ಕಾಕ್ಕನಾಡ:ಫ್ಲ್ಯಾಟ್​ ಒಂದರ ಅಡುಗೆ ಕೋಣೆಯಲ್ಲಿ ಗಾಂಜಾ ಬೆಳೆದಿದ್ದ ಇಬ್ಬರು ವ್ಯಕ್ತಿಗಳನ್ನು ಕೇರಳದ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ ನಿನ್ನೆ (ಸೆ.16) ಬಂಧಿಸಿದೆ.
ಬಂಧಿತರನ್ನು ಕೊನ್ನಿ ಮೂಲದ ವಲ್ಯಾತೆಕ್ಕೆತ್ತಿಲ್ ಅಲನ್ (26) ಮತ್ತು ಕಾಯಮಕುಲಂ ಮೂಲದ ಪುತನಪುರಕ್ಕಲ್ ಅಪರ್ಣಾ (24) ಎಂದು ಗುರುತಿಸಲಾಗಿದೆ.
ಕಾಕ್ಕನಾಡ್‌ನ ನಿಲಂಪತಿಂಜಮುಗಲ್‌ನ ಫ್ಲಾಟ್‌ನಲ್ಲಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಗಿಡ ಒಂದೂವರೆ ಮೀಟರ್ ಎತ್ತರವಿದ್ದು, ಅಡುಗೆ ಮನೆಯಲ್ಲಿ ಬೆಳೆಸಲಾಗಿತ್ತು. ಅದಕ್ಕೆ ಪೂರಕವಾಗಿ ಎಲ್ಇಡಿ ಲೈಟ್ ಮತ್ತು ಎಕ್ಸಾಸ್ಟ್ ಫ್ಯಾನ್ ಅನ್ನು ಅಳಡಿಸಲಾಗಿತ್ತು. ಫ್ಲ್ಯಾಟ್​ನಲ್ಲಿ ಗಾಂಜಾ ಸೇವನೆ ಬಗ್ಗೆ ರಹಸ್ಯ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಪೊಲೀಸ್ ಅಧಿಕಾರಿಗಳು ಆರೋಪಿ ಅಲನ್ ಅವರ ನೆರೆಹೊರೆಯವರಾದ ಅಮಲ್ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ತೆಗೆದುಕೊಂಡಿದ್ದಾರೆ. ಅಮಲ್ ಅವರು ಅಲನ್​ ಸಮೀಪದ ಫ್ಲ್ಯಾಟ್​ನಲ್ಲಿ ವಾಸವಾಗಿದ್ದರು. ಅಲನ್​ ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನಿಂದಲೂ ಗಾಂಜಾ ವಶಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ದಶಕಗಳ ಹಿಂದೆ ಕಳಚಿಕೊಂಡಿದ್ದ ಜೀವವೈವಿಧ್ಯದ ಕೊಂಡಿ ಮರುಸ್ಥಾಪನೆ: ಚೀತಾಗಳ ಆಗಮನ, ಪ್ರಧಾನಿ ಸಂತಸ

ಹಾವಿನ ಪಕ್ಕದಲ್ಲೇ ಮಲಗಿ ಸಾವು ಗೆದ್ದ ಕಂದ! ಪಾಳುಬಾವಿಗೆ ಹಸುಗೂಸನ್ನು ಎಸೆದಿದ್ದ ಹೆತ್ತಮ್ಮ… ಮಂಡ್ಯದಲ್ಲಿ ಮನಕಲಕುವ ಘಟನೆ

ಆಫ್ಘಾನ್​ನಲ್ಲಿ ಅಡಗಿದ್ದಾನೆ ಜಾಗತಿಕ ಉಗ್ರ ಮಸೂದ್​ ಅಜರ್: ಪಾಕ್​ ವಿದೇಶಾಂಗ ಸಚಿವರ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 12 =
Remember me
