ಅಹಮದಾಬಾದ್​:ಮದುವೆಯಾದ 8 ವರ್ಷದ ಬಳಿಕ ಗುಜರಾತಿನ ವಡೋದರಾ ಮೂಲದ 40 ವರ್ಷದ ವಿವಾಹಿತೆಗೆ ತನ್ನ ಪತಿ ಈ ಹಿಂದೆ ಮಹಿಳೆಯಾಗಿದ್ದ ಮತ್ತು ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಾಕಿಂಗ್​ ಸಂಗತಿ ಬಯಲಾಗಿದೆ.
ಗೋತ್ರಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಾಥಮಿಕ ಮಾಹಿತಿ ವರದಿ (ಎಫ್​ಐಆರ್​) ಪ್ರಕಾರ ಶೀತಲ್​ ಎಂಬಾಕೆ, ವಿರಾಜ್​ ವರ್ಧನ್​ (ಈ ಹಿಂದೆ ವಿಜಯತಾ) ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೆ, ಎಫ್​ಐಆರ್​ನಲ್ಲಿ ವಿರಾಟ್​ ವರ್ಧನ್​ ಕುಟುಂಬದ ಸದಸ್ಯರ ಹೆಸರನ್ನು ಸಹ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿರುವ ಸಂತ್ರಸ್ತೆ ಶೀತಲ್​, 9 ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ವಿರಾಜ್​ ವರ್ಧನ್​ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ನನ್ನ ಮಾಜಿ ಪತಿ ಅಪಘಾತದಲ್ಲಿ ತೀರಿಹೋದರು. 14 ವರ್ಷದ ಮಗಳು ಹಾಗೂ ನನ್ನನ್ನು ಅಗಲಿದರು. ಇದಾದ ಬಳಿಕ ವಿರಾಜ್​ ವರ್ಧನ್​ ಪರಿಚಯವಾಗಿ ಇಬ್ಬರು ಮದುವೆಯಾದೆವು ಎಂದು ಹೇಳಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲಿ 2014ರಲ್ಲಿ ಇಬ್ಬರು ಔಪಚಾರಿಕವಾಗಿ ಮದುವೆ ಆದೆವು. ಇದಾದ ಬಳಿಕ ಕಾಶ್ಮೀರಕ್ಕೆ ಹನಿಮೂನ್​ಗೂ ಹೋದೆವು. ಆದಾಗ್ಯೂ, ಆ ಮನುಷ್ಯ ಮದುವೆಯನ್ನು ಪರಿಪೂರ್ಣ ಮಾಡಲೇ ಇಲ್ಲ. ಹನಿಮೂನ್​ ವ್ಯರ್ಥವಾಯಿತು. ಪ್ರಶ್ನಿಸಿದ್ದಕ್ಕೆ ಕ್ಷಮೆ ಒಂದನ್ನು ಬಿಟ್ಟರೆ, ಬೇರೇನು ಕೇಳುತ್ತಿರಲಿಲ್ಲ. ಮನವೊಲಿಸಲು ಮುಂದಾದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ ಇರುವಾಗ ನಡೆದ ಅಪಘಾತದಿಂದ ಲೈಂಗಿಕ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾಗಿ ಹೇಳಿದ ಎಂದು ಶೀತಲ್​ ಎಫ್​ಐಆರ್​ನಲ್ಲಿ ತಿಳಿಸಿದ್ದಾರೆ.
ಸಣ್ಣ ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣ ಚೇತರಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಜನವರಿ 2020ರಲ್ಲಿ ಸ್ಥೂಲಕಾಯತೆಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಹೇಳಿದರು. ಆದರೆ, ದೂರದಲ್ಲಿದ್ದುಕೊಂಡು ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತುಂಬಾ ದಿನಗಳ ನಂತರ ನನಗೆ ಹೇಳಿದರು ಎಂದು ಶೀತಲ್​ ಬಹಿರಂಗಪಡಿಸಿದ್ದಾರೆ.
ಇದಾದ ಬಳಿಕ ಶೀತಲ್​ ಜೊತೆ ಬಲವಂತವಾಗಿ “ಅಸ್ವಾಭಾವಿಕ ಲೈಂಗಿಕತೆ” ಪ್ರಾರಂಭಿಸಿದ ವಿರಾಜ್​, ಸತ್ಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾಗಿ ಮಾಧ್ಯಮಗಳ ಮುಂದೆ ಶೀತಲ್​ ಬಿಚ್ಚಿಟ್ಟಿದ್ದಾರೆ.
ದೆಹಲಿಯ ನಿವಾಸಿಯಾಗಿರುವ ಆರೋಪಿಯನ್ನು ವಡೋದರಾಕ್ಕೆ ಕರೆತರಲಾಗಿದೆ ಎಂದು ಗೋತ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಎಂಕೆ ಗುರ್ಜರ್ ತಿಳಿಸಿದ್ದಾರೆ.(ಏಜೆನ್ಸೀಸ್​)
ಆಫ್ಘಾನ್​ನಲ್ಲಿ ಅಡಗಿದ್ದಾನೆ ಜಾಗತಿಕ ಉಗ್ರ ಮಸೂದ್​ ಅಜರ್: ಪಾಕ್​ ವಿದೇಶಾಂಗ ಸಚಿವರ ಹೇಳಿಕೆ

ಬ್ರೇಕ್ ಇನ್​ಸ್ಪೆಕ್ಟರ್​ಗಳಿಗೆ ಕೊನೆಗೂ ಮುಂಬಡ್ತಿ ಭಾಗ್ಯ; 15 ವರ್ಷಗಳ ಕಾನೂನು ಹೋರಾಟಕ್ಕೆ ಜಯ

ಮಾನ್ಸೂನ್​ನಲ್ಲೊಂದು ಪ್ರೇಮರಾಗ…; ವಿಜಯವಾಣಿ ಸಿನಿಮಾ ವಿಮರ್ಶೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
