕ ದೆಹಲಿ ಪೊಲೀಸರು ಕೂಡ ಬಗ್ಗಾ ಅವರನ್ನು ಪಂಜಾಬ್​ ಪೊಲೀಸರಿಗೆ ಬಿಟ್ಟುಕೊಟ್ಟರು. ನಂತರ ದೆಹಲಿ ಪೊಲೀಸರು ಬಗ್ಗಾರನ್ನು ತಮ್ಮ ವಶಕ್ಕೆ ಪಡೆದು ಈಗ ದೆಹಲಿಗೆ ಕರೆತಂದಿದ್ದಾರೆ. ಆದರೆ, ಪಂಜಾಬ್​ ಪೊಲೀಸರು, ಬಗ್ಗಾ ಅವರನ್ನು ಹರಿಯಾಣ ಪೊಲೀಸರ ವಶಕ್ಕೆ ನೀಡಬೇಕು ಎಂದು ಮಾಡಿದ ಮನವಿಯನ್ನು ದೆಹಲಿ ಕೋರ್ಟ್​ ತಳ್ಳಿಹಾಕಿದೆ. ಈ ಮಧ್ಯೆ, ಬಗ್ಗಾ ಅವರನ್ನು ಅಪಹರಣ ಮಾಡಲಾಗಿದೆ ಎಂದು ಬಗ್ಗಾ ತಂದೆ ನೀಡಿದ ದೂರಿನ ಮೇಲೆ ದೆಹಲಿಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಏನಿದು ಕೇಸ್​?:ದಿ ಕಶ್ಮೀರ್​ ಫೈಲ್ಸ್​ ಸಿನಿಮಾಕ್ಕೆ ಸಂಬಂಧಿಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ನಿವಾಸದ ಎದುರು ಮಾ.30ರಂದು ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿದ ವೇಳೆ ತೇಜಿಂದರ್​ಪಾಲ್​ ಸಿಂಗ್​ ಬಗ್ಗಾ ಅಲ್ಲಿದ್ದರು. ಅಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಮೊಹಾಲಿಯಲ್ಲಿ ಏ.1ರಂದು ಪೊಲೀಸ್​ ಕೇಸ್​ ದಾಖಲಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
