ಚಂಡೀಗಢ:ಕಾಂಗ್ರೆಸ್​​ನ ಹಿರಿಯ ಶಾಸಕ ಚರಣಜೀತ್​ ಸಿಂಗ್ ಚನ್ನಿ ಅವರು ಇಂದು ಪಂಜಾಬ್​ನ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಚಂಡೀಗಢದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಬನ್​ವಾರಿಲಾಲ್ ಪುರೋಹಿತ್​ ಅವರು ಚನ್ನಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು.
ಸಿಎಂ ಹುದ್ದೆ ಏರಿರುವ ಮೊದಲ ದಲಿತ ಸಿಖ್​ ಸಮುದಾಯದವರೆಂಬ ಹೆಗ್ಗಳಿಕೆ ಗಳಿಸಿರುವ 58 ವರ್ಷ ವಯಸ್ಸಿನ ಚನ್ನಿ, ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ, ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿ ಹರೀಶ್ ರಾವತ್ ಮತ್ತು ಪಿಪಿಸಿಸಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಸಮಾರಂಭದಲ್ಲಿ ಭಾಗವಹಿಸಿದರು. ನಿಕಟಪೂರ್ವ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.
ಇದನ್ನೂ ಓದಿ:ಬಿಜೆಪಿ ನಾಯಕನಿಗೆ ಐದು ಡೋಸ್‌ ಕರೊನಾ ಲಸಿಕೆ! ಕೋಲಾಹಲ ಸೃಷ್ಟಿಸಿದ ಪ್ರಮಾಣಪತ್ರ
ರಾಜ್ಯದ ರೂಪ್​ನಗರದ ಚಮ್​ಕೌರ್​ ಸಾಹಿಬ್​​ನಿಂದ ಮೂರನೇ ಬಾರಿ ಶಾಸಕರಾಗಿರುವ ಚರಣ್​ಜೀತ್​ ಸಿಂಗ್​​ ಚನ್ನಿ, ಕ್ಯಾಪ್ಟನ್​ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟು ಒಂಭತ್ತೂವರೆ ವರ್ಷಗಳ ಕಾಲ ಪಂಜಾಬ್​ ಸಿಎಂ ಆಗಿದ್ದ ಕ್ಯಾಪ್ಟನ್​ ವಿರುದ್ಧ ದನಿಯೆತ್ತಿದವರಲ್ಲಿ ಚನ್ನಿ ಕೂಡ ಒಬ್ಬರು.
ಇಬ್ಬರು ಉಪಮುಖ್ಯಮಂತ್ರಿಗಳು:ಇದೇ ಸಂದರ್ಭದಲ್ಲಿ, ಸಿಎಂ ಉಮೇದುವಾರರಾಗಿದ್ದ ಹಿರಿಯ ಶಾಸಕ ಸುಖ್​ಜಿಂದರ್​ ಸಿಂಗ್​ ರಾಂಧವ ಮತ್ತು ಮತ್ತೊಬ್ಬ ಶಾಸಕರಾದ ಓ.ಪಿ.ಸೋನಿ ಅವರು ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದರು. ರಾಂಧವ ಮತ್ತು ಸೋನಿ ಅವರನ್ನು ರಾಜ್ಯದ ಡೆಪ್ಯುಟಿ ಸಿಎಂಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕಿ ಹಾಗೂ ಮಾಜಿ ಸಿಎಂ ರಾಜಿಂದರ್​ ಕೌರ್ ಭಟ್ಟಲ್​ ಹೇಳಿದ್ದಾರೆ.(ಏಜೆನ್ಸೀಸ್)
‘ಪ್ರತಿಯೊಂದು ರೂಪಾಯಿ ಸರತಿಯಲ್ಲಿ ಕಾಯುತ್ತಿದೆ!’ ಮೌನ ಮುರಿದ ನಟ ಸೋನು ಸೂದ್​, ಐಟಿ ಸಮೀಕ್ಷೆ ಬಗ್ಗೆ ಹೇಳಿದ್ದೇನು?

“ಪ್ರತಿ ಮನೆಗೂ ಉದ್ಯೋಗ ಇಲ್ಲವೇ ತಿಂಗಳಿಗೆ 5,000 ರೂಪಾಯಿ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
