ಭುವನೇಶ್ವರ:ಒಡಿಶಾದ ಸುಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು ಗುರುವಾರ(ಜು.18) ಮತ್ತೊಮ್ಮೆ ಅಧಿಕಾರಿಗಳು ತೆರೆದರು. ಇದರಿಂದಾಗಿ ಬೆಳ್ಳಿ, ಬಂಗಾರ, ವಜ್ರ, ವೈಡೂರ್ಯಗಳಿಂದ ಕೂಡಿದ ಇನ್ನೇನು ಆಭರಣಗಳು ಪತ್ತೆಯಾಗಲಿವೆಯೋ ಎಂಬ ನಿಟ್ಟಿನಲ್ಲಿ ಭಕ್ತರಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ:ಚಿಕನ್​ ಅಂಗಡಿ ಮೇಲೆ ಯುದ್ಧ ಸಾರಿದ ಕಾಗೆಗಳು? ಹೀಗೇಕಾಯ್ತು ಗೊತ್ತಾ?
ದೇವಾಲಯದ ನೆಲಮಾಳಿಗೆಯಲ್ಲಿನ ರತ್ನ ಭಂಡಾರವನ್ನು 46 ವರ್ಷಗಳ ನಂತರ ಜು. 14 ರ ಭಾನುವಾರ ತೆರೆಯಲಾಗಿತ್ತು. ಇದರಲ್ಲಿ 3 ರಹಸ್ಯ ಕೋಣೆಗಳಿದ್ದು, ಮೊದಲನೆಯ ಕೋಣೆಯಲ್ಲಿ ದೇವರ ನಿತ್ಯ ಅಲಂಕಾರಕ್ಕೆ ಬಳಸುವ ಆಭರಣಗಳನ್ನು ಇಡಲಾಗಿದೆ. ಎರಡನೆಯ ಕೋಣೆಯಲ್ಲಿ ಕೇವಲ ಹಬ್ಬ ಹರಿದಿನಗಳಲ್ಲಿ ಬಳಸುವ ಆಭರಣ, ಕಿರೀಟಗಳು, ಮತ್ತು ಇತರ ಚಿನ್ನ ಬೆಳ್ಳಿಯ ಆಭರಣಗಳನ್ನು ಇಡಲಾಗುತ್ತದೆ. ಆದರೆ ಮೂರನೇ ಕೋಣೆ ಅತ್ಯಂತ ನಿಗೂಢವಾಗಿದ್ದು, ಜು.14ರಂದು ಅದರ ಲಾಕರ್‌ಗಳನ್ನು ಅಧಿಕಾರಿಗಳು ತೆರೆದಿದ್ದರು. ಆದರೆ ಸಮಯ ಮೀರಿ ಕತ್ತಲಾಗುತ್ತಿದ್ದಂತೆ ಅಧಿಕಾರಿಗಳು ಕೊಠಡಿಯನ್ನು ಮುಚ್ಚಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 18 ಮತ್ತೊಮ್ಮೆ ಕೊಠಡಿಯ ಬಾಗಿಲು ತೆರೆಯಲಾಗಿದೆ.
ಜು.14ರಂದು ರತ್ನ ಭಂಡಾರದ ಬಾಗಿಲು ತೆರೆದಾಗ ಮೊದಲ ಮತ್ತು ಎರಡನೇ ಚೇಂಬರ್‌ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಅಧಿಕಾರಿಗಳು ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗೆ ಸ್ಥಳಾಂತರಿಸಿದ್ದರು. ಇದನ್ನೆಲ್ಲ 11 ಜನರ ಸಮಿತಿ ಸದಸ್ಯರ ಸಮ್ಮುಖ ವೀಡಿಯೋ ಚಿತ್ರೀಕರಿಸಲಾಗಿದೆ. ಈ ಕೊಠಡಿಗಳಲ್ಲಿ ಇದುವರೆಗೆ ಪಟ್ಟಿಯಲ್ಲಿಲ್ಲದ ಸಣ್ಣ ವಿಗ್ರಹಗಳು ಮತ್ತು ಪಂಚಲೋಹದ ವಿಗ್ರಹಗಳು ಸಹ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಗುರುವಾರ ಬೆಳಗ್ಗೆ 9:51 ಕ್ಕೆ 3ನೇ ಕೋಣೆ ಬಾಗಿಲು ತೆರೆಯಲಾಗಿದೆ. ಇದೇ ಕಾರಣಕ್ಕಾಗಿ ಭಕ್ತರ ಭೇಟಿಯನ್ನು ನಿಷೇಧಿಸಿದ್ದು, ಉದ್ಯೋಗಿಗಳನ್ನು ಮಾತ್ರ ದೇಗುಲದ ಒಳಗೆ ಬಿಡಲಾಗುತ್ತಿದೆ ಎಂದು ಪುರಿ ಕಲೆಕ್ಟರ್ ಸಿದ್ಧಾರ್ಥ್ ಶಂಕರ್ ತಿಳಿಸಿದ್ದಾರೆ.
ವಿವಾದಿತ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ತಾಯಿ ಅರೆಸ್ಟ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven + 17 =
Remember me
