ತಿರುವನಂತಪುರಂ:ಯುವಕನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಲಕ್ಷ್ಮೀಪ್ರಿಯಾ ಎಂದು ಗುರುತಿಸಲಾಗಿದೆ. ಈಕೆ ವಾರ್ಕಳ ಮೂಲದವಳು. ಆಕೆಯ ಮೊಬೈಲ್​ ಟವರ್ ಲೊಕೇಶನ್ ಮೇಲೆ ಕೇಂದ್ರೀಕರಿಸಿ ನಡೆಸಿದ ತನಿಖೆಯ ಬಳಿಕ ನಿನ್ನೆ ರಾತ್ರಿ ತಿರುವನಂತಪುರದಲ್ಲಿ ಆಕೆಯನ್ನು ಬಂಧಿಸಲಾಗಿದೆ. ಪೊಲೀಸರು ಆಕೆಯ ಬಂಧನವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ಆಕೆಯ ಹೊಸ ಲವರ್​ ಸೇರಿದಂತೆ ಐವರು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಸುಪ್ರೀಂಕೋರ್ಟ್​ನಲ್ಲಿ ಆರ್​ಎಸ್​ಎಸ್​ಗೆ ಗೆಲುವು: ತಮಿಳುನಾಡು ಸರ್ಕಾರಕ್ಕೆ ಮುಖಭಂಗ
ಕೈಕೊಟ್ಟು ಹೊಸ ಲವರ್​ಏಪ್ರಿಲ್ 5ರಂದು ವಾರ್ಕಳದ ಆಯೂರಿನ ಯುವಕನಿಗೆ ಅಮಾನುಷ ಕಿರುಕುಳ ನೀಡಲಾಗಿತ್ತು. ವಾರ್ಕಳದ ಚೆರುನ್ನಿಯೂರ್​ ಮೂಲದ ಲಕ್ಷ್ಮೀಪ್ರಿಯಾ ಜತೆ ಯುವಕನಿಗೆ ಸಂಬಂಧವಿತ್ತು. ಕೆಲವು ದಿನಗಳ ಬಳಿಕ ಅವನಿಂದ ದೂರವಾಗಿ ಹೊಸ ಲವರ್​ ಹುಡುಕಿಕೊಂಡಿದ್ದಳು. ದೂರವಾದರೂ ತನ್ನ ಹಿಂದೆ ಬಿದ್ದಿದ್ದ ಯುವಕನನ್ನು ನಿರ್ಲಕ್ಷಿಸಲು ಗ್ಯಾಂಗ್​ ಒಂದನ್ನು ನೇಮಿಸಿಕೊಂಡಿದ್ದಳು.
ಯುವಕನ ಸುಲಿಗೆಹೊಸ ಲವರ್​ ಮತ್ತು ಗ್ಯಾಂಗ್​ ಜತೆ ಸೇರಿ ಲಕ್ಷ್ಮೀಪ್ರಿಯಾ ಯುವಕನ ಮನೆಗೆ ಹೋದಳು. ಬಳಿಕ ಆತನನ್ನು ಹೊರಗೆ ಕರೆದು, ಕಾರಿನಲ್ಲಿ ಕರೆದೊಯ್ದ ಆಕೆ, ಕಾರಿನ ಒಳಗಡೆಯೇ ಹಲ್ಲೆ ಮಾಡಿ, ಚಾಕು ತೋರಿಸಿ ಬೆದರಿಕೆ ಹಾಕಿದರು. ಕಾರು ಆಲಪ್ಪುಳ ತಲುಪಿದ ಬಳಿಕ ಕಾರಿನ ಚಾಲಕ ಕೆಳಗೆ ಇಳಿದು ಯುವಕನ ಸರ, ಮೊಬೈಲ್​ ಮತ್ತು 5 ಸಾವಿರ ರೂ. ಹಣ ಕಸಿದುಕೊಂಡನು. ಅಲ್ಲದೆ, ಗೂಗಲ್​ ಪೇನಿಂದ 3500 ರೂ. ಅನ್ನು ಗ್ಯಾಂಗ್​ ಪಾವತಿಸಿಕೊಂಡರು. ಎರ್ನಾಕುಲಂ ಬೈಪಾಸ್ ಬಳಿಯ ಮನೆಗೆ ತಲುಪಿದ ಗ್ಯಾಂಗ್​ ಮೊಬೈಲ್ ಚಾರ್ಜರ್ ಬಳಸಿ ಯುವಕನಿಗೆ ಶಾಕ್ ನೀಡಿದರು.
ಬೆತ್ತಲೆ ಫೋಟೋ, ವಿಡಿಯೋಗ್ಯಾಂಗ್​ ನೀಡಿದ ಬಿಯರ್ ಕುಡಿಯಲು ಯುವಕ ನಿರಾಕರಿಸಿದಾಗ, ಬಾಟಲಿಯಿಂದ ಆತನ ತಲೆಗೆ ಹೊಡೆದರು. ಬಳಿಕ ಯುವಕನ ಬಟ್ಟೆಯನ್ನು ಕಿತ್ತೆಸೆದು, ಬೆತ್ತಲೆ ಮಾಡಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿದರು. ಲಕ್ಷ್ಮೀಪ್ರಿಯಾ ಜತೆಗಿನ ಸಂಬಂಧದಿಂದ ಹಿಂದೆ ಸರಿಯುವಂತೆ ಗ್ಯಾಂಗ್​ ಕೇಳಿಕೊಂಡರು. ಮಾತು ಕೇಳದಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದರು.
ಇದನ್ನೂ ಓದಿ:ಸೊಂಟ ಹಿಡಿದು ನಿತಂಬ ಮುಟ್ಟಿದರು: ಸದ್ದುಗುಂಟೆಪಾಳ್ಯ SI ವಿರುದ್ಧ ಸರಣಿ ಟ್ವೀಟ್​ ಮಾಡಿ ಮಹಿಳೆ ಕಣ್ಣೀರು
ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಮರುದಿನ ಲಕ್ಷ್ಮೀಪ್ರಿಯಾ ಗ್ಯಾಂಗ್​, ಯುವಕನನ್ನು ವೈಟ್ಟಿಲ ಬಸ್ ನಿಲ್ದಾಣದಲ್ಲಿ ಬಿಟ್ಟು, ಅಲ್ಲಿಂದ ಪರಾರಿಯಾದರು. ರಸ್ತೆ ಬದಿ ಮಲಗಿದ್ದ ಯುವಕನನ್ನು ಪೊಲೀಸರು ಕೊಚ್ಚಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಬಳಿಕ ಸಂಬಂಧಿಕರು ಮಾಹಿತಿ ಪಡೆದು ಯುವಕನನ್ನು ವೆಂಜರಮೂಡು ಗೋಕುಲಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್​ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

ಚಿನ್ನದ ಝರಿ ನೇಯ್ಗೆ ಇರುವ ಸೀರೆಯನ್ನು ದೇವರಿಗೆ ಅರ್ಪಿಸಿದ ಭಕ್ತ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 2 =
Remember me
