ಚಂಡೀಗಢ:ಗಣೇಶ ನಿಮಜ್ಜನ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಹರಿಯಾಣದಲ್ಲಿ ಶುಕ್ರವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋನಿಪತ್​ನಲ್ಲಿ ಮೂವರು ಮತ್ತು ಮಹೇಂದ್ರಗಢದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆಗಸ್ಟ್​ 31ರಂದು ಆರಂಭವಾದ ಗಣೇಶ ಹಬ್ಬಕ್ಕೆ ಹರಿಯಾಣದಲ್ಲಿ ನಿನ್ನೆ ತೆರೆಬಿದ್ದಿದೆ. ರಾಜ್ಯಾದ್ಯಂತ ಸಾಕಷ್ಟು ಗಣೇಶನ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ನೀರಿನಲ್ಲಿ ಬಿಡಲಾಯಿತು.
ಸೋನಿಪತ್​ನ ಮಿಮಾರ್ಪುರ್​ ಘಾಟ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಪುತ್ರ ಮತ್ತು ಸೋದರಸಂಬಂಧಿಯೊಂದಿಗೆ ಗಣೇಶ ಮೂರ್ತಿಯನ್ನು ಹಿಡಿದು ನೀರಿನಲ್ಲಿ ಇಳಿದಾಗ ಮೂವರು ಸಹ ನೀರುಪಾಲಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹೇಂದ್ರಗಢದಲ್ಲಿ ಸುಮಾರು 9 ಮಂದಿ ಗಣೇಶ ಮೂರ್ತಿಯನ್ನು ಬಿಡಲು ಝಾಗಡಾಲಿ ಗ್ರಾಮದ ಕನಿನಾ ಮತ್ತು ರೆವಾರಿ ರಸ್ತೆಯ ಪಕ್ಕದಲ್ಲಿರುವ ಕಾಲುವೆಯ ನೀರಿಗೆ ಇಳಿದರು. ಈ ವೇಳೆ ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ 4 ಮಂದಿ ನೀರುಪಾಲಾಗಿದ್ದಾರೆ. ಕಾಲುವೆಯ ನೀರಿನಿಂದ ಎಂಟು ಮಂದಿಯನ್ನು ರಾತ್ರಿಯೇ ಹೊರಗೆಳೆಯಲಾಯಿತು. ಇದರಲ್ಲಿ 4 ಮಂದಿ ಮೃತಪಟ್ಟಿದ್ದಾರೆ.
ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ಕಾಲುವೆಯಲ್ಲಿ ಮುಳುಗಿ ಹಲವರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬದವರ ಜೊತೆ ನಾವೆಲ್ಲರೂ ನಿಂತಿದ್ದೇವೆ. NDRF ತಂಡವು ಅನೇಕ ಜನರನ್ನು ಮುಳುಗುವಿಕೆಯಿಂದ ರಕ್ಷಿಸಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಹರಿಯಾಣ ಸಿಎಂ ಎಂ.ಎಲ್​. ಖಟ್ಟರ್ ಟ್ವೀಟ್​ ಮಾಡಿದ್ದಾರೆ.
महेंद्रगढ़ और सोनीपत जिले में गणपति विसर्जन के दौरान नहर में डूबने से कई लोगों की असामयिक मृत्यु का समाचार हृदयविदारक है।
इस कठिन समय में हम सभी मृतकों के परिजनों के साथ खड़े हैं।
NDRF की टीम ने कई लोगों को डूबने से बचा लिया है, मैं उनके शीघ्र स्वस्थ होने की प्रार्थना करता हूँ।
— Manohar Lal (@mlkhattar)September 9, 2022

ಮಹಾಮಾರಿ ಕರೊನಾ ಸಾಂಕ್ರಾಮಿಕ ಪ್ರೇರಿತ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷ ಆಚರಣೆಯನ್ನು ಮೊಟಕುಗೊಳಿಸಲಾಗಿತ್ತು. ನಿರ್ಬಂಧಗಳು ಮುಕ್ತವಾಗಿ ಈ ವರ್ಷ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.(ಏಜೆನ್ಸೀಸ್​)
ರಾಹುಲ್​ ಗಾಂಧಿಯ ಟೀ ಶರ್ಟ್​ ಅಣುಕಿಸಿದ ಬಿಜೆಪಿಗೆ ಕಾಂಗ್ರೆಸ್​ ಕೊಟ್ಟ ತಿರುಗೇಟು ಹೀಗಿದೆ….

ಬೋರ್​ವೆಲ್​ನಲ್ಲಿ ಲೂಟಿ: ನಕಲಿ ಫೋಟೋ ಮತ್ತು ಬಿಲ್

ದೇವರ ಆಟ ಬಲ್ಲವರಾರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
