ನವದೆಹಲಿ: ಭಾರತದ ಯೂನಿವರ್ಸಿಟಿಗಳ ಎರಡನೇ ಆವೃತ್ತಿಯ ಕ್ಯೂಸ್ ವರ್ಲ್ಡ್ ರಾಂಕಿಂಗ್ ಪ್ರಕಟವಾಗಿದ್ದು, 107 ಯೂನಿವರ್ಸಿಟಿಗಳನ್ನು ರಾಂಕಿಂಗ್​ಗೆ ಪರಿಗಣಿಸಲಾಗಿತ್ತು. ಈ ಎಲ್ಲ ಯೂನಿವರ್ಸಿಟಿಗಳು ಕಳೆದ ವರ್ಷವೂ ಪರಿಗಣಿಸಲ್ಪಟ್ಟವು. 2021ರ ಸಾಲಿನ ಗ್ಲೋಬಲ್ ರಾಂಕಿಂಗ್​ನಲ್ಲಿ ಭಾರತದ ಮಟ್ಟಿಗೆ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಮೊದಲ ಸ್ಥಾನದಲ್ಲಿದೆ.
ಕ್ಯೂಎಸ್​ ಇಂಡಿಯಾ ಯೂನಿವರ್ಸಿಟಿ ರಾಂಕಿಂಗ್ ಅನ್ನು ಶೈಕ್ಷಣಿಕ ಘನತೆ, ಉದ್ಯೋಗದಾತರ ಘನತೆ, ಬೋಧಕವರ್ಗ/ವಿದ್ಯಾರ್ಥಿವರ್ಗದ ಅನುಪಾತ, ಪಿಎಚ್​ಡಿ ಆಗಿರುವ ಸಿಬ್ಬಂದಿ, ಪೇಪರ್ಸ್ ಪರ್ ಫ್ಯಾಕಲ್ಟಿ, ಸೈಟೇಶನ್ ಪರ್ ಪೇಪರ್​, ಅಂತಾರಾಷ್ಟ್ರೀಯ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೆಂಬ ಎಂಟು ಮಾನದಂಡದ ಪ್ರಕಾರ ರೂಪಿಸಲಾಗುತ್ತದೆ.
ಇದನ್ನೂ ಓದಿ:ಇಸ್ರೋ ಸೌಲಭ್ಯಗಳನ್ನು ಶೀಘ್ರವೇ ಖಾಸಗಿಯವರೂ ಬಳಸಬಹುದು- ಸುಳಿವು ನೀಡಿದ್ರು ಕೇಂದ್ರ ಸಚಿವ
ಒಟ್ಟಾರೆಯಾಗಿ ಭಾರತದ ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು 1,000 ರಾಂಕ್​ಗಳ ವರ್ಲ್ಡ್​ ರಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕ್ಯೂಎಸ್​ ವರ್ಲ್ಡ್​ ಯೂನಿವರ್ಸಿಟಿ ರಾಂಕಿಂಗ್ಸ್ ಪ್ರಕಾರ, ಭಾರತದ ಬೆಸ್ಟ್ ರಿಸರ್ಚ್​ ಯೂನಿವರ್ಸಿಟಿ ಬೆಂಗಳೂರಿನ ಐಐಎಸ್​ಸಿ. ಇದು ಸೈಟೇಷನ್ ಪರ್ ಫ್ಯಾಕಲ್ಟಿ ಮಾನದಂಡದಲ್ಲಿ ಶೇಕಡ 100/100 ಅಂಕ ಪಡೆದಿದೆ.
ಐಐಟಿ ಬಾಂಬೆ, ಐಐಎಸ್​ಸಿ ಬೆಂಗಳೂರು, ಐಐಟಿ ದೆಹಲಿ ಟಾಪ್ 100ರ ಪಟ್ಟಿಯಲ್ಲಿದ್ದರೆ, ಇತರೆ ಐಐಟಿಗಳು ಟಾಪ್ 500ರ ಪಟ್ಟಿಯಲ್ಲಿವೆ. ಐಐಟಿ ಮದ್ರಾಸ್​ 275, ಐಐಟಿ ಖರಗಪುರ 314, ಕಾನ್ಪುರ 350, ರೂರ್ಕಿ 383, ಗುವಾಹಟಿ 470 ನೇ ಸ್ಥಾನದಲ್ಲಿವೆ. (ಏಜೆನ್ಸೀಸ್)
VIDEO: ಅಸ್ಸಾಂನ ತೈಲ ಬಾವಿಯಿಂದ ಹೊಮ್ಮುತ್ತಿದೆ ಜ್ವಾಲೆ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಬಲಿ

Sign in to your account
Please enter an answer in digits:17 − 13 =
Remember me
