ಬ್ರೆಸಿಲ್:ಜೂಲಿಯಾನಾ ನೆಹ್ಮೆ ಎಂಬ ಬ್ರೆಜಿಲ್ ಮಾಡೆಲ್ ಒಬ್ಬರು ಖತಾರ್ ಏರ್​​ವೇಸ್​​ನಲ್ಲಿ ಬೈರುತ್, ಲೆಬನಾನ್ ಮಾರ್ಗವಾಗಿ ದೋಹಾಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ ಕಳೆದ ನವೆಂಬರ್ 22ರಂದು ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಆಗಿದ್ದೇ ಬೇರೆ. ಇನ್ನೇನು ತಾನು ಬುಕ್ ಮಾಡಿದ್ದ ಎಕಾನಮಿ ಕ್ಲಾಸ್​​ ಟಿಕೆಟ್​​ನಲ್ಲಿ ಕಾದಿರಿಸಿದ ಸೀಟ್​​ಗೆ ತೆರಳಬೇಕು ಎನ್ನುವಷ್ಟರಲ್ಲಿ ಖತಾರ್​ ಏರ್​ವೇಸ್​ನ ಸಿಬ್ಬಂದಿ ತಡೆದಿದ್ದಾರೆ. ನಂತರ ನೀವು ತುಂಬಾ ದಪ್ಪಗಿದ್ದೀರಾ. ಹೀಗಾಗಿ ನಿಮಗೆ ಎಕಾನಮಿ ಕ್ಲಾಸ್​​ನ ಸೀಟುಗಳಲ್ಲಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ತೂಕ ಹೆಚ್ಚಿದ ಎಂಬ ಕಾರಣಕ್ಕೆ ಖತಾರ್ ಏರ್​​ವೇಸ್ ಸಿಬ್ಬಂದಿ ಎಕಾನಮಿ ಕ್ಲಾಸ್​​ನಲ್ಲಿ ಪ್ರಯಾಣಿಸಲು ಅವಕಾಶ ನೀಡಿಲ್ಲ. ಬಿಸಿನೆಸ್ ಕ್ಲಾಸ್ ಟಿಕೆಟ್ ಖರೀದಿಸಿದರೆ ಮಾತ್ರ ವಿಮಾನದಲ್ಲಿ ತೆರಳಬಹುದು ಎಂದು ಸಿಬ್ಬಂದಿ ಹೇಳಿದರು. ಇದಕ್ಕಾಗಿ ಹೆಚ್ಚುವರಿ $1000 (8000 ರೂ.) ಪಾವತಿಸಿ ಟಿಕೆಟ್​​ ವರ್ಗಾಯಿಸಿಕೊಳ್ಳಬೇಕಾಗಿತ್ತು ಎಂದು ಮಾಡೆಲ್ ಜೂಲಿಯಾನಾ ನೆಹ್ಮೆ ನಡೆದ ವೃತ್ತಾಂತವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯಿಂದ ನನಗೆ ದೋಹಾ ತಲುಪಲು ಸಾಧ್ಯವಾಗಿಲ್ಲ. ಕೊನೆಗೆ ಖತಾರ್ ಏರ್​​ವೇಸ್ ಸಂಸ್ಥೆ ಟಿಕೆಟ್​​ನ ಮೊತ್ತವನ್ನೂ ಹಿಂತಿರುಗಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ತೂಕ ಹೆಚ್ಚಿರುವ ಕಾರಣದಿಂದ ವಿಮಾನ ಪ್ರಯಾಣಕ್ಕೆ ಅವಕಾಶ ನೀಡದೇ ಇರುವುದರಿಂದ ನನಗೆ ಮಾನಸಿಕವಾಗಿ ಆಘಾತ ಉಂಟಾಗಿದೆ. ಅತೀ ದೊಡ್ಡ ವಿಮಾನಯಾನ ಸಂಸ್ಥೆಯೊಂದು ತೂಕದ ಕಾರಣ ನೀಡಿ ಅವಮಾನಿಸಿದೆ ಎಂದು ಹೇಳಿಕೊಂಡಿದ್ದಾರೆ.
ಇಂಡಿಪೆಂಡೆಂಟ್ ಪ್ರಕಾರ, ಬ್ರೆಜಿಲಿಯನ್ ಮಾಡೆಲ್ ಜೂಲಿಯಾನಾ ನೆಹ್ಮೆ, 38, ನವೆಂಬರ್ 22 ರಂದು ಸಂಭವಿಸಿದ ಘಟನೆಯಲ್ಲಿ ತನ್ನ ತೂಕದ ಕಾರಣದಿಂದ ವಿಮಾನಯಾನ ಸಂಸ್ಥೆಯು ತಾರತಮ್ಯ ಎಸಗಿದೆ ಎಂದು ಆರೋಪ ಮಾಡಿ ಜೂಲಿಯಾನ ನೆಹ್ಮೆ ಕೋರ್ಟ್​ ಮೆಟ್ಟಿಲೇರಿದ್ದಾರೆ. ಇದೀಗ ಈ ಪ್ರಕರಣವನ್ನು ಪರಿಶೀಲಿಸಿದ ಕೋರ್ಟ್​​ ನೆಹ್ಮಾಗೆ ಮಾನಸಿಕ ಚಿಕಿತ್ಸೆಯ ವೆಚ್ಚ 3 ಲಕ್ಷ ರೂ. ಮೊತ್ತವನ್ನು ಖತಾರ್ ಏರ್​ವೇಸ್ ಸಂಸ್ಥೆ ಭರಿಸಬೇಕು ಎಂದು ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
