ಕೊಚ್ಚಿ:ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಯಿಕ್ಕೋಡ್​ನ ನಾರತ್​ ವೆಸ್ಟ್​ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ತಾನ್ವಿ ಎಂದು ಗುರುತಿಸಲಾಗಿದೆ. ಮೃತ ತಾನ್ವಿ, ಪ್ರವೀಣ್​ ಮತ್ತು ಶರಣ್ಯಾ ದಂಪತಿಯ ಒಬ್ಬಳೇ ಮಗಳು. ಕಣ್ಣೂರಿನಲ್ಲಿರುವ ಇಂಡಿಯನ್​ ಪಬ್ಲಿಕ್​ ಸ್ಕೂಲ್​ನ ಕಿಂಡರ್​ಗಾರ್ಡನ್​ ವಿದ್ಯಾರ್ಥಿನಿಯಾಗಿದ್ದಳು. ಒಬ್ಬಳೇ ಮಗಳನ್ನು ಕಡೆದುಕೊಂಡ ಪ್ರವೀಣ್​-ಶರಣ್ಯಾ ದಂಪತಿ ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಈ ಘಟನೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಮಿಕ್ಸ್ಚರ್ ಸ್ನ್ಯಾಕ್​ ತಿನ್ನುವಾಗ ಅದರಲ್ಲಿದ್ದ ಕಡಲೆಬೀಜ ತಾನ್ವಿಯ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ತಾನ್ವಿ ಕೊನೆಯುಸಿರೆಳೆದಿದ್ದಾಳೆ.
ಕೊಯಿಲ್ಯಾಂಡಿ ತಾಲೂಕು ಆಸ್ಪತ್ರೆಯಿಂದ ಕೊಯಿಕ್ಕೋಡ್​ ವೈದ್ಯಕೀಯ ಕಾಲೇಜಿಗೆ ಸಾಗಿಸುವಾಗ ಮಾರ್ಗ ಮಧ್ಯೆ ತಾನ್ವಿ ಮೃತಪಟ್ಟಿದ್ದಾಳೆ.(ಏಜೆನ್ಸೀಸ್​)
ಪ್ರೀತಿಯ ನೆನಪೇ ಸ್ಟಾರ್​ ಜೋಡಿಗೆ ಮುಳುವಾಯ್ತು: ವಿಘ್ನೇಶ್​ ಶಿವನ್​-ನಯನತಾರಾ ವಿರುದ್ಧ ದೂರು ದಾಖಲು!

ಆರ್​ಟಿ ನಗರದ ಬ್ರೋಕರ್​ ಮೋಹನ್ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತು ಪತ್ತೆ

ಹಿಜಾಬ್‌ ಕೇಸ್‌- ಬಂದ್‌ಗೆ ಕರೆ ನೀಡಿದವರ ವಿರುದ್ಧ ನ್ಯಾಯಾಂಗ ನಿಂದನೆ ತೂಗುಕತ್ತಿ! ಹೈಕೋರ್ಟ್‌ಗೆ ವಕೀಲರಿಂದ ಅರ್ಜಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + 13 =
Remember me
