ಪಕುರ್​:ಗ್ಯಾಸ್​ ಸಿಲಿಂಡರ್​ ಸಾಗಿಸುವ ಟ್ರಕ್​ ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದು, ಇತರೆ 26 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ ಜಾರ್ಖಂಡ್​ನ ಪಕುರ್​ ಜಿಲ್ಲೆಯಲ್ಲಿ ನಡೆದಿದ್ದು, ಮೃತರ ಸಾವಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ.
ಬುಧವಾರ 8.30ರ ಸುಮಾರಿಗೆ ಗೋವಿಂದ್​ಪುರ್​-ಸಾಹಿಬ್​ಗಂಜ್​ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸುಮಾರು 40 ಪ್ರಯಾಣಿಕರು ಬಸ್​ನಲ್ಲಿದ್ದರು. ಸಾಹಿಬ್​ಗಂಜ್​ನ ಬರ್ಹಾರ್ವಾದಿಂದ ಡಿಯೋಘರ್​ ಜಿಲ್ಲೆಯ ಜಾಸಿಧಿಹ್​ ಕಡೆಗೆ ಬಸ್​ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಗ್ಯಾಸ್​ ಸಿಲಿಂಡರ್​ ಸಾಗಾಟದ ಟ್ರಕ್​ ಡಿಕ್ಕಿ ಹೊಡೆದಿದೆ. ಪರಿಣಾಮ 17 ಮಂದಿ ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್​ ಕಟರ್​ ಸಹಾಯದಿಂದ ಬಸ್​ನಲ್ಲಿ ಸಿಲುಕಿದ್ದ ಮೃತದೇಹ ಮತ್ತು ಗಾಯಗೊಂಡವರನ್ನು ರಕ್ಷಣೆ ಮಾಡಲಾಗಿದೆ.
ರಸ್ತೆಯಲ್ಲಿ ತೀವ್ರವಾಗಿ ಮಂಜು ಕವಿದಿದ್ದರಿಂದ ಸ್ಪಷ್ಟವಾಗಿ ಗೋಚರಿಸದೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿಯಾದರೂ ಯಾವುದೇ ಗ್ಯಾಸ್​ ಸಿಲಿಂಡರ್​ ಸ್ಫೋಟವಾಗಿಲ್ಲ. ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಘಟನೆಯ ಬಗ್ಗೆ ಪ್ರಧಾನಿ ಮೋದಿ ಕೂಡ ಟ್ವೀಟ್​ ಮಾಡಿದ್ದು, ಜಾರ್ಖಂಡ್​ನ ಪಕುರ್​ನಲ್ಲಿ ನಡೆದ ಅಪಘಾತದಿಂದ ಆಘಾತಕ್ಕೆ ಒಳಗಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ ಹೇಳಲು ಬಯಸುತ್ತೇನೆ. ಮೃತರ ಸಾವಿಗೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲು ಸೂಚನೆ ನೀಡಿದ್ದೇನೆಂದು ಪ್ರಧಾನಿ ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.(ಏಜೆನ್ಸೀಸ್​)
ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ: ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಕೆಜಿಎಫ್​ ನಟಿ​

20 ನಿಮಿಷ ಫ್ಲೈಓವರ್​ನಲ್ಲಿ ಸಿಲುಕಿದ ಮೋದಿ; ಇತಿಹಾಸದಲ್ಲಿ ಕರಾಳ ದಿನ..

ದಿಢೀರ್ ಮೋಡ ಕಾರಣ ಕಾಪ್ಟರ್ ಪತನ; ರಾವತ್ ಹೆಲಿಕಾಪ್ಟರ್ ದುರಂತ ಕುರಿತ ವರದಿ ಸಲ್ಲಿಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
