ನವದೆಹಲಿ:ಟಿ20 ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿದ್ದಕ್ಕೆ ಪಾಕ್​ ಪರ ಘೋಷಣೆ ಕೂಗಿ, ವಿಜಯೋತ್ಸವ ಆಚರಿಸಿದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೂವರು ಕೂಡ ಕಾಶ್ಮೀರಿ ವಿದ್ಯಾರ್ಥಿಗಳಾಗಿದ್ದು, ಆಗ್ರಾದ ರಾಜಾ ಬಲ್ವಂತ್​ ಸಿಂಗ್​ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳನ್ನು ತೃತೀಯ ವರ್ಷದ ಇಂಜಿನಿಯರ್​ ವಿದ್ಯಾರ್ಥಿ ಅರ್ಷಿದ್​ ಯೂಸುಫ್​, ಇನಾಯತ್​ ಶೇಕ್​ ಹಾಗೂ ನಾಲ್ಕನೇ ವರ್ಷದ ಶೋಕತ್​ ಅಹ್ಮದ್​ ಗನೈ ಎಂದು ಗುರುತಿಸಲಾಗಿದೆ.
ಈಗಾಗಲೇ ಕಾಲೇಜು ಆಡಳಿತ ಮಂಡಳಿ ಮೂವರನ್ನು ಅಮಾನತು ಮಾಡಿದೆ. ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಪಾಕ್​ ಪರವಾಗಿ ಆರೋಪಿಗಳು ಸ್ಟೇಟಸ್​ ಹಾಕಿ ದೇಶದ್ರೋಹದ ಕೃತ್ಯ ಎಸಗಿದ್ದಾರೆ. ಇಷ್ಟೇ ಅಲ್ಲದೇ ಇನ್ನು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬರೇಲಿಯಲ್ಲಿ ಮೂವರು ಹಾಗೂ ಲಖನೌದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (1) (ಬಿ) (ಯಾವುದೇ ಹೇಳಿಕೆ/ವದಂತಿಯನ್ನು ಮಾಡಿದವರು/ಪ್ರಕಟಿಸುವವರು/ಪ್ರಸರಣ ಮಾಡುವುದು /ವರದಿ) ಮತ್ತು ಐಟಿ ಕಾಯಿದೆ 2008ರ ವಿಭಾಗ 66ಎಫ್​ (ಸೈಬರ್ ಭಯೋತ್ಪಾದನೆಗೆ ಶಿಕ್ಷೆ) ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.(ಏಜೆನ್ಸೀಸ್​)
ಟೀಮ್​ ಇಂಡಿಯಾ ವಿರುದ್ಧ ಗೆಲುವು: ಪಾಕ್​ ಪರ ಘೋಷಣೆ ವಿರೋಧಿಸಿದ ವಿದ್ಯಾರ್ಥಿನಿಗೆ ಬೆದರಿಕೆ ಕರೆ

ವಿಡಿಯೋಕ್ಕೆ ಸಹಿ ಹಾಕಿಸಿಕೊಂಡ್ರು, ಲೈಫ್‌ ಹಾಳು ಮಾಡಿದ್ರು: ಶಿಲ್ಪಾ ವಿರುದ್ಧ 50 ಕೋಟಿ ರೂ. ಪರಿಹಾರಕ್ಕೆ ನಟಿ ಶೆರ್ಲಿನ್‌ ಕೇಸ್‌

ಸಿಖ್ಖರ ನೆಲದಲ್ಲಿ ಮದಗಜಗಳ ಕಾಳಗಕ್ಕೆ ರಂಗ ಸಜ್ಜು: ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಹೊಸ ಪಕ್ಷ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
