ಹೈದರಾಬಾದ್​:ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪಾ-2 ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದ್ದು, ಈಗಾಗಲೇ ನಟ ಅಲ್ಲು ಅರ್ಜುನ್​ ಲುಕ್​ ರಿವೀಲ್​ ಮಾಡಿರುವ ಚಿತ್ರತಂಡ, ಚಿತ್ರದ ಕುರಿತು ಬೇರೆ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ.
ಈ ನಡುವೆ ಪುಷ್ಪಾ-2 ಚಿತ್ರದಲ್ಲಿ ನಟಿಸುತ್ತಿರುವ ನಟಿ ರಶ್ಮಿಕಾಳ ಶ್ರೀವಲ್ಲಿ ಪಾತ್ರವು ಸಾಯಲಿದೆ ಎಂಬ ಚರ್ಚೆಯು ಜೋರಾಗಿದ್ದು, ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಲೀಕ್ ಆಗಿದೆ. ಈ ಫೋಟೋ ಕುರಿತು ಹಲವಾರು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಇದು ಶೂಟಿಂಗ್​​ ಸಮಯದಲ್ಲಿನ ಲೀಕ್ ಚಿತ್ರ ಎಂದು ಭಾವಿಸಿದ್ದಾರೆ.

ಇದನ್ನೂ ಓದಿ:ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ: ಹಲವೆಡೆ ಇಂದಿರಾ ಕ್ಯಾಂಟಿನ್​ಗಳಲ್ಲಿ ಹೋಳಿಗೆ ವಿತರಣೆ
ಆದರೆ ವಾಸ್ತವದಲ್ಲಿ, ಈ ಫೋಟೋ ಪುಷ್ಪಾ-2 ಚಿತ್ರದ್ದಲ್ಲ, ಇದರಲ್ಲಿನ ಮಹಿಳೆ ರಶ್ಮಿಕಾ ಮಂದಣ್ಣ ಅಲ್ಲ ಎಂದು ಹೇಳಲಾಗಿದೆ. 2022ರಲ್ಲಿ ಬಿಡುಗಡೆಯಾದ ಮರಾಠಿ ಚಲನಚಿತ್ರ ‘ನಯ್ ವರನ್ ಭಟ್ ಲೊಂಚಾ ಕೋನ್ ನಯ್ ಕೊಂಚ’ ಚಿತ್ರಕ್ಕೆ ಸಂಬಂಧಿಸಿದ ಫೋಟೋ ಇದಾಗಿದೆ. ನಟಿ ಇಶಾ ದಿವೇಕರ್ ನೋಡಲು ರಶ್ಮಿಕಾ ಮಂದಣ್ಣ ಅವರಂತೆ ಕಾಣುವುದರಿಂದ, ಫ್ಯಾನ್ ಮೇಡ್ ಪೋಸ್ಟರ್​ಗಳು ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
