ಖಾನ್ಪುರ:ರಾತ್ರಿ ಎಷ್ಟು ಹೊತ್ತಾದರೂ ಟಿವಿ ಆಫ್​ ಮಾಡದೇ ಇದ್ದ ತಂದೆ ವಿರುದ್ಧ ಸಿಟ್ಟಾದ ಮಾಜಿ ಯೋಧ, ಅವರನ್ನು ಶೂಟ್​ ಮಾಡಿ ಕೊಂದು ಹಾಕಿದ್ದಾನೆ. ಪರಿಣಾಮ 80 ವರ್ಷ ವಯಸ್ಸಿನ ಲಾಲಾ ರಾಮ್​​ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶದ ನಾಸೀರ್​ಪುರ್ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಪ್ರಕರಣ ನಡೆದಿದೆ. ಪುತ್ರ, ಮಾಜಿ ಯೋಧ ಅಶೋಕ್​ ಕಟಿಯಾರ್ ಈ ಕೃತ್ಯ ಎಸಗಿದ್ದಾನೆ. ಟಿವಿ ಆಫ್​ ಮಾಡುವ ವಿಚಾರಕ್ಕೆ ತಂದೆ-ಮಗನ ನಡುವೆ ವಾಗ್ವಾದ ನಡೆದಿದೆ. ಟಿವಿ ಆಫ್​ ಮಾಡಿ ಎಂದರೂ ತಂದೆ ಇನ್ನೂ ಟಿವಿ ನೋಡುತ್ತಲೇ ಇದ್ದಿದ್ದರಿಂದ ಸಿಟ್ಟಾದ ಪುತ್ರ ಮೊದಲಿಗೆ ತಂದೆಯನ್ನು ತಳ್ಳಿದ್ದಾನೆ. ನಂತರ ತನ್ನ ಬಳಿ ಇರುವ ಡಬಲ್ ಬ್ಯಾರೆಲ್​ ಗನ್​ನಿಂದ ಶೂಟ್​ ಮಾಡಿದ್ದಾನೆ. ಗಂಭೀರ ಗಾಯಕ್ಕೊಳಗಾದ ತಂದೆ ಮೃತಪಟ್ಟಿದ್ದಾರೆ ಎಂದು ಎಎಸ್​ಪಿ ಅನೂಪ್​ ಕುಮಾರ್ ತಿಳಿಸಿದ್ದಾರೆ.
ಮಾಜಿ ಯೋಧ ಅಶೋಕ್​ ಕುಟುಂಬದ ಜತೆ ನಾಸೀರ್​ಪುರದಲ್ಲಿ ನೆಲೆಸಿದ್ದು, ಮದ್ಯವ್ಯಸನಿ ಆಗಿದ್ದು ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ಮಾಡುತ್ತಿದ್ದ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × one =
Remember me
