ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಂ.3, ಮೋತಿಲಾಲ್ ನೆಹರು ಪ್ಲೇಸ್​ ಮನೆಯ ಬಾಗಿಲಿನಲ್ಲಿ ಕ್ವಾರಂಟೈನ್ ನೋಟಿಸ್ ಕಾಣಿಸಿಕೊಂಡಿದೆ. ಕೆಲ ಕಾಲದಿಂದ ಡಾ.ಸಿಂಗ್ ಅವರ ಆರೋಗ್ಯವೂ ಚೆನ್ನಾಗಿಲ್ಲದ ಕಾರಣ ಇದು ಅನೇಕ ಕಾಂಗ್ರೆಸ್ ನಾಯಕರ ಕುತೂಹಲವನ್ನು ಕೆರಳಿಸಿದೆ.
ಕ್ವಾರಂಟೈನ್ ನೋಟಿಸ್ ಹಾಕಿರುವುದಕ್ಕೆ ಕಾರಣವಿದೆ. ಡಾ.ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಮಗಳಿಗೆ ಕೋವಿಡ್ 19 ಪಾಸಿಟಿವ್ ಆಗಿದೆ. ಅವರು ಡಾ.ಸಿಂಗ್ ಅವರ ಮನೆಯ ಆವರಣದಲ್ಲೇ ಇರುವ ಸಿಬ್ಬಂದಿ ಕ್ವಾರ್ಟರ್ಸ್​ನಲ್ಲಿ ವಾಸವಿದ್ದಾರೆ. ಹೀಗಾಗಿ ಮನೆಯ ಬಾಗಿಲಿಗೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ.
ಇದನ್ನೂ ಓದಿ:ಕಥೆಯಲ್ಲ-ಜೀವನ: ಅನಾರೋಗ್ಯಪೀಡಿತ ಪೋಲಿಸಪ್ಪನ ನೋವಿನ ಕಥೆ-ವ್ಯಥೆ
ಡಾ.ಸಿಂಗ್ ಅವರ ಆರೋಗ್ಯದಲ್ಲಿ ಸುಧಾರಣೆ ಇದ್ದು, ಅವರು ಗುರುವಾರ ಕಾಂಗ್ರೆಸ್​ನ ಕನ್ಸಲ್ಟೇಟಿವ್ ಕಮಿಟಿಯ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೀಗಾಗಿ ಗಾಬರಿಯಾಗುವಂಥದ್ದು ಏನೂ ಇಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. (ಏಜೆನ್ಸೀಸ್)
‘ಜೈ ಹಿಂದ್’ ಅಂತ ಹೇಳಿ: ಎಚ್​ಎಎಲ್ ಪೊಲೀಸ್ ಠಾಣಾಧಿಕಾರಿಯ ಜ್ಞಾಪನಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
