ಮುಂಬೈ:ಮಹಾರಾಷ್ಟ್ರದಲ್ಲಿ ನಡೆದಿರುವ ಈ ಒಂದು ಘಟನೆಯನ್ನು ನೋಡಿದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಆತಂಕ ಮೂಡುವುದು ಖಂಡಿತ. ಆಧುನಿಕತೆಯೇ ಮನಷ್ಯನ ಖಾಸಗಿ ಬದುಕಿಗೆ ಬಹು ದೊಡ್ಡ ಸವಾಲಾಗಿ ನಿಲ್ಲುತ್ತದೆಯೇ ಎಂಬ ಕಳವಳ ವ್ಯಕ್ತವಾಗಿದೆ.
ಗುರು ದೇವೋ ಭವ ಅನ್ನುತ್ತಾರೆ ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾನೆ. ದೇವರ ಸ್ವರೂಪವಾದ ಶಿಕ್ಷಕಿಯ ಬೆತ್ತಲೆ ವಿಡಿಯೋವನ್ನೇ ಸೆರೆಹಿಡಿದಿದ್ದಾನೆ. ಸಂತ್ರಸ್ತ ಶಿಕ್ಷಕಿಯ ವಯಸ್ಸು 56. ಹದಿನಾರು ವರ್ಷದ ಆರೋಪಿ ವಿದ್ಯಾರ್ಥಿಗೆ ಶಿಕ್ಷಕಿ ಟ್ಯೂಷನ್​ ತೆಗೆದುಕೊಳ್ಳುತ್ತಿದ್ದರು.
ವಿದ್ಯಾರ್ಥಿಯೇ ವಿಡಿಯೋ ರೆಕಾರ್ಡ್ ಮಾಡಿದ್ದನ್ನು ಅರಿತ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿದಿನ ಶಿಕ್ಷಕಿ ಟ್ಯೂಷನ್​ಗೆಂದು ವಿದ್ಯಾರ್ಥಿ ಮನೆಗೆ ಬರುತ್ತಿದ್ದರು. ಅದರಂತೆಯೇ ಆಗಮನದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿ ತನ್ನ ಸ್ವಂತ ಮನೆಯ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಅಳವಡಿಸಿದ್ದ. ಕಳೆದ ಐದು ವರ್ಷಗಳಿಂದ ಶಿಕ್ಷಕಿ ಬಾಲಕನಿಗೆ ಟ್ಯೂಷನ್ ಹೇಳಿಕೊಡಲು ಬರುತ್ತಿದ್ದರು. ಸ್ನಾನಗೃಹದಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಫೋನ್ ಅನ್ನು ಪತ್ತೆ ಮಾಡಿದ ಶಿಕ್ಷಕಿ, ಅದನ್ನು ಅನ್ಲಾಕ್ ಮಾಡಿದಾಗ ತನ್ನ ನಗ್ನ ದೃಶ್ಯಗಳಿರುವುದನ್ನು ಪತ್ತೆ ಮಾಡಿದ್ದಾರೆ. ಇದಾದ ಬಳಿಕ ಆಕೆ ದೂರು ದಾಖಲಿಸಿದ್ದಾಳೆ.
ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದು, ನಗ್ನ ವೀಡಿಯೋ ಇರುವ ಫೋನ್ ವಶಪಡಿಸಿಕೊಂಡಿದ್ದಾರೆ. ಸದ್ಯ ಪರೀಕ್ಷೆ ನಡೆಯುತ್ತಿರುವುದರಿಂದ ಪೊಲೀಸರು ವಿದ್ಯಾರ್ಥಿಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಘಟನೆಯ ಕುರಿತು ಬಾಲ ನ್ಯಾಯ ಮಂಡಳಿಗೆ ದೂರು ನೀಡಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.(ಏಜೆನ್ಸೀಸ್​)
ಎರಡು ಮಕ್ಕಳ ತಾಯಿಯಾಗಿ ನೀವು ಮಾಡೋದು ಸರಿನಾ? ನೆಟ್ಟಿಗನ ಪ್ರಶ್ನೆಗೆ ಗರಂ ಆದ ಅನಸೂಯ ಭಾರದ್ವಜ್​

ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ದುರಂತ: ವರನ ಸಾವು, ವಧುವಿನ ಸ್ಥಿತಿ ಚಿಂತಾಜನಕ

ಪಾಕ್ ಗೊಂದಲ ಮುಂದುವರಿಕೆ: ಮಾಜಿ ಸಿಜೆ ಹಂಗಾಮಿ ಪಿಎಂ ಸಾಧ್ಯತೆ; ಸುಪ್ರೀಂ ವಿಚಾರಣೆ ಮುಂದಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
