ನವದೆಹಲಿ:ಬೈಕ್​ ಮೇಲೆ ನಾಯಿ, ಬೆಕ್ಕು ಸೇರಿದಂತೆ ಕೆಲ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದನ್ನು ಕಂಡಿದ್ದೇವೆ. ಆದರೆ, ಎಮ್ಮೆ ಮತ್ತು ಹಸುಗಳಂತಹ ದೈತ್ಯ ಪ್ರಾಣಿಗಳನ್ನು ಬೈಕ್​ ಮೇಲೆ ಕರೆದುಕೊಂಡು ಹೋಗುವುದನ್ನು ಎಂದಾದರೂ ನೀವು ನೋಡಿದ್ದೀರಾ? ಬೇಕಾದರೆ, ಕರುಗಳನ್ನು ಸಹ ತೆಗೆದುಕೊಂಡು ಹೋಗಬಹುದು ಆದರೆ, ಎಮ್ಮೆ, ಹಸುಗಳನ್ನು ಬೈಕ್​ನಲ್ಲಿ ಸಾಗಿಸುವುದೆಂದರೆ ಅದು ಅಸಾಧ್ಯದ ಮಾತು. ಆದರೆ, ಈ ವಿಡಿಯೋದಲ್ಲಿ ಅದು ಸಾಧ್ಯವಾಗಿದೆ.
ವ್ಯಕ್ತಿಯೊಬ್ಬ ಗೂಳಿಯೊಂದನ್ನು ಬೈಕ್​ನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಲ್ಲದೆ, ಇದು ಸಾಮನ್ಯವಲ್ಲ… ನಿಜಕ್ಕೂ ನೀವು ಗ್ರೇಟ್​ ಎನ್ನುವ ಮೂಲಕ ಬೈಕ್​ ಸವಾರನನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಗೂಳಿಯು ಬೈಕ್​ನ ಹಿಂಬದಿಯ ಸೀಟಿನಲ್ಲಿ ಆರಾಮಾಗಿ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ನೋಡುಗರಿಗೆ ಅಚ್ಚರಿ ಉಂಟುಮಾಡಿದೆ. ಕೆಳಗೆ ಬೀಳದಿರಲೆಂದು ಗೂಳಿಯನ್ನು ಹಗ್ಗದಿಂದ ಕಟ್ಟಿರುವುದು ಸಹ ವಿಡಿಯೋದಲ್ಲಿದೆ.
ವಿಡಿಯೋವನ್ನು ಅನಿಮಲ್ಸ್​ ಇನ್​ ದಿ ನೇಚರ್​ ಟುಡೆ (Animalsinthenaturetoday) ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ, ದೊಡ್ಡ ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡರೂ ಅವು ಅಲಗಾಡದೇ ಅಥವಾ ಚಲಿಸದೇ ಇರದು. ಹೀಗಿರುವಾಗ ಒಬ್ಬನೇ ವ್ಯಕ್ತಿ ಕುಳಿತುಕೊಳ್ಳುವ ಸೀಟಿನಲ್ಲಿ ಗೂಳಿ ಯಾವುದೇ ಚಲನವಲನವಿಲ್ಲದೆ ಆರಾಮವಾಗಿ ಕುಳಿತಿರುವುದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಬೈಕ್ ಸವಾರ ಸಮತೋಲಿತವಾಗಿ ಬೈಕ್ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬದಾಗಿದೆ.

A post shared by All in Animals (@animalsinthenaturetoday)

ವಿಡಿಯೋ ನೋಡಿದ ನೆಟ್ಟಿಗರು, ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೆಟ್ಟಿಗನೋರ್ವ ನಾನು ಈ ರೀತಿಯ ವಿಡಿಯೋವನ್ನು ಹಿಂದೆಂದೂ ನೋಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದೊಂದು ಸಾಹಸ ಎಂದು ಮತ್ತೊರ್ವ ನೆಟ್ಟಿಗ ಕಮೆಂಟಿಸಿದ್ದಾನೆ. ಇದು ತಮಾಷೆಯಲ್ಲ, ಸೂಪರ್ ಅನಿಮಲ್ ಟ್ಯಾಕ್ಸಿ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾನೆ.(ಏಜೆನ್ಸೀಸ್​)
ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

1 ಕೋಟಿ ರೂ. ಮೌಲ್ಯದ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟ ಗಾರೆ ಕೆಲಸದ ಮೇಸ್ತ್ರಿ! ಕಾರಣ ಹೀಗಿದೆ…

ಪೊಲೀಸ್ ನೇಮಕಾತಿಗೆ ಸರ್ಜರಿ: ಪರೀಕ್ಷೆ ನಿರ್ವಹಣೆಗೆ ಉನ್ನತ ಸಮಿತಿ ರಚನೆ; ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 1 =
Remember me
