ನವದೆಹಲಿ:ದೇಶಾದ್ಯಂತ ಉಷ್ಣ ಮಾರುತದ ಪ್ರಭಾವ ಹೆಚ್ಚಾಗುತ್ತಿದೆ. ಎಲ್ಲಡೆ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ವಿದ್ಯುತ್ ಕೊರತೆ ಕಾರಣ ಹಲವು ರಾಜ್ಯಗಳಲ್ಲಿ ಪವರ್ ಕಟ್ ಜಾರಿಯಲ್ಲಿದೆ. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಕಾಡಿದೆ. ಕಲ್ಲಿದ್ದಲು ಪೂರೈಕೆಗೆ ಕ್ಷಿಪ್ರ ಕ್ರಮವನ್ನು ಕೇಂದ್ರ ಸರ್ಕಾರ, ಹಲವು ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳಿಸುವ ಮೂಲಕ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲ ಕಲ್ಪಿಸಿದೆ.
ದೈನಿಕ ಕಲ್ಲಿದ್ದಲು ದಾಸ್ತಾನು ವರದಿ ಪ್ರಕಾರ, ದೇಶದ 165 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 56ರಲ್ಲಿ ಶೇಕಡ 10 ಅಥವಾ ಅದಕ್ಕಿಂತ ಕಡಿಮೆ ಕಲ್ಲಿದ್ದಲು ದಾಸ್ತಾನಿದೆ. ಕನಿಷ್ಠ 26 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಶೇಕಡ 5ಕ್ಕಿಂತ ಕಡಿಮೆ ಕಲ್ಲಿದ್ದಲು ದಾಸ್ತಾನಿರುವಂಥದ್ದು ಬಹಿರಂಗವಾಗಿದೆ. ಏ. 27ರ ಡೇಟಾ ಪ್ರಕಾರ, 173 ವಿದ್ಯುತ್ ಸ್ಥಾವರಗಳ ಪೈಕಿ 106 ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆ ತೀವ್ರವಾಗಿ ಕಾಡಿದೆ.
ಸಮನ್ವಯ ಕೊರತೆ ಕಾರಣ:ದೇಶಾದ್ಯಂತ ಕಲ್ಲಿದ್ದಲು ಕೊರತೆ ಕಾಡುವುದಕ್ಕೆ ಸಚಿವಾಲಯಗಳ ನಡುವೆ ಸಮನ್ವ ಇಲ್ಲದಿರುವುದೇ ಮುಖ್ಯ ಕಾರಣ ಎಂದು ಆಲ್ ಇಂಡಿಯಾ ಪವರ್ ಎಂಜಿನಿಯರ್ಸ್ ಫೆಡರೇಷನ್ (ಎಐಪಿಇಎಫ್) ಶುಕ್ರವಾರ ಟೀಕಿಸಿದೆ. ಕಲ್ಲಿದ್ದಲು ಸಚಿವಾಲಯ, ರೈಲ್ವೆ ಸಚಿವಾಲಯ ಮತ್ತು ಇಂಧನ ಸಚಿವಾಲಯಗಳ ನಡುವೆ ಸಮನ್ವಯದ ಕೊರತೆ ಗೋಚರಿಸುತ್ತಿದೆ. ಇಂಧನ ಕ್ಷೇತ್ರದ ಈ ಸಂಕಷ್ಟಕ್ಕೆ ನಾವು ಹೊಣೆಗಾರರಲ್ಲ ಎಂದು ಈ ಎಲ್ಲ ಸಚಿವಾಲಯಗಳು ಹೇಳುತ್ತಿರುವುದು ಇದಕ್ಕೆ ಸಾಕ್ಷಿ. ಈ ಸಚಿವಾಲಯಗಳು ಕಲ್ಲಿದ್ದಲು ಕೊರತೆಯನ್ನು ರಾಜ್ಯಗಳ ಪಾವತಿ ಸಾಮರ್ಥ್ಯಕ್ಕೆ ಜೋಡಿಸಿದ್ದು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿವೆ ಎಂದು ಎಐಪಿಇಎಫ್ ಹೇಳಿದೆ.
ಪ್ಯಾಸೆಂಜರ್ ರೈಲು ರದ್ದು:ವಿದ್ಯುತ್ ಸ್ಥಾವರಗಳಿಗೆ ತುರ್ತಾಗಿ ಕಲ್ಲಿದ್ದಲು ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ರೈಲ್ವೆ ಸಚಿವಾಲಯವು ದೇಶಾದ್ಯಂತ 42 ಪ್ಯಾಸೆಂಜರ್ ರೈಲುಗಳ 670ಕ್ಕೂ ಹೆಚ್ಚು ಸಂಚಾರ ಸೇವೆಗಳನ್ನು ಮೇ 24ರ ತನಕ ರದ್ದುಗೊಳಿಸಿದೆ. ಕಲ್ಲಿದ್ದಲು ಪೂರೈಕೆ ಸಹಜ ಸ್ಥಿತಿಗೆ ಬರುತ್ತಲೇ ಈ ರೈಲು ಸೇವೆಗಳನ್ನು ಶೀಘ್ರವೇ ಮರುಸ್ಥಾಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಛತ್ತೀಸ್​ಗಢದಲ್ಲಿ ಮೂರು ರೈಲು ಸಂಚಾರ ರದ್ದುಗೊಳಿಸಲಾಗಿದೆ.
ದೆಹಲಿಯಲ್ಲಿ ತಾಪಮಾನ ದಾಖಲೆ:ದೆಹಲಿಯಲ್ಲಿ ಕಳೆದ 72 ವರ್ಷದಲ್ಲಿ ಇದು ಎರಡನೇ ಅತಿ ತಾಪಮಾನದ ಏಪ್ರಿಲ್ ತಿಂಗಳಾಗಿ ದಾಖಲಾಗಿದೆ. ತಿಂಗಳ ಗರಿಷ್ಠ ತಾಪಮಾನ 40.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಏಪ್ರಿಲ್ 28 ಮತ್ತು ಏಪ್ರಿಲ್ 29ರಂದು ಗರಿಷ್ಠ 43.5 ಡಿಗ್ರಿ ಸೆಲ್ಶಿಯಸ್ ತಾಪ ದಾಖಲಾಗಿದೆ. ದೆಹಲಿಯಲ್ಲಿ ವಿದ್ಯುತ್ ಕೊರತೆ ತೀವ್ರವಾಗಿ ಕಾಡಿದ್ದು, ಕೇಂದ್ರದ ಜತೆಗೆ ಕೇಜ್ರಿವಾಲ್ ಸರ್ಕಾರದ ವಾಕ್ಸಮರ ಶುರುವಾಗಿದೆ.
ಪಂಜಾಬಲ್ಲಿ ರೈತರ ಪ್ರತಿಭಟನೆ:ಪಂಜಾಬಿನ ಇಂಧನ ಸಚಿವ ಹರ್ಭಜನ್ ಸಿಂಗ್ ನಿವಾಸದ ಎದುರು ವಿವಿಧ ರೈತ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿವೆ. ಕೃಷಿ ಕ್ಷೇತ್ರಕ್ಕೆ ಅಗತ್ಯ ವಿದ್ಯುತ್ ಪೂರೈಸಬೇಕು ಎಂಬ ಬೇಡಿಕೆಯನ್ನು ಈ ಸಂಘಟನೆಗಳು ರಾಜ್ಯ ಸರ್ಕಾರದ ಮುಂದಿರಿಸಿವೆ. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಬ್ಯಾನರ್ ಅಡಿಯಲ್ಲಿ ಈ ಪ್ರತಿಭಟನೆ ನಡೆದಿತ್ತು.
533 ಕಲ್ಲಿದ್ದಲು ರೇಕ್ಸ್ ರವಾನೆ:ವಿದ್ಯುತ್ ಉತ್ಪಾದನೆಗೆ ಅಗತ್ಯ ವಾದ 533 ಕಲ್ಲಿದ್ದಲು ರೇಕ್ಸ್ ಅನ್ನು ಕೇಂದ್ರ ಸರ್ಕಾರ ರವಾನಿಸಿದೆ. ಗುರುವಾರ ಇಂಧನ ಕ್ಷೇತ್ರಕ್ಕಾಗಿ 427 ರೇಕ್ಸ್ ಅನ್ನು ರವಾನಿಸಲಾಗಿದೆ. 1.62 ದಶಲಕ್ಷ ಟನ್ ಕಲ್ಲಿದ್ದಲು ವಿದ್ಯುತ್ ಉತ್ಪಾದನೆಗಾಗಿ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೆಲ ರಾಜ್ಯದಲ್ಲಿ 8 ತಾಸು ಪವರ್ ಕಟ್:ಉತ್ತರ ಭಾರತದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ಥಾನ ಮತ್ತು ಉತ್ತರಾಖಂಡಗಳಲ್ಲಿ ಕನಿಷ್ಠ 3 ಗಂಟೆಯಿಂದ ಗರಿಷ್ಠ 8 ಗಂಟೆ ತನಕ ಪವರ್ ಕಟ್ ಚಾಲ್ತಿಯಲ್ಲಿದೆ. ಉತ್ತರ  ಭಾರತದ 16 ಸ್ಟೇಟ್ ಸೆಕ್ಟರ್ ಥರ್ಮಲ್ ಪ್ಲಾಂಟ್​ಗಳ ಪೈಕಿ 12ರಲ್ಲಿ ಕಲ್ಲಿದ್ದುಲು ಕೊರತೆ ಗಂಭೀರವಾಗಿದೆ. ಈ ಪೈಕಿ ರಾಜಸ್ಥಾನದಲ್ಲಿ ಏಳರಲ್ಲಿ ಆರು, ಉತ್ತರ ಪ್ರದೇಶದಲ್ಲಿ ನಾಲ್ಕರಲ್ಲಿ ಮೂರು ಪ್ಲಾಂಟ್​ಗಳಲ್ಲಿ ಕಲ್ಲಿದ್ದಲು ಕೊರತೆ ಗಂಭೀರವಾಗಿದೆ. ನಾರ್ದರ್ನ್ ರೀಜಿಯನ್ ಲೋಡ್ ಡಿಸ್ಪಾ್ಯಚ್ ಸೆಂಟರ್ (ಎನ್​ಆರ್​ಎಲ್​ಡಿಸಿ) ಡೇಟಾ ಪ್ರಕಾರ, ಉತ್ತರ ಭಾರತದಲ್ಲಿ 1,436 ಲಕ್ಷ ಯೂನಿಟ್ ವಿದ್ಯುತ್ ಕೊರತೆ ಇದೆ. ರಾಜಸ್ಥಾನದಲ್ಲಿ ಗರಿಷ್ಠ 435 ಲಕ್ಷ ಯೂನಿಟ್, ಹರಿಯಾಣದಲ್ಲಿ 337 ಲಕ್ಷ ಯೂನಿಟ್, ಪಂಜಾಬಿನಲ್ಲಿ 306 ಲಕ್ಷ ಯೂನಿಟ್, ಉತ್ತರ ಪ್ರದೇಶದಲ್ಲಿ 295 ಲಕ್ಷ ಯೂನಿಟ್ ಕೊರತೆ ಇದೆ. ಮಹಾರಾಷ್ಟ್ರದ ಏಳು ಸ್ಥಾವರಗಳ ಪೈಕಿ ಆರರಲ್ಲಿ, ಮಧ್ಯಪ್ರದೇಶದಲ್ಲಿ ನಾಲ್ಕರ ಪೈಕಿ ಮೂರರಲ್ಲಿ ಕಲ್ಲಿದ್ದಲು ಕೊರತೆ ಗಂಭೀರವಾಗಿದೆ. ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡುಗಳಲ್ಲಿ ಎಲ್ಲ ಸ್ಟೇಟ್ ಸೆಕ್ಟರ್ ಪ್ಲಾಂಟ್​ಗಳಲ್ಲಿ ಅಗತ್ಯ ಕಲ್ಲಿದ್ದಲು ದಾಸ್ತಾನು ಇದೆ. ಆದಾಗ್ಯೂ, 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಗರಿಷ್ಠ 12 ಗಂಟೆ ಪವರ್ ಕಟ್ ಚಾಲ್ತಿಯಲ್ಲಿದೆ.
ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
