ಹೈದರಾಬಾದ್​:ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 8 ಮಂದಿ ದುರಂತ ಸಾವಿಗೀಡಾಗಿ, ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಿಕಂದರಾಬಾದ್​ನಲ್ಲಿ ಇಂದು (ಸೆ.13) ಮುಂಜಾನೆ ನಡೆದಿದೆ.
ಸಿಕಂದರಾಬಾದ್​ನಲ್ಲಿರುವ ರುಬಿ ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನ ನೆಲಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಮೊಲದಲನೇ ಮತ್ತು ಎರಡನೇ ಮಹಡಿಗೂ ಹರಡಿ, 8 ಮಂದಿಯನ್ನು ಬಲಿಪಡೆದುಕೊಂಡಿದೆ.
ಘಟನೆ ನಡೆದಂತಹ ಸಮಯದಲ್ಲಿ ಶೋರೂಮ್​ನಲ್ಲಿ ಸುಮಾರು 25 ಮಂದಿ ಇದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕ್ರೇನ್​ ಲ್ಯಾಡರ್ಸ್​ ಬಳಿಕ ಅನೇಕ ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಸ್ಥಳೀಯ ಜನರು ಕೂಡ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಕೆಲವರು ಮೊದಲು ಮತ್ತು ಎರಡನೇ ಮಹಡಿಯಿಂದ ಕೆಳಗಡೆ ಜಿಗಿದಿರುವ ವಿಡಿಯೋಗಳು ಸಹ ವೈರಲ್​ ಆಗಿವೆ. ಘಟನೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಗೃಹ ಸಚಿವ ಮೊಹಮ್ಮದ್​ ಮೆಹ್ಮೂದ್​ ಅಲಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜನರನ್ನು ಕಾಪಾಡಲು ಅಗ್ನಿಶಾಮಕ ಸಿಬ್ಬಂದಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ದಟ್ಟ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೇ ಕೆಲವರು ಮೃತಪಟ್ಟಿದ್ದಾರೆ ಎಂದು ಮೊಹಮ್ಮದ್​ ಮೆಹ್ಮೂದ್​ ಅಲಿ ಹೇಳಿದರು.(ಏಜೆನ್ಸೀಸ್​)
ಮರೆಯಾದ ಮಾನವೀಯತೆ: ಯುವಕ ನೇಣು ಹಾಕಿಕೊಳ್ಳುವುದನ್ನು ತಡೆಯದೇ ವಿಡಿಯೋ ಮಾಡಿದ ಭೂಪರು

ಹಾವು ಕಚ್ಚಿ ಮಹಿಳೆ ಸಾವು: ಸರಿಯಾದ ಸಮಯಕ್ಕೆ ವೈದ್ಯರು ಸಿಗದೇ ಮಹಿಳೆಯ ದುರಂತ ಅಂತ್ಯ

ಈ ಒಂದು ಕಾರಣಕ್ಕೆ ಮದ್ವೆಯಾಗಲು ತುಂಬಾ ಭಯವಂತೆ! ಸಂದರ್ಶನದಲ್ಲಿ ಮನದ ಮಾತು ಬಿಚ್ಚಿಟ್ಟ ನಟ ಸಿಂಬು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + one =
Remember me
