ಜಮ್ಮು:ಕರೊನಾ ಸೋಂಕಿತರು, ಶಂಕಿತರು ಹಲವು ದಿನಗಳ ಕಾಲ ಎಲ್ಲಿಯೂ ಹೊರ ಹೋಗದೇ ಒಂದೇ ಕಡೆ ಕುಳಿತಿರುವುದು ಎಂದರೆ ಹಲವರಿಗೆ ಇದು ನುಂಗಲಾಗದ ತುತ್ತು. ಆದರೂ ಸುರಕ್ಷತೆಯ ದೃಷ್ಟಿಯಿಂದ ಇದು ಅನಿವಾರ್ಯ.
ಅದೇ ಕಾರಣಕ್ಕೆ ಹಲವಾರು ಕಡೆಗಳಲ್ಲಿ ಕ್ವಾರಂಟೈನ್​ ಕೇಂದ್ರಗಳಲ್ಲಿ ಹೊಸ ಹೊಸ ಬಗೆಯ ಆವಿಷ್ಕಾರಗಳು ನಡೆಯುತ್ತಲೇ ಇವೆ. ನೃತ್ಯ, ಸಂಗೀತ, ವಿವಿಧ ಬಗೆಯ ಆಟೋಟಗಳು ಮೂಲಕ ಕ್ವಾರಂಟೈನ್​ ವಾಸಿಗಳು ಸಮಯ ಕಳೆಯುತ್ತಿದ್ದಾರೆ.
ಅಂಥದ್ದೇ ಒಂದು ಹೊಸ ಪ್ರಯೋಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇದು ನಿಖರವಾಗಿ ಎಲ್ಲಿಯ ಕ್ವಾರಂಟೈನ್‌ ಸೆಂಟರ್‌ ಎಂಬ ಮಾಹಿತಿ ಇಲ್ಲವಾದರೂ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರ ಎಂದು ಹೇಳಲಾಗುತ್ತಿದೆ.
ಇದನ್ನೂ ನೋಡಿ:ಭಗವದ್ಗೀತೆ, ಕರ್ಮಯೋಗದ ಮಹತ್ವ ಹೇಳಿಕೊಡುತ್ತಿದ್ದಾರೆ ಅಮೆರಿಕ ಸಂಸದೆ
ಇಲ್ಲಿರುವ ವಾಸಿಗಳು ಕ್ರಿಕೆಟ್​ ಆಡುತ್ತಿದ್ದು, ಅದೀಗ ಕ್ವಾರಂಟೈನ್​ ಕ್ರಿಕೆಟ್​ ಎಂದೇ ಪ್ರಸಿದ್ಧಿ ಪಡೆದಿದೆ.
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ಮುಖಂಡ ಓಮರ್ ಅಬ್ದುಲ್ಲಾ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ ಸೇರಿದಂತೆ ಹಲವರು ಈ ವಿಡಿಯೊ ಶೇರ್‌ ಮಾಡಿಕೊಂಡಿರುವ ಕಾರಣ, ಇದು ಅಲ್ಲಿಯ ಕ್ವಾರಂಟೈನ್​ ಕೇಂದ್ರದ್ದು ಎಂದು ಅಂದಾಜಿಸಲಾಗಿದೆ.
People ask me often; “what is it about India that I love so much” Need I say any more?https://t.co/QSsQfJOqIlpic.twitter.com/QdzIviTxMT
— Jonty Rhodes (@JontyRhodes8)June 10, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 13 =
Remember me
