ಭೋಪಾಲ್​:ಮಧ್ಯಪ್ರದೇಶದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಸರ್ಕಾರಿ ಅಧಿಕಾರಿಯ ಮನೆಯನ್ನು ನೋಡಿ ಇಒಡಬ್ಲ್ಯು ಅಧಿಕಾರಿಗಳೇ ಬೆಸ್ತುಬಿದ್ದಿದ್ದಾರೆ. ಏಕೆಂದರೆ, ಯಾವ ಫೈವ್​​ ಸ್ಟಾರ್​ ಹೋಟೆಲ್​ಗೂ ಕಡಿಮೆ ಇಲ್ಲ ಅನ್ನುವಂತಿದೆ ಅಧಿಕಾರಿಯ ಐಷಾರಾಮಿ ನಿವಾಸ.
ಒಂದು ಈಜುಕೊಳ, ಒಂದು ದೊಡ್ಡ ಸ್ನಾನದ ತೊಟ್ಟಿ, ಮಿನಿ ಬಾರ್​ ಮತ್ತು ಒಂದು ಹೋಮ್​​ ಥಿಯೇಟರ್​ ಸೇರಿದಂತೆ ಲಕ್ಷುರಿ ಹೋಟೆಲ್​ನಲ್ಲಿರುವ ಇರುವ ಎಲ್ಲ ಸೌಲಭ್ಯಗಳನ್ನು ತಮ್ಮ ಮನೆಯಲ್ಲೇ ಅಧಿಕಾರಿ ಮಾಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಪಟಿಯಾಲದಲ್ಲಿ ಈ ಐಷಾರಾಮಿ ಮನೆ ಇದೆ. ಇದಿಷ್ಟು ಮಧ್ಯಪ್ರದೇಶದ ಆರ್​ಟಿಒ ಅಧಿಕಾರಿ ಸಂತೋಷ್​ ಪೌಲ್​ ಎಂಬುವರಿಗೆ ಸೇರಿದ್ದಾಗಿದೆ.
ಅಕ್ರಮ ಆಸ್ತಿ ಸಂಪದಾನೆ ಆರೋಪ ಹಿನ್ನೆಲೆಯಲ್ಲಿ ಜಬಲ್ಪುರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದಾಗ ಸರ್ಕಾರಿ ಅಧಿಕಾರಿಯ ಕರ್ಮಕಾಂಡ ಬಯಲಾಗಿದೆ. ಮನೆಯಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಸಾಕ್ಷಿಯಾಗಿ ದಾಳಿಯ ವೇಳೆ ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಮನೆಗಳು ಅಧಿಕಾರಿಗೆ ಸಂಬಂಧಿಸಿದ್ದಾಗಿದೆ.
Swimming pool, jacuzzi and a mini bar this is not a description of a 5-star resort but are among the many luxurious features of the palatial house of a government officer in Jabalpur@ndtv@ndtvindiapic.twitter.com/8hyq4uHdu9
— Anurag Dwary (@Anurag_Dwary)August 18, 2022

ಇಒಡಬ್ಲ್ಯು ಅಧಿಕಾರಿಗಳ ದಾಳಿಯ ವೇಳೆ 15 ಲಕ್ಷ ರೂಪಾಯಿ ನಗದು, ದುಬಾರಿ ಚಿನ್ನಾಭರಣಗಳು, ಲಕ್ಷುರಿ ಕಾರುಗಳು, ಮನೆಗಳು ಮತ್ತು ಫಾರ್ಮ್​ ಹೌಸ್​ಗಳು ಪತ್ತೆಯಾಗಿವೆ. ಅಧಿಕಾರಿ ಸಂತೋಷ್​ ಪೌಲ್​​ ಪತ್ನಿ ರೇಖಾ ಕೂಡ ಸರ್ಕಾರಿ ಉದ್ಯೋಗಿಯಾಗಿದ್ದು, ಗಂಡನ ಕಚೇರಿಯಲ್ಲೇ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದಾಳೆ.
ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಯ ಆದಾಯದ ಮೂಲಗಳಿಗೆ ಹೋಲಿಸಿದರೆ ಶೇ. 650 ರಷ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಅತಿರೇಕಕ್ಕೆ ಮೊಟ್ಟೆ ರಾಜಕೀಯ

ಡಿಕೆಶಿ ಸಿಎಂ ಆಗೋದಾದ್ರೆ ಸಹಕಾರ! ಒಕ್ಕಲಿಗರ ಸಮಾವೇಶದಲ್ಲಿ ಎಚ್​ಡಿಕೆ ಹೇಳಿಕೆ

8 ಯೂಟ್ಯೂಬ್ ಚಾನಲ್ ಬಂದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + six =
Remember me
