ಕೊಚ್ಚಿ:ಬೇಕರಿಯಿಂದ ಕೊಂಡು ತಂದ ಹಲ್ವಾವನ್ನು ತಿನ್ನುವಾಗ ಶ್ವಾಸನಾಳಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಶುಕ್ರವಾರ ವರದಿಯಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?
ನಿಜಾರ್​ (49) ಮೃತಪಟ್ಟ ವ್ಯಕ್ತಿ. ಈತ ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿಪರಂಬುವಿನ ನಿವಾಸಿ. ಹಲ್ವಾ ಶ್ವಾಸನಾಳದಲ್ಲಿ ಸಿಲುಕಿಕೊಂಡು ನಿಜಾರ್ ಮನೆಯಲ್ಲೇ​ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ನಿಜಾರ್ ಕಾರ್ಮಿಕನಾಗಿದ್ದ. ಬುಧವಾರ ಬೆಳಗ್ಗೆ ಆತ ಬೇಕರಿಯಲ್ಲಿ ಹಲ್ವಾ ಕೊಂಡು ತಂದು ಸೇವಿಸಿದ್ದ. ಬಳಿಕ ದೇಹದಲ್ಲಿ ಕೊಂಚ ಇರುಸುಮುರುಸು ಉಂಟಾಗಿ, ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಸ್ಥಳೀಯರು ಛಕಲಾ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ​
ಇದನ್ನೂ ಓದಿ:ವೀಕ್ಷಕರನ್ನೇ ಗೊಂದಲಕ್ಕೀಡುಮಾಡಿದ ಜಯಶ್ರೀ ಆರಾಧ್ಯ: ಮಾರಿಮುತ್ತು ಮೊಮ್ಮಗಳ ವರ್ತನೆಗೆ ಅಸಮಾಧಾನ
ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಮಂಜಾಳಿ ಜುಮಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. ನಜಾರ್​ ಅವರು ತಮ್ಮ ಪತ್ನಿ ರಮ್ಲಾ ಮತ್ತು ಮಕ್ಕಳಾದ ನಿಲೋಫರ್ ಮತ್ತು ಜೆನ್ನಿಫರ್ ಅವರನ್ನು ಅಗಲಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ಗೆ ಗುಲಾಂ ನಬಿ ಆಜಾದ್​ ಗುಡ್​ ಬೈ: ಪಕ್ಷ ತೊರೆಯಲು ಕೊಟ್ಟ ಕಾರಣ ಹೀಗಿದೆ..

ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಸೆರೆಗೆ ಹನಿಟ್ರ್ಯಾಪ್​! 9 ಕಡೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ

ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದವನಿಗೆ ಬುದ್ಧಿವಾದ ಹೇಳಿದ ವ್ಯಕ್ತಿಯ ಕೊಲೆ: ಅಪರಾಧಿಗೆ ಆಯ್ತು ತಕ್ಕ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − two =
Remember me
