ನವದೆಹಲಿ:ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಏನು ಅರಿಯದ ವಿದ್ಯಾರ್ಥಿಗಳ ಮನಸ್ಸಲ್ಲಿ ಅಂಕಗಳ ತಾರತಮ್ಯ ಮಾನಸಿಕವಾಗಿ ಕುಗ್ಗಿಸಿ ಬಿಡುತ್ತದೆ. ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪಾಲಕರು ಕೂಡ ಎಡವಿದ್ದಾರೆ. ಅಚ್ಚರಿಯೆಂದರೆ, ಇಂದು ಎಷ್ಟೇ ಅಂಕ ಬಂದರು ತೃಪ್ತಿ ಅನ್ನು ಭಾವನೆಯೇ ಇಲ್ಲ. ಅದರಲ್ಲೂ ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಆಗಿದ್ದರೂ ತಾತ್ಸಾರದ ಭಾವನೆ. ಇದೆಲ್ಲ ಕಾರಣದಿಂದ ಇಂದು ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎಂಬ ಭಯ ಕಾಡುತ್ತಿದೆ.
ಆದರೆ, ಕೆಲವರ ಜೀವನದ ಹಾದಿ ನೋಡಿದರೆ ಅಂಕಗಳಿಗಿಂತ ನಮ್ಮ ಕಲಿಕೆಯೇ ಮುಖ್ಯವಾದದ್ದು ಎಂಬುದು ಸಾಬೀತಾಗುತ್ತದೆ. ಇನ್ನೇನು ಬೋರ್ಡ್​ ಪರೀಕ್ಷೆಯ ಫಲಿತಾಂಶ ಬರಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಐಎಎಸ್​ ಅಧಿಕಾರಿಯೊಬ್ಬರು 10ನೇ ತರಗತಿಯ ಅಂಕಪಟ್ಟಿಯೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.
ಶೇರ್​ ಮಾಡಿರುವ ಅಂಕಪಟ್ಟಿ ಗುಜರಾತಿನ ಭರುಚ್​ ಜಿಲ್ಲಾಧಿಕಾರಿ ತುಷಾರ್​ ಡಿ ಸುಮೇರಾ ಅವರದ್ದು. 10ನೇ ತರಗತಿಯಲ್ಲಿ ತುಷಾರ್​ ಅವರು ಪಡೆದಿರುವ ಅಂಕ ನೋಡಿದರೆ ನೀವು ಅಚ್ಚರಿ ಪಡುತ್ತೀರಾ. ಇಂಗ್ಲಿಷ್​ನಲ್ಲಿ 35 ಮತ್ತು ಗಣಿತದಲ್ಲಿ ಕೇವಲ 36 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಇಂದು ಜಿಲ್ಲಾಧಿಕಾರಿಯಾಗಿದ್ದಾರೆಂದರೆ ಅದಕ್ಕೆ ಕಾರಣ ಅವರ ಅಂಕವಲ್ಲ ಅವರಲ್ಲಿರುವ ಅಗಾಧವಾದ ಜ್ಞಾನ ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ತುಷಾರ್​ ಅವರ ಅಂಕಪಟ್ಟಿಯನ್ನು ಛತ್ತೀಸ್​ಗಢ ಕೇಡರ್​ನ 2009ರ ಬ್ಯಾಚಿನ ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಎಂಬುವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಅವರು ತಮ್ಮ 10 ನೇ ತರಗತಿಯ ಅಂಕಪಟ್ಟಿ ಹಂಚಿಕೊಳ್ಳುವಾಗ, ಅವರು 10 ನೇ ತರಗತಿಯಲ್ಲಿ ಮಾತ್ರ ಉತ್ತೀರ್ಣರಾಗಿದ್ದಾರೆ ಎಂದು ಬರೆದಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕಗಳನ್ನು ಮಾತ್ರ ಪಡೆದಿದ್ದಾರೆ. ನಿನ್ನ ಕೈಯಲ್ಲಿ ಏನು ಆಗಲ್ಲ ಅಂತಾ ಇಡೀ ಹಳ್ಳಿಯಲ್ಲಿ ಮಾತ್ರವಲ್ಲ ಅವರ ಶಾಲೆಯಲ್ಲೂ ಕೂಡ ಹೇಳಿದ್ದರು. ಆದರೆ, ಅಂದು ಆ ಮಾತನ್ನು ಹೇಳಿದವರೇ ಇಂದು ತುಷಾರ್​ ಅವರನ್ನು ಕೊಂಡಾಡುತ್ತಿದ್ದಾರೆ ಎಂದು ಅವನೀಶ್​ ಅವರು ಬರೆದುಕೊಂಡಿದ್ದಾರೆ.
भरूच के कलेक्टर तुषार सुमेरा ने अपनी दसवीं की मार्कशीट शेयर करते हुए लिखा है कि उन्हें दसवीं में सिर्फ पासिंग मार्क्स आए थे.
उनके 100 में अंग्रेजी में 35, गणित में 36 और विज्ञान में 38 नंबर आए थे. ना सिर्फ पूरे गांव में बल्कि उस स्कूल में यह कहा गया कि यह कुछ नहीं कर सकते.pic.twitter.com/uzjKtcU02I
— Awanish Sharan (@AwanishSharan)June 11, 2022

ಅವನೀಶ್​ ಅವರ ಪೋಸ್ಟ್​ಗೆ ತುಷಾರ್​ ಅವರು ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂದಹಾಗೆ ತುಷಾರ್ ಸುಮೇರಾ ಅವರು 2012 ರಲ್ಲಿ ಐಎಎಸ್ ಅಧಿಕಾರಿಯಾದರು. ಅವರು ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿ ಪೂರ್ಣಗೊಳಿಸಿದರು ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೊದಲು ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.(ಏಜೆನ್ಸೀಸ್​)
Thank You Sirhttps://t.co/MFnZ7vSICz
— Tushar D. Sumera,IAS (@TusharSumeraIAS)June 11, 2022

ಡೈನೊಸಾರ್ ಮೊಟ್ಟೆಗಳು ಪತ್ತೆ!

ಷೇರುಪೇಟೆಯಲ್ಲಿ ತಲ್ಲಣ; ಹೂಡಿಕೆದಾರರ 6 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ

ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
