ಕೋಲ್ಕತ:ಆತಂಕಕಾರಿ ಘಟನೆಯೊಂದರಲ್ಲಿ ಸ್ಮಾರ್ಟ್​ ಪೋನ್​ ಖರೀದಿಸುವ ಸಲುವಾಗಿ ಪಶ್ಚಿಮ ಬಂಗಾಳದ ದಿನಾಜ್​ಪುರ ಮೂಲದ 16 ವರ್ಷದ ಹುಡುಗಿಯೊಬ್ಬಳು ತನ್ನ ರಕ್ತವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯು ದಕ್ಷಿಣ ದಿನಾಜ್​ಪುರದ ತಾಪನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಡಾದ ನಿವಾಸಿ. ಆನ್​ಲೈನ್​ನಲ್ಲಿ 9 ಸಾವಿರ ರೂ. ಮೌಲ್ಯದ ಸ್ಮಾರ್ಟ್​ಫೋನ್​ ಅನ್ನು ಆರ್ಡರ್​ ಮಾಡಿದ್ದಳು. ಆದರೆ, ಅಷ್ಟೊಂದು ಹಣವನ್ನು ವ್ಯವಸ್ಥೆ ಮಾಡುವುದು ಕಷ್ಟ ಎಂದು ತಿಳಿದಿತ್ತು. ಹೀಗಾಗಿ ರಕ್ತ ಮಾರಾಟ ಮಾಡಲು ನಿರ್ಧಾರ ಮಾಡಿದ ವಿದ್ಯಾರ್ಥಿನಿ, ಬಲುರ್ಘಾಟ್​ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿ ರಕ್ತವನ್ನು ನೀಡಿದ್ದಾಳೆ.
ವಿದ್ಯಾರ್ಥಿನಿಯು ರಕ್ತದಾನಕ್ಕೆ ಬದಲಾಗಿ ಹಣಕ್ಕೆ ಬೇಡಿಕೆ ಇಟ್ಟಾಗ ನಮಗೆ ಅನುಮಾನ ಬಂದಿತು. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಶಿಶುಪಾಲನಾ ವಿಭಾಗಕ್ಕೆ ಮಾಹಿತಿ ನೀಡಲಾಯಿತು. ಅವರು ಆಸ್ಪತ್ರೆಗೆ ಆಗಮಿಸಿ, ವಿಚಾರಿಸಿದಾಗ ವಿದ್ಯಾರ್ಥಿನಿಯ ಮೊಬೈಲ್​ ಬಯಕೆಯ ನಿಜವಾದ ಕಾರಣ ತಿಳಿಯಿತು ಎಂದು ಬ್ಲಡ್ ಬ್ಯಾಂಕ್ ಉದ್ಯೋಗಿ ಕನಕ್ ದಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಕ್ಕಳ ಆರೈಕೆ ಸದಸ್ಯೆ ರೀಟಾ ಮಹ್ತೋ ಪ್ರಕಾರ, ವಿದ್ಯಾರ್ಥಿನಿಯ ಬಳಿ ಕಾರಣವನ್ನು ಕೇಳಿದಾಗ, ಸ್ಮಾರ್ಟ್​ ಫೋನ್ ಶೀಘ್ರದಲ್ಲೇ ಡೆಲಿವರಿ ಆಗುತ್ತಿದೆ. ನನ್ನ ಬಳಿ ಹಣವಿಲ್ಲ. ಹೀಗಾಗಿ ಹಣವನ್ನು ಸಂಗ್ರಹಿಸಲು ರಕ್ತವನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾಗಿ ತಿಳಿಸಿದಳು ಎಂದಿದ್ದಾರೆ.(ಏಜೆನ್ಸೀಸ್​)
ಅರ್ಚನಾ ನಾಗ್ ಹನಿಟ್ರ್ಯಾಪ್​ ಕೇಸ್​: ಸಾಲದ ಹಣ ವಾಪಸ್​ ಕೇಳಿದ ಉದ್ಯಮಿಗೆ ಈಕೆ ಕೊಟ್ಟಿದ್ದಳು ಬಿಗ್​ ಶಾಕ್!

ಆಸ್ಪತ್ರೆಯಲ್ಲಿ ಏರ್​ ಕೂಲರ್​ ಆನ್​ ಮಾಡಿ ಮಲಗಿದ ವ್ಯಕ್ತಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಮಹಿಳಾ ಸಿಬ್ಬಂದಿ

ಒಳ ಅಂಗಾಂಗಗಳೇ ಇಲ್ಲದ ಸತ್ತ ಕೀಟದಿಂದ ವಾಕಿಂಗ್! ನಂಬಲಾಗದ ದೃಶ್ಯ, ಕಾರಣ ತಿಳಿದರಂತೂ ಬೆರಗಾಗ್ತೀರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
