ಲಖನೌ:ಡಿವೈಡರ್​ಗೆ ಡಿಕ್ಕಿ ಹೊಡೆದು ಎದುರು ಬರುತ್ತಿದ್ದ ಟ್ರಕ್​ಗೆ ಗುದ್ದಿದ ಪರಿಣಾಮ ಆಂಬ್ಯುಲೆನ್ಸ್​ನಲ್ಲಿದ್ದ 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತರಲ್ಲಿ 6 ಮಂದಿ ಒಂದೇ ಕುಟುಂಬದವರು. ದೆಹಲಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಇಂದು (ಮೇ.31) ಮುಂಜಾನೆ ತಮ್ಮ ಊರು ಪಿಲ್ಭಿಟ್​ಗೆ ಆಂಬ್ಯುಲೆನ್ಸ್​ನಲ್ಲಿ ಹಿಂದಿರುಗುವಾಗ​ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್​, ಮೊದಲು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಎದುರು ಬರುತ್ತಿದ್ದ ಟ್ರಕ್​​ಗೆ ಗುದ್ದಿದೆ. ಪರಿಣಾಮ ಚಾಲಕ ಹಾಗೂ ಒಂದೇ ಕುಟುಂಬದ 6 ಮಂದಿ ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಬಂಧ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಿದ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮೃತರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.(ಏಜೆನ್ಸೀಸ್​)
ಕೆ.ಎಲ್​. ರಾಹುಲ್​ ಒಳಉಡುಪು ಜಾಹೀರಾತು ನೋಡಿ ನಟಿ ಕಸ್ತೂರಿ ಮಾಡಿದ ಹಾಟ್​ ಕಾಮೆಂಟ್​ ವೈರಲ್​!

ಮಗಳ ಶಾಲಾ ದಾಖಲಾತಿ ಅರ್ಜಿಯಲ್ಲಿ ಜಾತಿ, ಧರ್ಮ ಕಾಲಂಗಳನ್ನು ಖಾಲಿ ಬಿಟ್ಟ ದಂಪತಿ! ನಂತರ ನಡೆದಿದ್ದಿಷ್ಟು…

ರವಿಚಂದ್ರನ್ ಆ್ಯಂಡ್​​ ಸನ್ಸ್ ಈಗ ಬ್ಯಾಡ್​ಬಾಯ್ಸ್​; ಮಕ್ಕಳ ಜತೆ ಸಿನಿಮಾ ಘೋಷಿಸಿದ ಕ್ರೇಜಿಸ್ಟಾರ್

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × three =
Remember me
