ನವದೆಹಲಿ:ಪ್ರತಿಕೂಲ ಹವಾಮಾನದಿಂದ ಉಂಟಾದ ಭಾರೀ ಪ್ರಮಾಣದ ಹಿಮಪಾತದಿಂದಾಗಿ ಅಕ್ಟೋಬರ್​ 18ರಂದು ದಾರಿ ತಪ್ಪಿದ್ದ 17 ಚಾರಣಿಗರಲ್ಲಿ 11 ಮಂದಿಯ ಮೃತದೇಹವನ್ನು ವಶಕ್ಕೆ ಪಡೆದಿರುವ ವಾಯುಸೇನೆ, ತನ್ನ ಬಹುದೊಡ್ಡ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಈ ಘಟನೆ ಸಮುದ್ರ ಮಟ್ಟದಿಂದ 17000 ಅಡಿ ಎತ್ತರವಿರುವ ಉತ್ತರಾಖಂಡದ ಲಂಖಗಾ ಪಾಸ್​ನಲ್ಲಿ ನಡೆದಿದೆ. ಅ.18ರಂದು ಮಾರ್ಗದರ್ಶಕ, ಹಮಾಲರು ಮತ್ತು ಪ್ರವಾಸಿಗರು ಸೇರಿ 17 ಮಂದಿ ಚಾರಣಕ್ಕೆ ತೆರಳಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದ ಉಂಟಾದ ಹಿಮಪಾತದಿಂದ ಎಲ್ಲರು ದಾರಿತಪ್ಪಿದ್ದರು. ಅ.20ರಂದು ಅಧಿಕಾರಿಗಳು ಮಾಡಿದ ತುರ್ತು ಕರೆಗೆ ಸ್ಪಂದಿಸಿದ ಭಾರತೀಯ ವಾಯುಸೇನೆ, ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್​ಎಚ್​) ಅನ್ನು ಘಟನಾ ಸ್ಥಳಕ್ಕೆ ತೆರಳಲು ಬಳಸಿತ್ತು.
ಅ.20ರಂದು ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈ ಕಾರ್ಯಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಕೂಡ ಕೈಜೋಡಿಸಿದೆ. ಅ.21ರಂದು 15,700 ಅಡಿ ಎತ್ತರದಲ್ಲಿ 4 ಮೃತದೇಹಗಳು ಪತ್ತೆಯಾದರೆ, ಅ.22ರಂದು 16,500 ಅಡಿ ಎತ್ತರದಲ್ಲಿ ಮತ್ತೆ 5 ಮೃತದೇಹಗಳನ್ನು ವಶಕ್ಕೆ ಪಡೆಯಿತು. ಅಲ್ಲದೆ, ಓರ್ವ ವ್ಯಕ್ತಿಯನ್ನು ರಕ್ಷಣೆ ಸಹ ಮಾಡಲಾಗಿದೆ.
ಇನ್ನೂ ಎರಡು ಶವಗಳನ್ನು ಅದೇ ದಿನ ಪತ್ತೆ ಮಾಡಲಾಗಿದ್ದು, ಮೃತದೇಹಗಳನ್ನು ಡೋಗ್ರಾ ಸ್ಕೌಟ್ಸ್, 4 ಅಸ್ಸಾಂ ಮತ್ತು ಎರಡು ಐಟಿಬಿಪಿ ತಂಡಗಳ ಜಂಟಿ ಗಸ್ತು ಮೂಲಕ ನಿತಲ್ ತಾಚ್ ಶಿಬಿರಕ್ಕೆ ಮರಳಿ ತರಲಾಗಿದೆ. ಉಳಿದ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಶೋಧ ಕಾರ್ಯವನ್ನು ಎಎಲ್​ಎಚ್​ ಸಿಬ್ಬಂದಿ ಶನಿವಾರ ಮುಂದುವರಿಸಲಿದ್ದಾರೆ.
ರಕ್ಷಣಾ ತಂಡಗಳು ಸ್ಥಳೀಯ ಪೊಲೀಸರಿಗೆ ಶವಗಳನ್ನು ಹಸ್ತಾಂತರಿಸಿವೆ. ಬದುಕುಳಿದವರನ್ನು ಉತ್ತರಕಾಶಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಮೊದಲು ಹರ್ಸಿಲ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಇನ್ನು ರಕ್ಷಣಾ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಎತ್ತರ ಪ್ರದೇಶದಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯುಂಟಾಯಿತು. ಆದಾಗ್ಯು 17 ಮಂದಿಯಲ್ಲಿ 11 ಮಂದಿ ಮೃತಪಟ್ಟಿರುವು ದುರಾದೃಷ್ಟಕರ ಸಂಗತಿಯಾಗಿದೆ.(ಏಜೆನ್ಸೀಸ್​)
ಭಾರತದಲ್ಲೂ ಹೈಪರ್​ಸಾನಿಕ್ ಅಣ್ವಸ್ತ್ರ ಕ್ಷಿಪಣಿ ಅಭಿವೃದ್ಧಿ; ಚೀನಾಕ್ಕೆ ಸೆಡ್ಡು ಹೊಡೆಯಲು ಹಲವು ದೇಶಗಳ ಯತ್ನ

ಆಲ್ಬಂನಲ್ಲಿ ರಾಗಿಣಿ; ಇನ್ನೂ ಎರಡು ಹಾಡುಗಳಿಗೆ ಸದ್ಯದಲ್ಲೇ ಚಿತ್ರೀಕರಣ

ನಾಗಾರ್ಜುನ್ ಅಭಿನಯದ ಘೋಸ್ಟ್​ಗೆ ಅಮಲಾ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + one =
Remember me
