ಮುಂಬೈ:ಮಹಾರಾಷ್ಟ್ರದ ಜಲ್ನಾದಲ್ಲಿರುವ ಕೆಲ ಉದ್ಯಮ ಸಮೂಹಕ್ಕೆ ಸೇರಿದ ಅನೇಕ ಪ್ರದೇಶಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಬೇನಾಮಿ ಅಥವಾ ಲೆಕ್ಕಕ್ಕೆ ಸಿಗದ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದ ಪ್ರಕರಣವು ಯಾವ ಸಿನಿಮಾ ದೃಶ್ಯಕ್ಕಿಂತ ಕಡಿಮೆ ಏನಿಲ್ಲ. ಯಾಕೆಂದರೆ, ಸುಮ್ಮನೇ ಹೋಗಿ ದಾಳಿ, ಮಾಡಿದ್ದಲ್ಲ. ದಾಳಿಯ ಹಿಂದಿತ್ತು ರೋಚಕ ಪ್ಲಾನ್​.
ಹೌದು, ಆಗಸ್ಟ್ 3ರಂದು ಐಟಿ ಅಧಿಕಾರಿಗಳು ನಡೆಸಿದ ದಾಳಿಯು ಥೇಟ್​ ಸಿನಿಮಾ ಶೈಲಿಯಲ್ಲಿಯೇ ಇತ್ತು. ಮದುವೆ ಪಾರ್ಟಿಗೆ ಹೋಗುವ ರೀತಿಯಲ್ಲಿ ವೇಷಭೂಷಣ ಧರಿಸಿ, ದಾಳಿ ನಡೆಸಿದ ಫಲಿತಾಂಶವಾಗಿ 56 ಕೋಟಿ ರೂಪಾಯಿ ನಗದು, 14 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಚಿನ್ನ, ಹರಳು ಮತ್ತು ಡೈಮಂಡ್​ ಹಾಗೂ ಕೆಲ ಆಸ್ತಿ ದಾಖಲೆಗಳು ಸೇರಿದಂತೆ ಒಟ್ಟು 390 ಕೋಟಿ ರೂಪಾಯಿ ಬೇನಾಮಿ ಆಸ್ತಿಯನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ತಮ್ಮ ಪ್ಲಾನ್​ ಅನ್ನು ಕಾರ್ಯಗತಗೊಳಿಸಲು ಐಟಿ ಇಲಾಖೆ 120 ಕಾರುಗಳನ್ನು ಬಳಸಿಕೊಂಡಿತು. ಆದರೆ, ದಾಳಿಯ ಬಗ್ಗೆ ಯಾರು ಮಾಹಿತಿ ನೀಡಬಾರದು ಅಂತಾ ವಾಹನಗಳು ಬೇರೆ ಬೇರೆಯಾಗಿ ಹೊರಟವು. ಮದುವೆ ದಿಬ್ಬಣಕ್ಕೆ ಹೊರಟಿರುವಂತೆಯೇ ವಾಹನಗಳನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಕೆಲವೊಂದು ಕಾರುಗಳ ಮೇಲೆ “ದುಲಾನ್​ ಹಮ್​ ಲೇ ಜಾಯೆಂಗೆ” (ನಾನು ಅವಳನ್ನು ಮದುವೆಯಾಗುತ್ತೇನೆ) ಎಂಬ ಪ್ರಖ್ಯಾತ ಹಿಂದಿ ಸಿನಿಮಾದ ಸಾಲುಗಳನ್ನು ಸಹ ಬರೆಯಲಾಗಿತ್ತು.
ಸುಮಾರು 250 ಆದಾಯ ತೆರಿಗೆ ಮತ್ತು ಪೊಲೀಸ್​ ಅಧಿಕಾರಿಗಳು ಚೆನ್ನಾಗಿ ಉಡುಗೆ ಧರಿಸಿಕೊಂಡು ಪೇಟೆ ಹಾಕಿಕೊಂಡು ಮದುವೆಗೆ ಹೋಗುವ ವೇಷದಲ್ಲಿ ದಾಳಿ ನಡೆಸಿದ್ದಾರೆ. ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ವ್ಯವಹರಿಸುವ ಎರಡು ವ್ಯಾಪಾರ ಗುಂಪುಗಳಿಗೆ ಸಂಬಂಧಿಸಿದ ಆವರಣಗಳು, ಗೋದಾಮುಗಳು ಮತ್ತು ಫಾರ್ಮ್‌ಹೌಸ್‌ಗಳಲ್ಲಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿವೆ.
Maharashtra | Income Tax conducted a raid at premises of a steel, cloth merchant & real estate developer in Jalna from 1-8 Aug. Around Rs 100 cr of benami property seized – incl Rs 56 cr cash, 32 kgs gold, pearls-diamonds & property papers. It took 13 hrs to count the seized cashpic.twitter.com/5r9MHRrNyR
— ANI (@ANI)August 11, 2022

ದಾಳಿ ವೇಳೆ ಸಿಕ್ಕ ನಗದು ಎಣಿಸಲು ಅಧಿಕಾರಿಗಳಿಗೆ ಸುಮಾರು 13 ತಾಸುಗಳ ಸಮಯ ತೆಗೆದುಕೊಂಡಿದೆ. ಜಿಲ್ಲೆಯ ಕೆಲವು ಉದ್ಯಮಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಬಳಿಕ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತು.(ಏಜೆನ್ಸೀಸ್​)
ಐಟಿ ಅಧಿಕಾರಿಗಳ ಮಹಾ ಬೇಟೆ: 56 ಕೋಟಿ ನಗದು, 32 ಕೆಜಿ ಚಿನ್ನಾಭರಣ ಸೇರಿ 390 ಕೋಟಿ ರೂ, ಬೇನಾಮಿ ಆಸ್ತಿ ಪತ್ತೆ

ಕ್ರೈಸ್ಟ್ ಕಾಲೇಜಿನ 7 ವಿದ್ಯಾರ್ಥಿಗಳ ಹುಚ್ಚಾಟ: ಕೆರೆಗೆ ಕಾರು ಪಲ್ಟಿ

ನಮ್ಮಪ್ಪನಿಗೆ ಸೇರಿದ್ದು ಅಂತ ನಡುರಸ್ತೆಯಲ್ಲೇ ಎಣ್ಣೆ ಕುಡಿದ ಸೋಶಿಯಲ್​ ಮೀಡಿಯಾ ಸ್ಟಾರ್​ಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
