ನವದೆಹಲಿ:ರೈತ ಪ್ರತಿಭಟನೆಯನ್ನು ಹೈಜಾಕ್ ಮಾಡುವ ಸಮಾಜ ವಿರೋಧಿಗಳನ್ನು ಸರ್ಕಾರವೇನಾದರೂ ಗುರುತಿಸಿದರೆ ಕೂಡಲೇ ಬಂಧಿಸಬೇಕು. ನಮಗೆ ಕಂಡರೆ ಅವರನ್ನು ಕೂಡಲೇ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಪ್ರತಿಭಟನಾನಿರತ ರೈತ ಮುಖಂಡರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್​ನ ರಾಷ್ಟ್ರೀಯ ವಕ್ತಾರ ರಾಕೇಶ್​ ತಿಕೈತ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಗುಪ್ತಚರ ಏಜೆನ್ಸಿಗೆ ಪ್ರತಿಭಟನಾಕಾರರ ನಡುವೆ ಸಮಾಜ ವಿರೋಧಿ ಶಕ್ತಿಗಳು ಕಾಣಿಸಿಕೊಂಡರೆ ಕೂಡಲೇ ಅವರನ್ನು ಬಂಧಿಸುವುದಕ್ಕೆ ಕ್ರಮ ತೆಗೆದುಕೊರ್ಳಳಬೇಕು. ಒಂದೊಮ್ಮೆ ನಿಷೇಧಿತ ಸಂಘಟನೆಗಳ ಸದಸ್ಯರು ನಮ್ಮ ನಡುವೆ ಓಡಾಡುವುದು ಕಂಡರೆ ಅವರನ್ನು ಜೈಲಿಗಟ್ಟಬೇಕು. ನಾವೂ ಅದೇ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರೈತ ಪ್ರತಿಭಟನೆಯ ವೇದಿಕೆ ಮೇಲೆ ಗೋಚರಿಸಿತು ನಕ್ಸಲ್ ಹಿತೈಷಿಗಳ ಬಿಡುಗಡೆಗೆ ಒತ್ತಾಯಿಸಿದ ಬ್ಯಾಕ್​ಡ್ರಾಪ್​ !
ಈ ನಡುವೆ, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿ ಎಡ ಪಕ್ಷ ಬೆಂಬಲಿಗರನ್ನು ಟೀಕಿಸಿದ್ದಾರೆ. ಭಾರತ ನಿಮ್ಮನ್ನು ಗಮನಿಸುತ್ತಿದೆ. ತಮ್ಮದೇ ಅಜೆಂಡಾಕ್ಕೆ ಜನಬೆಂಬಲ ಸಿಗುತ್ತಿಲ್ಲ ಎಂಬುದನ್ನು ಅರಿತ ಎಡಪಂಥೀಯ ಮಾವೋವಾದಿಗಳು ಈಗ ರೈತ ಪ್ರತಿಭಟನೆಯನ್ನೇ ಹೈಜಾಕ್ ಮಾಡಿಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಕೃಷಿ ಸುಧಾರಣೆಯಿಂದ ಕೃಷಿಕರಿಗೇ ಲಾಭ, ಹೆಚ್ಚಿನ ಹೂಡಿಕೆಯಾಗಲಿದೆ – ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 2 =
Remember me
