ಪತ್ತನಂತಿಟ್ಟ:ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಅಸುನೀಗಿದ್ದಾಳೆ.
ಕೇರಳದ ಅಂಬಾಲಪುಳದಲ್ಲಿ ಈ ಘಟನೆ ನಡೆದಿದೆ. ಥೋಪುಂಪಡಿ ನಿವಾಸಿ ಸುನೀಶ್​ ಅಲಿಯಾಸ್​ ಅಪ್ಪು (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 25ರ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಕಾಂಪೌಂಡ್​ ಗೋಡೆಯನ್ನು ಹತ್ತಿ ಮನೆಯ ಆವರಣಕ್ಕೆ ನುಗ್ಗಿದ ಆರೋಪಿ ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆಯುತ್ತಿದ್ದಂತೆ ವೃದ್ಧೆಯ ಮೇಲೆರಗಿ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ವೃದ್ಧೆ ಒಬ್ಬಳೇ ಇರುವುದನ್ನು ಗಮನಿಸಿ ಆರೋಪಿ ಸಂಚು ಹಾಕಿ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.
ಅತ್ಯಾಚಾರಕ್ಕೆ ಒಳಗಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಸಂಬಂಧಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ನರ್ಸ್​ ಬಳಿ ನಡೆದ ಎಲ್ಲ ಘಟನೆಯನ್ನು ವೃದ್ಧೆ ವಿವರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಪೆರುಮಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಘಟನೆ ನಡೆದ ಮೂರು ದಿನಗಳ ನಂತರ ವೃದ್ಧೆ ಕೊನೆಯುಸಿರೆಳೆದಿದ್ದಾರೆ.
ಸಾವಿಗೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ದೃಢಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪತಿ ಮತ್ತು ಮಗನನ್ನು ವೃದ್ಧೆ ಅಗಲಿದ್ದಾರೆ. ಆರೋಪಿ ಸುನೀಶ್​ಗೆ ವೃದ್ಧೆಯ ಬಗ್ಗೆ ಮೊದಲಿಂದಲೂ ತಿಳಿದಿತ್ತು ಮತ್ತು ಪರಿಚಯವೂ ಇತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ.
ಈ ಪ್ರಕರಣಕ್ಕೆ ಸಾಕ್ಷಿಗಳಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸುನೀಶ್ ಪತ್ತನಂತಿಟ್ಟದಲ್ಲಿರುವ ತನ್ನ ಸ್ಥಳದಿಂದ ಕೊಚ್ಚಿಗೆ ತೆರಳಿರುವುದು ಪತ್ತೆಯಾಗಿದ್ದು, ಅಲ್ಲಿಯೇ ಬಂಧಿಸಿ ಕರೆತರಲಾಗಿದೆ.(ಏಜೆನ್ಸೀಸ್​)
ತಾಜ್ ಮಹಲ್ ಕೂಡ ಹಿಂದೂ ದೇವಸ್ಥಾನ ಆಗಿತ್ತು ಎಂಬುದಕ್ಕೆ ಪುರಾವೆಗಳಿವೆ!

ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಂದ್ರೆ ಜಾಸ್ತಿ ಹಣ ಮಾಡ್ಬೇಡಿ, ಇಲ್ಲಾಂದ್ರೆ ಈ ರೀತಿ ಆಗುತ್ತೆ ಅಂದ್ರು ಕೆಜಿಎಫ್​ ಬಾಬು!

ಐಷಾರಾಮಿ ಜೀವನಕ್ಕಾಗಿ ಕೆಟ್ಟ ಕೆಲ್ಸಕ್ಕೆ ಇಳಿದಿದ್ದ ಯೂಟ್ಯೂಬರ್ ಅರೆಸ್ಟ್​: ಮನೆಯಲ್ಲಿ ಮೂಟೆಗಟ್ಟಲೆ ಚಪ್ಪಲಿ, ಶೂಗಳು ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
