ಹೈದರಾಬಾದ್​: ಸದ್ಯಕ್ಕೆ ಸದ್ದು ಮಾಡುತ್ತಿರುವ ಪುಷ್ಪ 2 ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಇದರ ಚಿತ್ರೀಕರಣ ಭರದಿಂದ ಸಾಗಿದ್ದು, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ಅನ್ನು ಆಳಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್​ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಟೀಸರ್ ಧೂಳೆಬ್ಬಿಸುತ್ತಿದೆ.
ಇದನ್ನೂ ಓದಿ:‘ಸನ್​ಸ್ಕ್ರೀನ್​​ ಮರೆಯಬೇಡಿ, ತಣ್ಣೀರು ಉತ್ತಮ’ ಇದು ದೀಪಿಕಾ ಸೌಂದರ್ಯದ ಗುಟ್ಟು!
ಟೀಸರ್ ಬಿಡುಗಡೆ ಬಳಿಕ ದಾಖಲೆಗಳ ಬೇಟೆ ನಡೆಯುತ್ತಿದೆ. ಟೀಸರ್‌ನಲ್ಲಿ ಅಲ್ಲು ಅರ್ಜುನ್​ ಗಂಗಮ್ಮ ಜಾತ್ರೆ ಹಿನ್ನೆಲೆಯಲ್ಲಿ ತನ್ನ ವಿಶ್ವರೂಪವನ್ನು ತೋರಿಸಿದ್ದಾಗಿದೆ. ಈ ದೃಶ್ಯ ಸಿನಿಮಾದ ಹೈಲೈಟ್ ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಗಂಗಮ್ಮನ ಜಾತ್ರೆಯಲ್ಲಿ ಕಟ್ಟಿದ್ದ ಸೀರೆ ಯಾರದ್ದು ಎಂಬ ಬಗ್ಗೆ ಕುತೂಹಲ ಮೂಡಿದ್ದು, ಇದೀಗ ಈ ಸೀರೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಅಲ್ಲು ಅರ್ಜುನ್​ ಕಟ್ಟಿದ ಸೀರೆಯಲ್ಲಿ ವಿಶೇಷತೆ ಇದೆ ಎನ್ನಲಾಗುತ್ತದೆ.. ಇದು ತಾಯಿಯ ಸೆಂಟಿಮೆಂಟ್ ಗೆ ಸಂಬಂಧಿಸಿದ್ದು. ಈ ದೃಶ್ಯದಲ್ಲಿ ಐಕಾನ್ ಸ್ಟಾರ್ ಧರಿಸಿರುವ ಸೀರೆ ನಿಜವಾಗಿ ಬನ್ನಿ ತಾಯಿಯದ್ದಾಗಿದೆ. ಇದು ಸೆಂಟಿಮೆಂಟ್ ಆಗಿರುತ್ತದೆ ಎಂದುಕೊಂಡು ನಿರ್ದೇಶಕ ಸುಕುಮಾರ್ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರಂತೆ. ಈ ಹೊಡೆದಾಟದ ದೃಶ್ಯ ಸಿನಿಮಾದಲ್ಲಿ ಹೇಗೆ ಇರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಈ ವರ್ಷ ಆಗಸ್ಟ್ 15 ರಂದು ಪುಷ್ಪ 2 ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರೆ. ರಾವ್ ರಮೇಶ್, ಫಹಾದ್ ಫಾಜಿಲ್, ಅನಸೂಯಾ, ಸುನೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇವಿಶ್ರೀ ಸಂಗೀತ ನಿರ್ದೇಶನವಿದೆ.
ಭಾರತದಿಂದ ಅಗತ್ಯ ವಸ್ತುಗಳ ರಫ್ತು ನಂತರ ತೀವ್ರ ಟೀಕಾಪ್ರಹಾರಕ್ಕೆ ಗುರಿಯಾದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
