ನೊಯ್ಡಾ (ಉತ್ತರ ಪ್ರದೇಶ):ಕರೊನಾ ಲಾಕ್​ಡೌನ್ ನಡುವೆಯೂ ಯಾವುದೇ ಅನುಮತಿ ಇಲ್ಲದೆ ಪಾರ್ಟಿಯಲ್ಲಿ ತೊಡಗಿದ್ದ 15 ಯುವತಿಯರು ಸೇರಿ 61 ಮಂದಿಯನ್ನು ಬಂಧಿಸಿರುವ ಘಟನೆ ಥಾನಾ ಹೆದ್ದಾರಿಯ ಸೆಕ್ಟರ್​-135ರಲ್ಲಿನ ಚೌಧರಿ ಫಾರ್ಮ್​ ಹೌಸ್​ನಲ್ಲಿ ನಡೆದಿದೆ.
ಯುವಕ-ಯುವತಿಯರು ಮಾತ್ರವಲ್ಲದೇ ಪಾರ್ಟಿಯನ್ನು ಆಯೋಜಿಸಿದ್ದ ಐವರನ್ನು ಸಹ ನೊಯ್ಡಾ ಪೊಲೀಸರು ಬಂಧಿಸಿದ್ದಾರೆ. ಎಲ್ಲರು ಸಹ ಪಾನಮತ್ತ ಸ್ಥಿತಿಯಲ್ಲಿದ್ದು, ಸ್ಥಳದಲ್ಲಿ ಭಾರಿ ಪ್ರಮಾಣದ ಹರಿಯಾಣ ಮರ್ಕಾ ಮದ್ಯವನ್ನು ಪತ್ತೆಹಚ್ಚಲಾಗಿದೆ. ಪೊಲೀಸರು ಮಾತ್ರವಲ್ಲದೆ ಬಂಧಿತರ ವಿರುದ್ಧ ಅಬಕಾರಿ ಇಲಾಖೆಯು ಸಹ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣ ಸಂಬಂಧ ಮಾತನಾಡಿರುವ ಉಪ ಪೊಲೀಸ್​ ಆಯುಕ್ತ ರಾಜೇಶ್​ ಎಸ್​, ಲಾಕ್​ಡೌನ್​ ಹೊರತಾಗಿಯು ಬಹುದೊಡ್ಡ ಸಂಖ್ಯೆಯಲ್ಲಿ ಭಾನುವಾರ ರಾತ್ರಿ ಥಾಣಾ ಹೆದ್ದಾರಿಯ ಸೆಕ್ಟರ್​ 135ರಲ್ಲಿರುವ ಚೌಧರಿ ಫಾರ್ಮ್​ ಹೌಸ್​ನಲ್ಲಿ ಸೇರಿ ಪಾರ್ಟಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಪಾರ್ಮ್​ ಹೌಸ್​ಗೆ ಆಗಮಿಸಿದೆವು. ಫಾರ್ಮ್​ ಹೌಸ್​ ರಿತೇಶ್​ ಛದಾ ಹೆಸರಿನಲ್ಲಿದೆ ಎಂದು ತಿಳಿಸಿದರು.
ಈ ವೇಳೆ 46 ಪುರುಷರು ಹಾಗೂ 15 ಯುವತಿಯರನ್ನು ಬಂಧಿಸಲಾಗಗಿದೆ. ಪಾರ್ಟಿ ಆಯೋಜನೆ ಮಾಡಿದ್ದ ಸೊಹೈಲ್​, ಅಂಕುರ್​, ಬಿಲಾಲ್​, ವಕಿಲ್​, ಶಹನವಾಜ್​ ಹಾಗೂ ಧರ್ಮಾವೀರ್ ಎಂಬುವರನ್ನು ಬಂಧಿಸಲಾಗಿದೆ. ಈ ವೇಳೆ ಭಾರಿ ಪ್ರಮಾಣ ಹರಿಯಾನ ಮರ್ಕಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪಾರ್ಟಿ ಆಯೋಜಿಸಿದವರು ಹಾಗೂ ಅದರಲ್ಲಿ ಭಾಗವಹಿಸಿದವರ ಮೇಲೆ ಕಠಿಣ ಕ್ರಮವನ್ನು ಜರಗಿಸಲಾಗುವುದು ಎಂದು ಡಿಎಸ್​ಪಿ ಹೇಳಿದರು.(ಏಜೆನ್ಸೀಸ್​)
ಬಾಬಿ ಡಿಯೋಲ್ ಪುತ್ರನ 20ನೇ ಜನ್ಮದಿನ; ಆಕರ್ಷಕ ರೂಪ ಮೆಚ್ಚಿದ ನೆಟ್ಟಿಗರು

ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಮಹಿಳೆ ಮಾಡಿದ ಕೆಲಸವೇನು ನೋಡಿ..

ಭಾವಿ ಪತಿಯೊಂದಿಗೆ ಶಾಪಿಂಗ್ ಹೋದವಳು ರಸ್ತೆ ಬದಿ ಹೆಣವಾಗಿ ಸಿಕ್ಕಳು! ಮದುವೆಗೆ ಮೊದಲೇ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nineteen =
Remember me
