ಹೈದರಾಬಾದ್​:ಗಾಚಿಬೌಲಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಿರಿಯ ಕಲಾವಿದರು ಹಾಗೂ ಓರ್ವ ಬ್ಯಾಂಕ್​ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಇಂದು (ಡಿ.18) ನಸುಕಿನ ಜಾವ 3.30ರ ಸಮಯದಲ್ಲಿ ಅಪಘಾತ ನಡೆದಿದೆ.
ಮಾನಸ ಎಂ (21) ಮತ್ತು ಮಾನಸ ಎನ್​ (23) ಮತ್ತು ಬ್ಯಾಂಕ್​ ಉದ್ಯೋಗಿ ಅಬ್ದುಲ್​ ರಹೀಮ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿ ಸಿಧು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸ ಎಂ ಮತ್ತು ಮಾನಸ ಎನ್​ ಅಮರಪೇಟೆಯ ಹಾಸ್ಟೆಲ್​ನಲ್ಲಿ ವಾಸವಿದ್ದರು. ಇಬ್ಬರು ಟಿವಿ ಸೀರಿಯಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಬ್ದುಲ್​ ರಹೀಮ್​ (25) ವಿಜಯವಾಡ ಮೂಲದವನಾಗಿದ್ದು, ಮಧಪುರ್​ನ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಉದ್ಯೋಗಿ ಆಗಿದ್ದ.
ಕಾರು ಗಾಚಿಬೌಲಿಯಿಂದ ಲಿಂಗಂಪಲ್ಲಿಗೆ ಪ್ರಯಾಣಿಸುತ್ತಿತ್ತು. ಅಬ್ದುಲ್​ ಕಾರು ಚಲಾಯಿಸುತ್ತಿದ್ದ. ಕಾರು ಅತಿವೇಗದಲ್ಲಿದ್ದರಿಂದ ಸ್ಟೀರಿಂಗ್​ ನಿಯಂತ್ರಣ ಕಳೆದುಕೊಂಡ ಅಬ್ದುಲ್​, ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.​ ಮೃತದೇಹಗಳನ್ನು ಪೊಲೀಸರು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಕಾರು ಚಾಲಕ ಅಬ್ದುಲ್​ ಮದ್ಯಪಾನ ಮಾಡಿದ್ದ ಎಂದು ಗಾಯಾಳು ಸಿಧು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)
A speedy car split into 2 parts after hit a tree, 3 people were dead on the spot and 1 suffered serious injuries at#Gachibowliarea in#Hyderabadon Saturday.The deceased are 2 female junior artists and a bank employee.#caraccident#Carsplits2parts#DrunkandDrivepic.twitter.com/ZLWc4VQx2w
— Surya Reddy (@jsuryareddy)December 18, 2021

A post shared by Manasa (@manasa_narayanmurthy)

A post shared by Manasa (@manasa_narayanmurthy)

A post shared by Manasa (@manasa_narayanmurthy)

ಸರ್ಕಾರಿ ಕೆಲ್ಸಕ್ಕೆ ಸೇರಿದ ಎಂಟೇ ದಿನಕ್ಕೆ ಯುವತಿ ದುರ್ಮರಣ: ದಿನಗೂಲಿ ನೌಕರನ ಆಸೆಗೆ ಬಲಿಯಾಯ್ತು ಜೀವ

ಕ್ಷಮೆಯಾಚಿಸದಿದ್ರೆ ಚಪ್ಪಲಿ ಏಟು: ಐಟಂ ಸಾಂಗ್​ ಭಕ್ತಿ ಗೀತೆ ಇದ್ದಂತೆ ಎಂದ ಡಿಎಸ್​ಪಿಗೆ ಬಿಜೆಪಿ ಶಾಸಕ ಎಚ್ಚರಿಕೆ!

ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − fourteen =
Remember me
