ಮುಂಬೈ:ಟೈರ್‌ಗಳನ್ನು ತಯಾರಿಸುವ ಈ ಕಂಪನಿಯು ಭಾರತದಲ್ಲಿನ ಪ್ರಯಾಣಿಕ ವಾಹನಗಳ ಮಾರಾಟ ವಿಭಾಗದಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸುವ ಮೂಲಕ ಲಾಭ ಮಾಡಿಕೊಳ್ಳಲು ಬಯಸುತ್ತಿದೆ.
ಇದೇ ಸಿಯಟ್​ ಲಿಮಿಟೆಡ್​ (CEAT Ltd) ಕಂಪನಿ. ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿಇಒ ಅರ್ಬನ್ ಬ್ಯಾನರ್ಜಿ ಅವರು, ತಮ್ಮ ವಾಹನ ಟೈರ್‌ಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ ಎಂದು ಹೇಳಿದ್ದಾರೆ.
ಕಂಪನಿಯು ಇತ್ತೀಚೆಗೆ ತನ್ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಸೋಮವಾರ ಕಂಪನಿಯ ಷೇರುಗಳು ಶೇಕಡಾ 3.81 ರಷ್ಟು ಕುಸಿದು 2,726 ರೂಪಾಯಿಗೆ ತಲುಪಿದವು. ಮಂಗಳವಾರ ಕೂಡ ಶೇ. 2.78ರಷ್ಟು ಕುಸಿತ ಕಂಡು 2649 ರೂಪಾಯಿ ತಲುಪಿದವು.
ಸಂಸ್ಥೆಯ ಮಾರುಕಟ್ಟೆ ಬಂಡವಾಳ 11,022 ಕೋಟಿ ರೂಪಾಯಿ ಇದೆ. ಈ ಷೇರು ಹೂಡಿಕೆದಾರರಿಗೆ ಇದುವರೆಗೆ 12,608.62% ಆದಾಯವನ್ನು ತಂದುಕೊಟ್ಟಿದೆ.
ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಇನ್ನು 40 ಲಕ್ಷ ಕಾರುಗಳು ರಸ್ತೆಗೆ ಇಳಿಯಲಿದ್ದು, ಟೈರ್‌ಗಳ ಬೇಡಿಕೆಯಲ್ಲಿ ತಕ್ಷಣದ ಏರಿಕೆಗೆ ಕಾರಣವಾಗುತ್ತವೆ ಎಂದು ಬ್ಯಾನರ್ಜಿ ಅಂದಾಜಿಸಿದ್ದಾರೆ.
ಭಾರತದಲ್ಲಿ ಪ್ರಯಾಣಿಕ ವಾಹನ ಮಾರಾಟವು 2023 ರ ವೇಳೆಗೆ 41.08 ಲಕ್ಷ ಯುನಿಟ್‌ಗಳ ದಾಖಲೆಯನ್ನು ಮೀರಿದೆ, 2022 ಕ್ಕೆ ಹೋಲಿಸಿದರೆ ಇದು ಶೇಕಡಾ 8.3 ರಷ್ಟು ಏರಿಕೆಯಾಗಿದೆ.
ಮುಂಬರುವ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಪ್ರಯಾಣಿಕ ವಾಹನ, ಟ್ರಕ್ ಮತ್ತು ಬಸ್ ರೇಡಿಯಲ್ (TBR) ಟೈರ್​ಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಕಂಪನಿಯು ಯೋಜಿಸುತ್ತಿದೆ.ಕಂಪನಿಯು ತನ್ನ ಜಾಗತಿಕ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ.
CEAT ನ ತೆರಿಗೆಗಳ ನಂತರದ ಲಾಭಗಳು (PAT) ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 181.48 ಕೋಟಿ ರೂಪಾಯಿಗಳಿಗೆ ಏರಿಕೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚು ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕಗಳಲ್ಲಿ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಿಂದಾಗಿ ಕಂಪನಿಯು ಒತ್ತಡವನ್ನು ಅನುಭವಿಸಿತ್ತು.
ಕಾರ್ಯಾಚರಣೆಗಳಿಂದ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ 8.6 ಪ್ರತಿಶತದಷ್ಟು ಹೆಚ್ಚಿ 2,963.14 ಕೋಟಿ ರೂಪಾಯಿಗೆ ತಲುಪಿದೆ.
ಕಳೆದ ವರ್ಷದಲ್ಲಿ ಈ ಕಂಪನಿಯ ಷೇರುಗಳಲ್ಲಿ ಹೂಡಿಕೆದಾರರು 88 ಪ್ರತಿಶತದಷ್ಟು ಉತ್ತಮ ಲಾಭವನ್ನು ಪಡೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಶೇಕಡಾ 158 ರಷ್ಟು ಏರಿಕೆಯಾಗಿದೆ.
ಆರ್​ಪಿಜಿ ಎಂಟರ್‌ಪ್ರೈಸಸ್‌ನ ಪ್ರಮುಖ ಕಂಪನಿಯಾದ CEAT ಅನ್ನು 1958 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ, CEAT ಭಾರತದಲ್ಲಿ ಅಗ್ರ ಟೈರ್ ತಯಾರಕರಲ್ಲಿ ಒಂದಾಗಿದೆ.
ಸಿಇಎಟಿಯ ಪ್ರಧಾನ ಕಚೇರಿ ಮುಂಬೈನಲ್ಲಿದೆ. CEAT ಆರು ಆಧುನಿಕ ತಂತ್ರಜ್ಞಾನ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. ಗುಜರಾತ್‌ನ ಹಲೋಲ್ ಮತ್ತು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರಗಳನ್ನು ಸ್ಥಾಪಿಸುತ್ತಿದೆ.
ಇದು 3-4 ವೀಲರ್‌ಗಳು ಮತ್ತು ಪ್ಯಾಸೆಂಜರ್ ಮತ್ತು ಯುಟಿಲಿಟಿ ವೆಹಿಕಲ್ಸ್, ಕಮರ್ಷಿಯಲ್ ವೆಹಿಕಲ್ಸ್ ಮತ್ತು ಆಫ್ ಹೈವೇ ವೆಹಿಕಲ್ಸ್ ಸೇರಿದಂತೆ ವಿವಿಧ ವಿಭಾಗಗಳಿಗೆ ಸೇವೆ ಸಲ್ಲಿಸುತ್ತದೆ.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 18 =
Remember me
