ದೇಶಾದ್ಯಂತಲಾಕ್​ಡೌನ್​ ಘೋಷಿಸಿದ ಪರಿಣಾಮ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದವರೆಂದರೆ ಅಸಂಘಟಿತ ವಲಯದ ಕಾರ್ಮಿಕರು. ಅತ್ತ ಕೆಲಸವೂ ಇಲ್ಲದೇ, ಇತ್ತ ಊಟಕ್ಕೂ ಇಲ್ಲದೇ ಪರದಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಟ್ಟಡ ಕಾರ್ಮಿಕರ ಸ್ಥಿತಿಯಂತೂ ಹೇಳತೀರದು. ಮೊದಲೇ ಮೂಲಸೌಕರ್ಯಗಳಿಲ್ಲದ ಸ್ಥಳದಲ್ಲಿ ಕೆಲಸ ನಂಬಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದವರು ಈಗ ಸುರಕ್ಷತಾ ಕ್ರಮಗಳಿಲ್ಲದೇ ಅಲ್ಲಿರುವಂತೆಯೂ ಇಲ್ಲ.
ಇನ್ನು ದೊಡ್ಡ ಮಾಲ್​ಗಳು, ಬಟ್ಟೆಯಂಗಡಿ, ರೆಸ್ಟೋರಂಟ್ ಮೊದಲಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದವರೂ ಕೂಡ ಅತಂತ್ರರಾಗಿದ್ದಾರೆ. ಮಹಾನಗರಗಳಲ್ಲಿ ಬದುಕು ಕಂಡುಕೊಂಡವರು ಆಘಾತಕ್ಕೊಳಗಾಗಿದ್ದಾರೆ. ಹೀಗಾಗಿ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಆದರೆ, ಈಗ ಕೇಂದ್ರ ಸರ್ಕಾರ ಇದಕ್ಕೂ ದಿಗ್ಬಂಧನ ವಿಧಿಸಿದೆ.
ಹೌದು…. ತಾವಿರುವ ಸ್ಥಳಗಳಿಂದ ಮನೆಗಳತ್ತ ತೆರಳುತ್ತಿರುವ ವಲಸೆ ಕಾರ್ಮಿಕರನ್ನು ತಡೆದು 14 ದಿನಗಳವರೆಗೆ ಕ್ವಾರಂಟೈನ್​ಗೆ ಒಳಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ದೇಶಾದ್ಯಂತ ಲಾಕ್​ಡೌನ್​ ವಿಧಿಸಿದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಜನರು ಸಂಚರಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ರಾಜ್ಯಗಳು ಕಟ್ಟುನಿಟ್ಟಾಗಿ ಗಡಿ ಪ್ರದೇಶದ ರಸ್ತೆಗಳನ್ನು ಬಂದ್​ ಮಾಡಬೇಕು ಎಂದು ಭಾನುವಾರ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್​ ಗೌಡ ರಾಜ್ಯದ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ಸಬೆ ನಡೆಸಿದ ಅವರು, ವಲಸೆ ಕಾರ್ಮಿಕರು ಕರೊನಾ ಸೋಂಕುಗಳಿಂದ ಮುಕ್ತರಾಗಿದ್ದಾರೆ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು.. ಹೀಗಾಗಿ ಅವರನ್ನು ರಾಜ್ಯಗಳಲ್ಲಿರುವ ಕ್ವಾರಂಟೈನ್​ ವ್ಯವಸ್ಥೆಗಳಲ್ಲಿ ಇರಿಸಬೇಕು ಎಂದು ಸೂಚಿಸಿದ್ದಾರೆ.
ಊರುಗಳಿಗೆ ಹೋಗುತ್ತಿರುವ ಕಾರ್ಮಿಕರನ್ನು ತಡೆಯಲು ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ, ಪೊಲೀಸ್​ ವರಿಷ್ಠಾಧಿಕಾರಿಗಳೇ ಹೊಣೆ: ಕೇಂದ್ರವು ನಿಡುತ್ತಿರುವ ಆದೇಶಗಳನ್ನು ಜಾರಿಗೊಳಿಸುವುದು ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಹೊಣೆಯಾಗಿದೆ. ಒಂದು ವೇಳೆ ಈ ಆದೇಶಗಳನ್ನು ಪಾಲಿಸುವಲ್ಲಿ ವಿಫಲವಾದಲ್ಲಿ ವಿಕೋಪ ನಿರ್ವಹಣಾ ಕಾಯ್ದೆಯಡಿಯಲ್ಲಿ ಅವರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕರು ತಮ್ಮೂರಿಗೆ ತೆರಳುವುದನ್ನುತಡೆದು ಅವರಿಗೆ ಅಗತ್ಯವಾದ ಊಟ, ವಸತಿ ಹಾಗೂ ಇತರ ಕ್ರಮಗಳನ್ನು ಕೈಗೊಳ್ಳಲು ಬೇಕಾದ ಹಣಕಾಸನ್ನು ರಾಜ್ಯಗಳ ಪ್ರಕೃತಿ ವಿಕೋಪ ನಿಧಿಯಿಂದ ಭರಿಸಬೇಕೆಂದು ಸೂಚಿಸಲಾಗಿದೆ.
ಎನ್​ಎಟಿಎ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಪರೀಕ್ಷಾ ದಿನಾಂಕವೂ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + four =
Remember me
