ಮುಂಬೈ:ದುಬೈನಿಂದ ಮರಳಿದ ಟೀಮ್​ ಇಂಡಿಯಾ ಆಲ್​ರೌಂಡರ್​ ಆಟಗಾರ ಹಾರ್ದಿಕ್​ ಪಾಂಡ್ಯ ಬಳಿ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ಮಂಗಳವಾರ ವರದಿಯಾಗಿದೆ.
ಎರಡು ವಾಚ್​ಗಳಿಗೆ ಪಾಂಡ್ಯ ಬಳಿ ಬಿಲ್​ ಇರಲಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿಯೇ ವಾಚ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಸ್ಟಮ್ಸ್​ ಇಲಾಖೆಯೇ ಟ್ವೀಟ್​ ಮೂಲಕ ಅಧಿಕೃತವಾಗಿ ತಿಳಿಸಿದೆ.
ಟಿ20 ವಿಶ್ವಕಪ್​ ಟೂರ್ನಿ ಮುಗಿದ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯ ತವರಿಗೆ ವಾಪಾಸ್ಸಾಗಿದ್ದಾರೆ. ದುಬೈನಿಂದ ಭಾನುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಾರ್ದಿಕ್ ಪಾಂಡ್ಯರನ್ನು ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳು ಪತ್ತೆಯಾಗಿವೆ. ಅದರ ಬಿಲ್​ ಕೇಳಿದ್ದಕ್ಕೆ ಇಲ್ಲ ಎಂಬ ಉತ್ತರ ಪಾಂಡ್ಯರಿಂದ ಬಂದಿದೆ. ಹೀಗಾಗಿ ವಾಚ್​ಗಳನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ.
ಎಎನ್​ಐ ಪ್ರಕಾರ, ಹಾರ್ದಿಕ್ ಅವರ ಸಹೋದರ, ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರು ಕಳೆದ ವರ್ಷ ಬಹಿರಂಗಪಡಿಸದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆದು ಇದೇ ವೇಳೆ ತಪಾಸಣೆ ನಡೆಸಲಾಯಿತು.(ಏಜೆನ್ಸೀಸ್​)
ಸೀರೆ ಧರಿಸಿ ಬರಲು ವಧುವಿನ ಕೊಠಡಿಗೆ ಹೋದ ವಧು ಮರಳಿ ಬರಲೇ ಇಲ್ಲ: ವರನಿಗೆ ಕಾದಿತ್ತು ಶಾಕ್!​

ಪುಷ್ಪಾ ಚಿತ್ರದ ಐಟಂ ಡಾನ್ಸ್​ಗೆ ನಟಿ ಸಮಂತಾ ಪಡೆದಿರುವ ಸಂಭಾವನೆ ಮೊತ್ತ ಕೇಳಿದ್ರೆ ದಂಗಾಗ್ತೀರಾ?

2 ಸಾವಿರ ಮುಟ್ಟಲ್ಲ 3 ಸಾವಿರನೇ ಬೇಕು ಅಂದಿದ್ದ ಲೇಡಿ ಪಿಡಿಒ ಮತ್ತೊಂದು ಕರಾಳ ಮುಖ ಬಯಲು

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಗೌರವ ಸೂಚಿಸಲು ಹೋಗಿ KSRTC ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fourteen =
Remember me
