ಪೊಲ್ಲಾಚಿ (ತಮಿಳುನಾಡು):ಸಾಮಾನ್ಯವಾಗಿ ಅಪ್ತಾಪ್ತ ಬಾಲಕಿಯರ ಮೇಲಿನ ವಂಚನೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಹೆಚ್ಚಾಗಿ ನೋಡಿರುತ್ತೇವೆ. ಆದರೆ, ತಮಿಳುನಾಡಿನ ಪೊಲ್ಲಾಚಿಯಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ಅಪ್ರಾಪ್ತನ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿಯೊಬ್ಬಳು ಆತನನ್ನು ಮದುವೆ ಆಗಿರುವ ಘಟನೆ ನಡೆದಿದೆ.
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡ್ತಿದ್ದ ಯುವತಿ, ತಾನು ವಾಸವಿದ್ದ ಏರಿಯಾದಲ್ಲಿದ್ದ 17 ವರ್ಷದ 12ನೇ ತರಗತಿ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದಳು. ಅಪ್ರಾಪ್ತ ಒಮ್ಮೆ ಪೆಟ್ರೋಲ್​ ಹಾಕಿಕೊಳ್ಳಲು ಬಂಕ್​ಗೆ ಬಂದಿದ್ದಾನೆ. ಒಂದೇ ಏರಿಯಾದವರಾದ್ದರಿಂದ ಯುವತಿ ಆಯುವತಿ ಹಾಗೂ ಅಪ್ರಾಪ್ತನ ನಡುವೆ ಪರಿಚಯವಾಗಿದೆ. ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿದೆ. ನಂತರದ ದಿನಗಳಲ್ಲಿ ಅದೇ ಸ್ನೇಹ ಪ್ರೀತಿಯ ರೂಪ ಪಡೆದುಕೊಂಡಿದೆ.
ಈ ವಿಚಾರ ಅಪ್ರಾಪ್ತ ಬಾಲಕನ ಪಾಲಕರಿಗೆ ತಿಳಿದಿದೆ. ಇದಾದ ಬಳಿಕ ಯುವತಿಯ ಮನೆಗೆ ತೆರಳಿದ ಬಾಲಕನ ಪಾಲಕರು ತಮ್ಮ ಮಗನೊಂದಿಗೆ ಇರುವ ಸಂಬಂಧವನ್ನು ಕಡಿದುಕೊಳ್ಳುವಂತೆ ಆಕೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಅದ್ಯಾವುದಕ್ಕೂ ಆಯುವತಿ ಕ್ಯಾರೆ ಅನ್ನದೇ ತನ್ನ ಸಂಬಂಧವನ್ನು ಮುಂದುವರಿಸಿದ್ದಾಳೆ.
ಇದಾದ ಕೆಲವೇ ದಿನಗಳಲ್ಲಿ ಬಾಲಕ ಅನಾರೋಗ್ಯಕ್ಕೀಡಾಗುತ್ತಾನೆ. ನಂತರ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆಯುವತಿ ಆಸ್ಪತ್ರೆಗೂ ಬಂದು ನೋಡಿಕೊಂಡು ಹೋಗಿರುತ್ತಾಳೆ. ಕೆಲವೇ ದಿನಗಳಲ್ಲಿ ಬಾಲಕ ಡಿಸ್ಚಾರ್ಜ್​ ಆಗಿ ಮನೆಗೆ ಹಿಂದಿರುಗುತ್ತಾನೆ. ಇದರ ಬೆನ್ನಲ್ಲೇ ಬಾಲಕನನ್ನು ಹತ್ತಿರದ ದೇವಸ್ಥಾನವೊಂದಕ್ಕೆ ಕರೆದೊಯ್ಯುವ ಆಯುವತಿ ನಾವಿಬ್ಬರು ಮದುವೆ ಆಗೋಣ ಇಲ್ಲದಿದ್ದರೆ ನಮ್ಮಿಬ್ಬರನ್ನು ಬೇರೆ ಮಾಡುತ್ತಾರೆಂದು ಹೇಳಿದ್ದಾಳೆ. ಇದಾದ ಬಳಿಕ ಇಬ್ಬರು ಕೊಯಮತ್ತೂರಿನ ಒಂದು ಬಾಡಿಗೆ ಮನೆಗೆ ತೆರಳಿದ್ದಾರೆ.
ಇತ್ತ ಮಗ ಕಾಣದಿರುವುದನ್ನು ನೋಡಿದ ಪಾಲಕರು ಸಂಶಯಗೊಂಡು ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ದೂರು ನೀಡುತ್ತಾರೆ. ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ತನಿಖೆ ಆರಂಭಿಸುತ್ತಾರೆ. ಕೊನೆಗೆ ಇಬ್ಬರನ್ನು ಕೊಯಮತ್ತೂರಿನಲ್ಲಿ ವಶಕ್ಕೆ ಪಡೆಯುವ ಪೊಲೀಸರು ಊರಿಗೆ ವಾಪಸ್​ ಕರೆತರುತ್ತಾರೆ. ಬಾಲಕನನ್ನು ವಿಚಾರಿಸಿದಾಗ ಆಕೆ ನನ್ನನ್ನು ಬಲವಂತವಾಗಿ ಕರೆದೊಯ್ದಿದ್ದಳು ಎಂದಿದ್ದಾನೆ. ಅಲ್ಲದೆ, ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಳು ಎಂದು ತಿಳಿಸಿದ್ದಾನೆ.
ಇದೀಗ ಯುವತಿಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಎಸ್​ಪಿ ಸೆಲ್ವನಾಗರತ್ನಂ ಹೇಳಿದ್ದಾರೆ. ಓರ್ವ ಯುವತಿ ಮದುವೆ ಹೆಸರಲ್ಲಿ ಅಪ್ರಾಪ್ತನಿಗೆ ವಂಚಿಸಿದ ಪ್ರಕರಣ ಇದೇ ಮೊದಲೆಂದು ತಿಳಿಸಿದ್ದಾರೆ. ಸದ್ಯ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ.(ಏಜೆನ್ಸೀಸ್​)
ಡ್ರಾಪ್ ಕೊಡ್ತೇನೆ ಅಂತ ಹೇಳಿ ಕರ್ಕೊಂಡು ಹೋಗಿ ರೇಪ್ ಮಾಡ್ದ; ಎರಡು ತಿಂಗಳ ಬಳಿಕ ದೂರು ಕೊಟ್ಟ ಮಹಿಳೆ

ಗ್ಯಾಂಗ್​ರೇಪ್ ಬೆನ್ನಿಗೇ ಮೈಸೂರಲ್ಲಿ ಮತ್ತೊಂದು ಅತ್ಯಾಚಾರ; ದಸರಾ ತಯಾರಿ ಸಂದರ್ಭದಲ್ಲೇ ಸಾಂಸ್ಕೃತಿಕ ನಗರಿಗೆ ಕಳಂಕ

ಪರಿಚಿತನಿಂದಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ-ಅತ್ಯಾಚಾರ ಯತ್ನ; ಮೈಸೂರಿನಲ್ಲಿ ನಡೆದ ಪ್ರಕರಣದ ಆರೋಪಿಯ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
