|ಕೀರ್ತಿನಾರಾಯಣ ಸಿ.ಬೆಂಗಳೂರು
ಹದಿನೈದು ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದೆ. ಪ್ರಸ್ತುತ 14.3 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಇಂತಹ ವಾಹನಗಳನ್ನು ನಾಶಪಡಿಸಲು ಅಗತ್ಯವಿರುವ ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳನ್ನು (ಆರ್​ವಿಎಸ್​ಪಿ) ಸ್ಥಾಪಿಸಲು ಸಲ್ಲಿಸಿದ್ದ ಕರ್ನಾಟಕ ಗುಜರಿ ನೀತಿ-2022 ಕರಡು ಯೋಜನೆ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಸಾರಿಗೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸಲಿದೆ.
ಹಳೇ ವಾಹನಗಳನ್ನು ಗುಜರಿಗೆ ಹಾಕಿದರೆ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣಪತ್ರ (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣಪತ್ರ ತೋರಿಸಿದರೆ ಸಾರಿಗೇತರ ವಾಹನಕ್ಕೆ ಶೇ.25ರಷ್ಟು, ಸಾರಿಗೆ ವಾಹನಕ್ಕೆ ಶೇ.15ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಲಭ್ಯವಿರುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿಯಂತೆ ದೇಶಾದ್ಯಂತ ಸೂಕ್ತ ನೋಂದಣಿ ಪತ್ರ ಮತ್ತು ಫಿಟ್​ನೆಸ್ ಸರ್ಟಿಫಿಕೇಟ್ ಇಲ್ಲದೆ ಗುಜರಿಗೆ ಹೋಗಲು ಅರ್ಹ ವಾಗಿರುವ 1.2 ಕೋಟಿ ವಾಹನಗಳಿವೆ.
ಈ ಪೈಕಿ ಕರ್ನಾಟಕದಲ್ಲಿ ಅಂದಾಜು 14.3 ಲಕ್ಷ ವಾಹನಗಳು ಗುಜರಿಗೆ ಹೋಗುವಂತಿವೆ. ರಾಜ್ಯದಲ್ಲಿರುವ ಒಟ್ಟಾರೆ ವಾಹನಗಳ ಪೈಕಿ ಶೇ.14ರಷ್ಟು ವಾಹನಗಳು ಈ ವರ್ಗೀಕರಣಕ್ಕೆ ಸೇರುತ್ತವೆ. ಮುಂದಿನ 5 ವರ್ಷದಲ್ಲಿ ಬರೋಬ್ಬರಿ 66 ಲಕ್ಷ ವಾಹನಗಳು 15 ವರ್ಷ ಪೂರೈಸಲಿವೆ ಎಂದು ಕರಡು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.
ಸಾರಿಗೆ ಇಲಾಖೆಯಿಂದ ಅನುಮತಿ ಪಡೆದು ಸ್ಥಾಪಿಸಿದ ಗುಜರಿ ಕೇಂದ್ರಗಳಲ್ಲಿ ಹಳೇ ವಾಹನಗಳನ್ನು ಸ್ಕ್ರಾ್ಯ್ ಮಾಡಲಾಗುತ್ತದೆ. ಆದರೆ, ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್ ಹಿನ್ನೆಲೆ, ಕೇಸ್ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲೀಕ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಕೇಂದ್ರದ ಮಾಲೀಕರು, ಗುಜರಿಗೆ ಹಾಕಿದ ವಾಹನದ ಚಾಸ್ಸಿ ನಂಬರನ್ನು ಜೋಪಾನವಾಗಿ 6 ತಿಂಗಳು ಇಟ್ಟಿರಬೇಕು. ವಾಹನದ ಎಲ್ಲ ಭೌತಿಕ ದಾಖಲೆಗಳನ್ನು 2 ವರ್ಷದವರೆಗೆ ಹಾಗೂ ಸ್ಕಾ್ಯನ್ ದಾಖಲಾತಿಗಳನ್ನು 10 ವರ್ಷಗಳವರೆಗೆ ಸುರಕ್ಷಿತವಾಗಿ ಇಟ್ಟಿರಬೇಕು. ಅಧಿಕಾರಿಗಳು ಪರಿಶೀಲನೆ ಬಂದ ಸಂದರ್ಭದಲ್ಲಿ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಎಟಿಎಸ್​ನಲ್ಲೇ ಎಫ್​ಸಿ ಆಗಬೇಕು:ಎಲ್ಲ ವಾಹನಗಳು ಫಿಟ್​ನೆಸ್ ಸರ್ಟಿಫಿಕೇಟ್ ಹೊಂದಿರುವುದು ಕಡ್ಡಾಯ. ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್​ಗಳಲ್ಲೇ (ಎಟಿಎಸ್) ಎಫ್​ಸಿ ಮಾಡಿಸಬೇಕು. ಆರ್​ಸಿ ನವೀಕರಣದ ಸಂದರ್ಭದಲ್ಲಿ ಎಫ್​ಸಿಯಲ್ಲಿ ಅರ್ಹತೆ ಪಡೆಯದ ಅಥವಾ ಎಟಿಎಸ್​ನಿಂದ ಸರ್ಟಿಫಿಕೇಟ್ ಪಡೆಯದ ಸಾರಿಗೇತರ ಹಾಗೂ ಸಾರಿಗೆ ವಾಹನಗಳನ್ನು ಗುಜರಿಗೆ ಒಪ್ಪಿಸಬೇಕು.
ರಾಜ್ಯದಲ್ಲಿ ಗುಜರಿ ನೀತಿ ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಳೇ ವಾಹನಗಳನ್ನು ನಾಶಪಡಿಸಲು ಅಗತ್ಯವಿರುವಂತಹ ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳನ್ನು (ಆರ್​ವಿಎಸ್​ಪಿ) ಸ್ಥಾಪಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.
|ಎಸ್.ಎನ್.ಸಿದ್ದರಾಮಪ್ಪಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + three =
Remember me
