ಭುವನೇಶ್ವರ:ಪುರಿ ಜಗನ್ನಾಥ ದೇವಸ್ಥಾನದಲ್ಲಿರುವ ‘ರತ್ನಭಂಡಾರ’ದೊಳಗಿನ ಕೊಠಡಿಯನ್ನು ಜು. 14ರಂದು ತೆರೆಯುವಂತೆ ಒಡಿಶಾ ಸರ್ಕಾರಕ್ಕೆ ಶಿಫಾರಸು ಮಾಡಲು ಈ ಭಂಡಾರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ. ಕಳೆದ ಬಾರಿ 46 ವರ್ಷಗಳ ಹಿಂದೆ, ಅಂದರೆ 1978ರಲ್ಲಿ ಈ ರತ್ನಭಂಡಾರದ ಬಾಗಿಲನ್ನು ತೆರೆಯಲಾಗಿತ್ತು.
‘ಉನ್ನತ ಮಟ್ಟದ ಸಮಿತಿ ಸಭೆ ಮಂಗಳವಾರ ನಡೆಯಿತು. ಶ್ರೀಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿಯೂ ಈ ಸಮಿತಿ ಸದಸ್ಯರಾಗಿದ್ದಾರೆ. ರತ್ನಭಂಡಾರದ ಕೀಲಿಕೈ ನಕಲು ಮಾಡಿಸಿ ಇಂದಿನ ಸಭೆಯಲ್ಲಿ ನೀಡುವಂತೆ ಅವರಿಗೆ ತಿಳಿಸಲಾಗಿತ್ತು. ಆದರೆ ಅವರು ರಥಯಾತ್ರೆಯಲ್ಲಿ ಬಿಜಿ ಇದ್ದುದರಿಂದ ಕೀಲಿಕೈ ನೀಡಿಲ್ಲ. ಜು. 14ರಂದು ಕೀಲಿಕೈ ಹಾಜರುಪಡಿಸುವಂತೆ ಅವರಿಗೆ ಸೂಚಿಸಲಾಗಿದೆ. ನಕಲಿ ಕೀಲಿಕೈ ಕೆಲಸ ಮಾಡದಿದ್ದರೆ ಕೀಲಿಯನ್ನೇ ಮುರಿದು ಕೊಠಡಿ ತೆರೆಯಲು ತೀರ್ವನಿಸಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ನ್ಯಾ. ಬಿಸ್ವನಾಥ್ ರಥ್ ಸುದ್ದಿಗಾರರಿಗೆ ತಿಳಿಸಿದರು.
‘ಆಭರಣಗಳ ದಾಸ್ತಾನು ನಿರ್ವಹಣೆಗೆ ಮತ್ತು ರತ್ನಭಂಡಾರದ ದುರಸ್ತಿಗೆ ನಿರ್ದಿಷ್ಟ ಮಾರ್ಗಸೂಚಿ ರಚಿಸುವ ಕುರಿತು ಸಭೆಯಲ್ಲಿ ವಿಸõತ ಚರ್ಚೆ ನಡೆಯಿತು. ನಿಯಮಗಳ ಪ್ರಕಾರ, ಸಭೆಯ ನಡಾವಳಿಗಳನ್ನು ದೇವಾಲಯದ ಆಡಳಿತ ಮಂಡಳಿಗೆ ಕಳಿಸಲಾಗುವುದು. ಅದು ಸರ್ಕಾರದ ಒಪ್ಪಿಗೆಗಾಗಿ ಕಳಿಸಲಿದೆ. ಆನಂತರ ರತ್ನಭಂಡಾರವನ್ನು ತೆರೆಯಲಾಗುವುದು’ ಎಂದು ನ್ಯಾ. ರಥ್ ವಿವರಿಸಿದರು.
ಭರವಸೆ ನೀಡಿದ್ದ ಬಿಜೆಪಿ:ದೇವಸ್ಥಾನದ ಖಜಾನೆಯನ್ನು ತೆರೆಯುವ ವಿಷಯ ಒಡಿಶಾದಲ್ಲಿ ಒಂದು ದೊಡ್ಡ ವಿವಾದವಾಗಿ ಮಾರ್ಪಟ್ಟಿದ್ದು ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ಈ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆ ನಡೆದಿದೆ. ತಾನು ಅಧಿಕಾರಕ್ಕೆ ಬಂದರೆ ರತ್ನಭಂಡಾರದಲ್ಲಿ ಅವಶ್ಯವಿರುವ ದುರಸ್ತಿ ಕಾರ್ಯ ಕೈಗೊಳ್ಳುವುದಲ್ಲದೇ ಆಭರಣಗಳ ದಾಸ್ತಾನಿಗೆ ವ್ಯವಸ್ಥಿತ ರೂಪ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಒಡಿಶಾದಲ್ಲಿ ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಭರವಸೆ ಈಡೇರಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ.
ಏನಿದೆ ಈ ಭಂಡಾರದಲ್ಲಿ?:ಹಿಂದಿನ ರಾಜಮಹಾರಾಜರು ಶ್ರೀ ಜಗನ್ನಾಥ ದೇವರಿಗೆ, ದೇವಿ ಸುಭದ್ರೆ ಮತ್ತು ಶ್ರೀ ಬಲಭದ್ರರಿಗೆ ಅರ್ಪಿಸಿದ್ದ ಅಪಾರ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಈ ಕೋಣೆಯಲ್ಲಿವೆ. ಅವುಗಳನ್ನು ಕೊನೆಯ ಬಾರಿ ಅಧಿಕೃತವಾಗಿ ಎಣಿಸಿದ್ದು 46 ವರ್ಷಗಳ ಹಿಂದೆ. ನಂತರ ಈ ಕೋಣೆಯ ಬಾಗಿಲನ್ನೇ ತೆರೆದಿಲ್ಲ. 6 ವರ್ಷಗಳ ಹಿಂದೆ ಕೋಣೆಯ ಕೀಲಿಕೈ ಕಳೆದುಹೋಗಿದೆ ಎಂಬ ಸುದ್ದಿ ಹರಡಿ ತೀವ್ರ ಸಂಚಲನ ಸೃಷ್ಟಿಯಾಗಿತ್ತು. ಈಗ ಅಲ್ಲಿ ಎಷ್ಟು ಆಭರಣಗಳು ಉಳಿದಿವೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಸನ್ನಡತೆ ಆಧಾರದ ಮೇಲೆ 77 ಕೈದಿಗಳ ಬಿಡುಗಡೆ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್ ಆಯ್ಕೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 6 =
Remember me
