ನವದೆಹಲಿ:ಬರುವ ಭಾನುವಾರ(ಮಾ.8) ನಾನು ನನ್ನ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ, ನೀವು ಸಾಮಾಜಿಕ ಜಾಲತಾಣವನ್ನು ಬಿಡುವುದಲ್ಲ, ದ್ವೇಷವನ್ನು ಬಿಡಿ ಎಂದು ಹೇಳಿದ್ದರು.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರಧಾನಿ ಮೋದಿಯವರ ಟ್ವೀಟ್​ಗೆ ಇಂದು ಅವರೇ ಉತ್ತರ ನೀಡಿ, ಸಾಧನ ಮಹಿಳೆಯರಿಗೆ ಮೀಸಲಾಗಿಡುವ ಕಾರಣಕ್ಕೆ ನಾನು ಮಾ.8ರಂದು ಸೋಷಿಯಲ್ ಮೀಡಿಯಾ ಉಪಯೋಗಿಸುತ್ತಿಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರ ಈ ಟ್ವೀಟ್​ಗೂ ರಾಹುಲ್ ಗಾಂಧಿ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಕೊರೊನಾ ವೈರಸ್​ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಪ್ರೀತಿಯ ಪ್ರಧಾನಿ ಮೋದಿಯವರೇ, ಇಡೀ ಭಾರತಕ್ಕೆ ಕೊರೊನಾ ವೈರಸ್​ನಂತಹ ತುರ್ತು ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಮುಂದಿಟ್ಟುಕೊಂಡು ತಮಾಷೆ ಮಾಡುತ್ತ, ಆಟವಾಡುತ್ತ ಸಮಯ ಹಾಳು ಮಾಡಬೇಡಿ. ಭಾರತದಲ್ಲಿ ಕೊರೊನಾ ವೈರಸ್​ ತಡೆ, ನಿಯಂತ್ರಣದ ಬಗ್ಗೆ ಗಮನಹರಿಸಿ ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.
ಪ್ರತಿ ದೇಶಕ್ಕೂ ಅದರ ನಾಯಕರನ್ನು ಪರೀಕ್ಷೆಗೆ ಒಡ್ಡುವ ಸಂದರ್ಭ ಎದುರಾಗುತ್ತದೆ. ಈಗ ಭಾರತದ ಎದುರು ಅದೇ ಸನ್ನಿವೇಶ ಇದೆ. ನಿಜವಾದ ನಾಯಕನಾದವನು ಈಗ ಭಾರತ ಹಾಗೂ ಅದರ ಆರ್ಥಿಕತೆಗೆ ತಗುಲಿರುವ ವೈರಸ್​ನ್ನು ತೊಲಗಿಸುವತ್ತ ಸಂಪೂರ್ಣ ಗಮನಹರಿಸುತ್ತಾನೆ ಎಂದು ರಾಹುಲ್ ಗಾಂಧಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.ರಾಹುಲ್​ ಗಾಂಧಿಯವರು ಈ ಟ್ವೀಟ್ ಮಾಡುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿ ದೇಶದ ಜನರಲ್ಲಿ ಧೈರ್ಯ ತುಂಬಿದ್ದಾರೆ. ಯಾರೂ ಹೆದರುವುದು ಬೇಡ, ಕೊರೊನಾ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಸರ್ಕಾರದಿಂದ ಸಕಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಫೆ.12ರಂದು ಕೂಡ ರಾಹುಲ್ ಗಾಂಧಿಯವರು ಕೊರೊನಾ ವೈರಸ್​ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ವೈರಸ್​ ನಮ್ಮ ದೇಶ ಹಾಗೂ ಅದರ ಆರ್ಥಿಕತೆ ಮೇಲೆ ತುಂಬ ಅಪಾಯಕಾರಿಯಾಗಿ ಪರಿಣಾಮವನ್ನು ಬೀರುತ್ತಿದೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದೆನಿಸುತ್ತಿದೆ ಎಂದು ಹೇಳಿದ್ದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
