ನವದೆಹಲಿ: ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ತಬ್ಲಿಘ್​ ಜಮಾತ್​ನಲ್ಲಿ ಪಾಲ್ಗೊಂಡಿದ್ದ 1,400ಕ್ಕೂ ಅಧಿಕ ಜನರಲ್ಲಿ ಕರೊನಾ ಸೋಂಕು ಕಂಡು ಬಂದಿದೆ. ಇವರ ಸಂಪರ್ಕಕ್ಕೆ ಬಂದವರಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಒಂದಲ್ಲಾ ಒಂದು ರಾಜ್ಯದಿಂದ ದಿನವೂ ವರದಿಯಾಗುತ್ತಿವೆ. ಸೋಂಕು ಹರಡುವುದನ್ನು ತಡೆಯಲು ದೇಶದೆಲ್ಲೆಡೆ ಜಮಾತ್​ನಲ್ಲಿ ಪಾಲ್ಗೊಂಡಿದ್ದ ಹಾಗೂ ಅವರ ಸಂಪರ್ಕದಲ್ಲಿದ್ದ 25,000ಕ್ಕೂ ಅಧಿಕ ಜನರನ್ನು ದೇಶದ ವಿವಿಧೆಡೆ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಆದರೆ, ಕ್ವಾರಂಟೈನ್​ನಲ್ಲಿರುವವರ ಹುಚ್ಚಾಟಕ್ಕೆ ಮಿತಿಯೇ ಇಲ್ಲದಂತಾಗಿದೆ.
ದೆಹಲಿಯ ನರೇಲಾ ಕ್ವಾರಂಟೈನ್​ ಕೇಂದ್ರದ ಕೊಠಡಿ ಎದುರು ಮಲ ವಿಸರ್ಜಿಸಿದ್ದ ಆರೋಪದಲ್ಲಿ ಉತ್ತರಪ್ರದೇಶದ ಇಬ್ಬರ ವಿರುದ್ಧ ದೆಹಲಿ ಪೊಲೀಸರು ಈಗಾಗಲೇ ಎಫ್​ಐಆರ್​ ದಾಖಲಿಸಿದ್ದಾರೆ. ಲೋಕನಾಯಕ ಜಯಪ್ರಕಾಶ್​ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ ಬಳಿ ಉಗಿಯುತ್ತಿದ್ದ ಶಂಕಿತರ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ.
ದ್ವಾರಕಾ ಸೆಕ್ಟರ್​ 16ಬಿ ಪ್ರದೇಶದ ನಾಲ್ಕು ಫ್ಲ್ಯಾಟ್​ಗಳಲ್ಲಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇಲ್ಲಿಯೂ ಇಂಥದ್ದೇ ವಿಕೃತಿ ಮೆರೆದಿರುವುದು ವರದಿಯಾಗಿದೆ. ಫ್ಲ್ಯಾಟ್​ಗಳಲ್ಲಿ ಇದ್ದವರು ಮೂತ್ರವನ್ನು ಬಾಟಲಿಯಲ್ಲಿ ತುಂಬಿಸಿ ಹೊರಗೆ ಎಸೆದಿದ್ದಾರೆ. ಇದನ್ನು ನಾಗರಿಕ ರಕ್ಷಣಾ ದಳದ ಸಿಬ್ಬಂದಿಯೊಬ್ಬರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ, ಕೃತ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಟ್ಟಡದ ಹಿಂಭಾಗದಲ್ಲಿದ್ದ ನೀರಿನ ಪಂಪ್​ ಬಳಿ ಅಂತಹ ಎರಡು ಬಾಟಲಿಗಳು ಪತ್ತೆಯಾಗಿವೆ.
ಕ್ವಾರಂಟೈನ್​ ಕೇಂದ್ರದ ಸಹಾಯಕ ನಿರ್ದೇಶಕರು ನೀಡಿದ ದೂರಿನ ಆಧಾರದಲ್ಲಿ ದ್ವಾರಕಾ ಉತ್ತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನರಿಗೆ ಕರೊನಾ ಸೋಂಕು ಹಬ್ಬುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. (ಏಜೆನ್ಸೀಸ್)
19 ವಿದೇಶಿಯರ ವಿರುದ್ಧ ಎಫ್​ಐಆರ್: ತಬ್ಲಿಘಿ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗಿ ಹಿನ್ನೆಲೆ ಬೆಂಗಳೂರಿನಲ್ಲಿಯೂ ಪ್ರಚಾರ ಸಭೆ ನಡೆಸಿದ ಆರೋಪ

ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

ಮದ್ಯ ಕೇಳಿದ ವೈದ್ಯನಿಗೆ ಹೈಕೋರ್ಟ್ ಕೊಟ್ಟ ಇನಾಮು ಏನು ಗೊತ್ತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
