ನವದೆಹಲಿ:ಹೆಬ್ಬಾವೊಂದು ಇಡೀ ಜಿಂಕೆಯನ್ನು ಕಣ್ಣು ಮಿಟುಕಿಸುವುದರಲ್ಲಿ ಗುಳುಂ ಸ್ವಾಹ ಮಾಡಿದ ವಿಡಿಯೋವನ್ನು ಎಂದಾದರೂ ನೀವು ನೋಡಿದ್ದೀರಾ? ನೋಡಿಲ್ಲವಾದರೆ, ಇತ್ತೀಚೆಗಷ್ಟೇ ವೈರಲ್ ಆದ ವಿಡಿಯೋವೊಂದು ನಿಮಗೆ ಆ ಥ್ರಿಲ್​ ನೀಡಲಿದೆ.
ಬ್ಯೂಟಿಫುಲ್​ ನ್ಯೂ ಪಿಕ್ಸ್​ ಆ್ಯಂಡ್​ ಅನಿಮಲ್​ ಪಿಕ್ಸ್​ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಮಾಡಲಾಗಿದೆ. ದೈತ್ಯ ಹೆಬ್ಬಾವೊಂದು ಸತ್ತ ಜಿಂಕೆಯನ್ನು ಕೇವಲ ಸೆಕೆಂಡ್​ಗಳಲ್ಲಿ ನುಂಗಿರುವ ರೋಚಕ ದೃಶ್ಯ ವಿಡಿಯೋದಲ್ಲಿದೆ.
ಮೊಲ, ಇಲಿಯಂತಹ ಸಣ್ಣ ಪ್ರಾಣಿಗಳನ್ನು ಹಾವುಗಳು ಗುಳುಂ ಸ್ವಾಹ ಮಾಡುವುದು ಸಾಮಾನ್ಯ. ಆದರೆ, ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ನುಂಗುವ ವಿಡಿಯೋಗಳು ಕಾಣಸಿಗುವುದು ತುಂಬಾ ಅಪರೂಪ. ಇದೀಗ ವೈರಲ್​ ಆಗಿರುವ ವಿಡಿಯೋ ನೋಡಿಗರಿಗೆ ರೋಚಕತೆ ಕಟ್ಟಿಕೊಡುವುದಂತೂ ಸತ್ಯವಾಗಿದೆ. ನೆಟ್ಟಿಗರು ಸಹ ವಿಡಿಯೋ ನೋಡಿ ಹುಬ್ಬೇರಿಸಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
ನಾನು ನಿಜವಾಗಿಯೂ ಹಾವುಗಳನ್ನು ದ್ವೇಷಿಸುತ್ತೇನೆ ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬ ನೆಟ್ಟಿಗ ತುಂಬಾ ಭಯಾನಕವಾಗಿದೆ ಎಂದಿದ್ದಾರೆ. ಆದರೆ, ಕೆಲವು ನೆಟ್ಟಿಗರು ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ರಿವರ್ಸ್​ ವರ್ಷನ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ಹೆಬ್ಬಾವು ಅಷ್ಟೊಂದು ವೇಗವಾಗಿ ನುಂಗಿಲ್ಲ. ಅದು ರಿವರ್ಸ್​ ವಿಡಿಯೋ ಆಗಿದೆ. ಬೇಕಿದ್ದರೆ, ಹಾವಿನ ಬಡಿಯುವ ಕೈಗಳನ್ನು ಗಮನಿಸಬಹುದು ಎಂದಿದ್ದಾರೆ.
ಏನೇ ಇರಲಿ ಕೇವಲ ಒಂದು ವಾರದ ಹಿಂದಷ್ಟೇ ಪೋಸ್ಟ್​ ಮಾಡಿರುವು ವಿಡಿಯೋ 27 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಲಕ್ಷಾಂತರ ಜನರು ವೀಕ್ಷಿಸಿ ಹುಬ್ಬೇರಿಸಿದ್ದಾರೆ.(ಏಜೆನ್ಸೀಸ್​)

A post shared by Nature | Travel | adventure (@beautiful_new_pix)

ಗುಜರಾತ್​ ಸೇತುವೆ ದುರಂತ: ಅಷ್ಟೊಂದು ಸಾವು ಸಂಭವಿಸಲು ಕಾರಣ ತಿಳಿಸಿದ NDRF ಮುಖ್ಯಸ್ಥ

ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಕುರಿಗಳ ಹಿಂಡಿನ ಮಧ್ಯೆ ಇರುವ ತೋಳವನ್ನು ಪತ್ತೆ ಹಚ್ಚುವಿರಾ?

VIDEO| ದಣಿದ ಮಾವುತನನ್ನು ಸಂತೈಸಿದ ಆನೆ! ಭಾವನಾತ್ಮಕ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
