ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಜೈಷ್​ ಇ ಮೊಹಮ್ಮದ್​ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್​ ಸೇರಿದಂತೆ ಐವರು ಉಗ್ರರನ್ನು ಭದ್ರತಾ ಪಡೆಗಳು ಸೆದೆಬಡಿದಿದ್ದಾರೆ.
ಶನಿವಾರ ರಾತ್ರಿ ಪುಲ್ವಾಮಾ ಮತ್ತು ಬುದ್ಗಮ್​ ಜಿಲ್ಲೆಯಲ್ಲಿ ಉಗ್ರ ವಿರೋಧ ಕಾರ್ಯಾಚರಣೆ ನಡೆಸುವಾಗ ನಡೆದ ಎನ್​ಕೌಂಟರ್​ನಲ್ಲಿ ಉಗ್ರರು ಹತರಾಗಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಕೇವಲ 12 ಗಂಟೆಯಲ್ಲಿ ಪಾಕ್​ ಪ್ರಾಯೋಜಕತ್ವದ ಲಷ್ಕರ್​ ಇ ತೊಯ್ಬಾ ಮತ್ತು ಜೈಷ್​ ಇ ಮೊಹಮ್ಮದ್ ಉಗ್ರ ಸಂಘಟನೆಗಳಿಗೆ ಸೇರಿದ ಐವರನ್ನು ಹೊಡೆದುರುಳಿಸಲಾಗಿದೆ. ಮೃತರಲ್ಲಿ ಜೆಇಎಂ ಕಮಾಂಡರ್​ ಉಗ್ರ ಜಾಹೀದ್​ ವಾನಿ ಕೂಡ ಸೇರಿದ್ದು, ಇದೊಂದು ದೊಡ್ಡ ಯಶಸ್ಸು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
05#terroristsof#Pakistansponsored proscribed#terroroutfits LeT & JeM killed in dual#encountersin last 12 hours. JeM commander terrorist Zahid Wani & a Pakistani terrorist among the killed. Big#successfor us: IGP Kashmir@JmuKmrPolice
— Kashmir Zone Police (@KashmirPolice)January 30, 2022

ಕಳೆದ ತಿಂಗಳು 12ಕ್ಕೂ ಅಧಿಕ ಎನ್​ಕೌಂಟರ್​ನಲ್ಲಿ 22 ಉಗ್ರರನ್ನು ಸೆದೆಬಡಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.(ಏಜೆನ್ಸೀಸ್​)
ಟೆನಿಸ್ ಕೋರ್ಟ್‌ಗೆ ವಿದಾಯ ನಿರ್ಧಾರ: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಕೊಟ್ಟ ಅಸಲಿ ಕಾರಣಗಳಿವು…

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸಿಹಿಕಹಿ: ರೈತರ ಪ್ರತಿಭಟನೆ ಬಿಸಿ; ಜನಕಲ್ಯಾಣ, ಕಾನೂನು ಸುವ್ಯವಸ್ಥೆ ಬಲ

ಮಾರ್ಚ್​ನಲ್ಲಿ ಚುನಾವಣೆ ಪರ್ವ: ಬಜೆಟ್ ಬಳಿಕ ತಾಪಂ-ಜಿಪಂ, ಏಪ್ರಿಲ್​ನಲ್ಲಿ ಬಿಬಿಎಂಪಿ ಫೈಟ್ ಬಹುತೇಕ ಫಿಕ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 18 =
Remember me
